ದಿನಕ್ಕೊಂದು ಕಥೆ. 157
🌻🌻 *ದಿನಕ್ಕೊಂದು ಕಥೆ*🌻🌻 ಒಬ್ಬ ರಾಜ ಮತ್ತು ಮಂತ್ರಿ ಕಾಡಿನಲ್ಲಿ ಬೇಟೆಗೆಂದು ಹೋಗ್ತಾ ಇರ್ತಾರೆ . ಮಾರ್ಗ ಮದ್ಯೆ ರಾಜ ಎಡವಿ ಬೀಳ್ತಾನೆ .ಎಡಗಾಲಿನ ಹೆಬ್ಬೆರಳ ಉಗುರು ಕಿತ್ತು ರಕ್ತ ಸುರಿಯೋಕೆ ಶುರುವಾಗುತ್ತೆ . ರಾಜ ಮಂತ್ರಿಯನ್ನು ಕರೆದು ನೋವಿನಿಂದ ತೋರಿಸುತ್ತಾನೆ ತನಗಾದ ಸ್ಥಿತಿಯನ್ನು . ಮಂತ್ರಿ ಏನು ಆಗಿಯೇ ಇಲ್ಲವೇನೋ ಅನ್ನೋ ಹಾಗೆ ವರ್ತಿಸುತ್ತ ಬನ್ನಿ ಪ್ರಭುಗಳೇ ಆಗೋದೆಲ್ಲ ಒಳ್ಳೆಯದಕ್ಕೆ ಅಂತ ಹೇಳ್ತಾನೆ .ರಾಜ ಕೆಂಡಮಂಡಲನಾಗಿ ...ನಕ್ಕನ್ ನಾನು ರಾಜ ನನ್ನ ಕಾಲು ಕಿತ್ತು ರಕ್ತ ಸುರಿದರೆ ಒಳ್ಳೆಯದಕ್ಕೆ ಅಂತಿಯ ನನ್ನ ಅನ್ನ ತಿಂದು ನಿನ್ನಂತ ಮಂತ್ರಿಯ ಅವಶ್ಯಕತೆ ನನಗಿಲ್ಲ ಎಂದು ಅಲ್ಲೇ ಪಕ್ಕದಲ್ಲ್ಲಿದ್ದ ಹಾಳು ಬಾವಿಗೆ ಆತನನ್ನು ತಳ್ಳಿ ಮುಂದಕ್ಕೆ ಸಾಗುತ್ತಾನೆ . ಕೆಲವೇ ಪರ್ಲಾಂಗು ತಲುಪುವಷ್ಟರಲ್ಲಿ ಕಾಡಿನ ಜನರ ಗುಂಪೊಂದು ರಾಜನನ್ನು ಸುತ್ತುವರೆದು ಹೊತ್ತೊಯ್ಯುತ್ತಾರೆ.ಆ ದಿನ ಕಾಡಿನ ದೇವಿಯ ಉತ್ಸವ ಇದ್ದು ದೇವಿಗೆ ನರಬಲಿ ಕೊಡಲು ಮನುಷ್ಯರನ್ನು ಹುಡುಕಿಕೊಂಡು ಬಂದಿದ್ದ ಕಾಡಿನ ಜನಗಳ ಕೈಗೆ ಒಂಟಿಯಾಗಿದ್ದ ರಾಜ ಅನಾಯಾಸವಾಗಿ ಸಿಕ್ಕಿ ಬಿಟ್ಟಿದ್ದ . ಸರಿ ಬಲಿ ಪೂಜೆ ಮಾಡಿ ಇನ್ನೇನು ರಾಜನನ್ನು ಕಡಿಯಬೇಕು ಕತ್ತಿ ಎತ್ತಿದವನಿಗೆ ರಾಜನ ಕಾಲ ಬೆರಳಲ್ಲಿ ರಕ್ತ ಒಸರುವುದು ಕಂಡಿತು .ಅವರ ಸಂಪ್ರದಾಯದ ಪ್ರಕಾರ ಅದಾಗಲೇ ಊನವಾಗಿರುವ ಅಥವಾ ರಕ್ತ ಸ್ರಾವ ಆಗುತ್ತಿರುವ ಪ್ರಾಣಿ ಬಲಿ ನೀಡುವಂತಿಲ್ಲ .ಬೇಸರದಿಂದ ರಾಜನನ್