ದಿನಕ್ಕೊಂದು ಕಥೆ 1067
*🌻ದಿನಕ್ಕೊಂದು ಕಥೆ 🌻* *ಕೊರಳಲ್ಲಿ ಚಿನ್ನದ ಪದಕ ಇದ್ದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು!* ಲಂಡನ್ನಿನ ಬರ್ಮಿಂಗ್ಹ್ಯಾಮ್ ನಗರದಲ್ಲಿ ನಡೆದ ಕಾಮನವೆಲ್ತ್ ಗೇಮ್ಸನ ಬಾಕ್ಸಿಂಗ್ ವಿಭಾಗದ ಪದಕ ಪ್ರದಾನ ಕಾರ್ಯಕ್ರಮವು ಒಂದು ಭಾವುಕ ಕ್ಷಣಕ್ಕೆ ಸಾಕ್ಷಿ ಆಯಿತು! ಆಕೆ ನೀತು ಗಂಘಾಸ್. ವಯಸ್ಸು 21. ಭಾರತದ ಬಾಕ್ಸಿಂಗನ ನವೋದಿತ ತಾರೆ. ಇದು ಆಕೆಯ ಮೊದಲ ಕಾಮನವೆಲ್ತ್ ಗೇಮ್ಸ್ ಆಗಿತ್ತು. ಆಕೆಯನ್ನು ಈಗಲೆ ಜನರು ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್ ಜೊತೆ ಹೋಲಿಕೆ ಮಾಡಲು ತೊಡಗಿದ್ದರು. ಕೊರಳಲ್ಲಿ ಚಿನ್ನದ ಪದಕವನ್ನು ತೋಡಿಸಿದಾಗ ಭಾರತದ ತ್ರಿವರ್ಣ ಧ್ವಜ ಮೇಲೇರುವ ಕ್ಷಣ, ಬ್ಯುಗಲ್ ರಾಷ್ಟ್ರಗೀತೆ ಜನಗಣಮನವನ್ನು ನುಡಿಸುವಾಗ ಆಕೆಯ ಕಣ್ಣಲ್ಲಿ ಗಂಗಾ ಭಾಗೀರಥಿ ಎಲ್ಲವೂ ಸುರಿಯಿತು. ಆದರೂ ಆಕೆಯ ಕಣ್ಣು ಯಾರನ್ನೋ ಹುಡುಕುತ್ತಿತ್ತು! ಹೌದು, ಅವಳು ಹುಡುಕುತ್ತ ಇದ್ದದ್ದು ಅವಳ ಪ್ರೀತಿಯ ಅಪ್ಪನನ್ನು! ಅವರ ಹೆಸರು ಜೈ ಭಗವಾನ್. ಹರ್ಯಾಣ ಸರಕಾರಿ ಇಲಾಖೆಯಲ್ಲಿ ಒಬ್ಬ ಸಾಮಾನ್ಯ ನೌಕರ ಆಗಿದ್ದ ಅವರು ತನ್ನ ಮಗಳ ಸಾಧನೆಗೆ ಒತ್ತಾಸೆ ಆಗಿ ನಿಂತವರು. ಕಳೆದ ಮೂರು ವರ್ಷಗಳಿಂದ ಅವರು ವೇತನವಿಲ್ಲದ ರಜೆ ಹಾಕಿ ಮಗಳ ಜೊತೆಗೆ ಓಡಾಟ ಮಾಡುತ್ತಿದ್ದರು! ಮಗಳ ಕೋಚಿಂಗ್, ಆಹಾರ, ಪ್ರಯಾಣ ಎಲ್ಲ ಉಸ್ತುವಾರಿ ಕೂಡ ಅವರದ್ದೇ! ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಮಗಳ ಜೊತೆ ಬಾಕ್ಸಿಂಗ್ ರಿಂಗ್ಸಗೆ ಬರುವ ಅಪ್ಪ ಮಧ್ಯ