ದಿನಕ್ಕೊಂದು ಕಥೆ. 155

ಪೂರ್ತಿ ಓದಿ ಬ್ಯೂಟಿಫುಲ್ ಮನಸುಗಳಿಗೆ ಹಂಚಿಕೊಳ್ಳಿ..
50 ಜನರ ಒಂದು ಗುಂಪು ಸೆಮಿನಾರ್ ನಲ್ಲಿ ಭಾಗವಹಿಸಿತ್ತು.
ಸಭಾಧ್ಯಕ್ಷರು ತಮ್ಮ ಮಾತನ್ನು ನಿಲ್ಲಿಸಿ ಪ್ರತಿಯೊಬ್ಬರಿಗೂ ಗಾಳಿ ತುಂಬಿದ್ದ ಬಲೂನ್ ಗಳನ್ನು ಕೊಟ್ಟು ಅದರಲ್ಲಿ ತಮ್ಮ ತಮ್ಮ ಹೆಸರುಗಳನ್ನು ಬರೆದು ಕೊಡಲು ಹೇಳಿದರು, ಪ್ರತಿಯೊಬ್ಬರು ತಮ್ಮ ಹೆಸರನ್ನು ಬರೆದು ಕೊಟ್ಟರು, ಆ ಬಲೂನ್ ಗಳನ್ನು ಒಂದು ರೂಮಿನಲ್ಲಿ ತುಂಬಿ 5 ನಿಮಿಷದ ಒಳಗೆ ತಮ್ಮ ತಮ್ಮ ಹೆಸರು ಬರೆದಿರುವ ಬಲೂನ್ ಗಳನ್ನು ಹುಡುಕಲು ಹೇಳಿದರು. ಎಲ್ಲರು ತಮ್ಮ ಹೆಸರಿರುವ ಬಲೂನ್ ಗಳನ್ನು ಹುಡುಕುತ್ತಿದ್ದರು 4 ನಿಮಿಷಗಳು ಕಳೆದರು ಯಾರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಹುಡುಕಲು ಆಗಲಿಲ್ಲ.
5 ನಿಮಿಷ ಕಳೆಯುದರೊಳಗೆ ಎಲ್ಲರ ಕೈಯಲ್ಲೂ ತಮ್ಮ ತಮ್ಮ ಹೆಸರಿನ ಬಲೂನ್ ಗಳಿದ್ದವು.
4 ನಿಮಿಷಗಳವರೆಗೆ ಹುಡುಕಿದರು ಸಿಗದಿದ್ದ ಬಲೂನ್ ಕೊನೆಯ 1 ನಿಮಿಷದಲ್ಲಿ ಹೇಗೆ ಸಿಕ್ಕಿತೆಂದು ನಿಮಗೆ ಆಶ್ಚರ್ಯವಾಗಬಹುದು, ಅದು ಹೇಗೆಂದರೆ ಮೊದಲ 4 ನಿಮಿಷಗಳಲ್ಲಿ ಪ್ರತಿಯೊಬ್ಬರು ತಮ್ಮ ತಮ್ಮ ಹೆಸರಿನ ಬಲೂನ್ ಗಳನ್ನು ಮಾತ್ರ ಹುಡುಕುತ್ತಿದ್ದರು, ಆದರೆ ಕೊನೆಯ 1 ನಿಮಿಷದಲ್ಲಿ ತಮಗೆ ಸಿಕ್ಕ ಬೇರೆ ಹೆಸರಿನ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ನೀಡುತ್ತಿದ್ದರು, ಎಲ್ಲರಿಗೂ ಬೇರೆ ಹೆಸರಿನ ಬಲೂನ್ ಗಳೆ ಸಿಕ್ಕವು, ಸಿಕ್ಕ ಬಲೂನ್ ಗಳನ್ನು ಆ ಹೆಸರಿನ ವ್ಯಕ್ತಿಗಳಿಗೆ ಕೊಡುತ್ತಾ ತೆಗೆದುಕೊಳ್ಳುತ್ತ ಕೊನೆಗೆ ತಮ್ಮ ತಮ್ಮ ಹೆಸರಿನ ಬಲೂನ್ ಗಳೊಂದಿಗೆ ಆ ರೂಮಿನಿಂದ ಹೊರಬಂದರು....
ಹೀಗೆ ಸ್ವಾರ್ಥಿಗಳಾಗಿ ನಾವು
ನಮ್ಮ ಸಂತೋಷವನ್ನು ಹುಡುಕುತ್ತಲೆ ಇರುತ್ತೇವೆ ಆದರೆ ನಮ್ಮ ಸಂತೋಷ ಬೇರೆಯವರಲ್ಲಿ ಬೇರೆಯವರ ಸಂತೋಷ ನಮ್ಮಲ್ಲಿ ಇರುತ್ತದೆ, ನಮ್ಮಲ್ಲಿರುವ ಬೇರೆಯವರ ಸಂತೋಷವನ್ನು ಅವರಿಗೆ ಕೊಟ್ಟರೆ ಅವರಲ್ಲಿರುವ ನಮ್ಮ ಸಂತೋಷವು ನಮಗೆ ಸಿಗುತ್ತದೆ.
ಇದೆ ಮಾನವೀಯತೆಯ ಗುರಿ... ಸಂಗ್ರಹ : ವೀರೇಶ್ ಅರಸಿಕೆರೆ ದಾವಣಗೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059