ದಿನಕ್ಕೊಂದು ಕಥೆ. 260
*🌻ದಿನಕ್ಕೊಂದು ಕಥೆ🌻 *ಆಕರ್ಷಣೆಗಳ ಸೆಳೆತ* ಇದು ಬಹುಸುಂದರವಾದ ಜಾನಪದ ಕಥೆ. ಒಂದು ನಗರದಲ್ಲಿ ಆರು ಜನ ತರುಣ ಸ್ನೇಹಿತರಿದ್ದರು. ಅವರೆಲ್ಲ ಸೇರಿ ಒಂದು ವ್ಯಾಪಾರ ಮಾಡಬೇಕೆಂದು ಚಿಂತಿಸುತ್ತಿದ್ದರು. ಆದರೆ, ತಮ್ಮ ನಗರದಲ್ಲಿ ಆ ವ್ಯವಹಾರಕ್ಕೆ ಅವಕಾಶವಿದೆಯೇ ಎಂದು ಮಾರ್ಗದರ್ಶನ ಪಡೆಯಲು ಹಿರಿಯರೊಬ್ಬರ ಬಳಿಗೆ ಹೋದರು. ಅವರು, ‘ನಿಮಗೆ ಈ ನಗರಕ್ಕಿಂತ ಇಲ್ಲಿಂದ ಐವತ್ತು ಮೈಲಿ ದೂರದಲ್ಲಿರುವ ಇನ್ನೊಂದು ನಗರ ವ್ಯಾಪಾರಕ್ಕೆ ತುಂಬ ಸೂಕ್ತ. ಅಲ್ಲಿಗೆ ಹೋಗಿ ಯಶಸ್ಸು ಪಡೆಯಿರಿ. ಆದರೆ, ಒಂದು ಎಚ್ಚರಿಕೆ. ಆ ನಗರಕ್ಕೆ ಹೋಗುವ ದಾರಿಯಲ್ಲಿ ಒಂದು ಕಾಡು ಇದೆ. ಅಲ್ಲಿ ಯಕ್ಷಿಣಿಯರಿದ್ದಾರೆ. ಅವರು ನಿಮ್ಮನ್ನು ಆಕರ್ಷಣೆ ಮಾಡಲು ಪ್ರಯತ್ನಿಸುತ್ತಾರೆ. ನೀವು ಅವುಗಳನ್ನು ಮೀರದಿದ್ದರೆ ಬದುಕುವುದೇ ಕಷ್ಟ’ ಎಂದರು. ತರುಣರ ನಾಯಕ ಸ್ನೇಹಿತರನ್ನು ಕುರಿತು ಈ ವಿಷಯ ಕೇಳಿದಾಗ ಅವರು, ‘ನಮಗೇನೂ ಚಿಂತೆಯಿಲ್ಲ, ಆಕರ್ಷಣೆಗೆ ನಾವು ಒಳಗಾಗದಿದ್ದರೆ ಸಾಕು’ ಎಂದರು. ನಾಯಕ ಅವರನ್ನೆಲ್ಲ ಕರೆದುಕೊಂಡು ಹೊರಟ. ಕಾಡಿನಲ್ಲಿ ನಡೆಯುತ್ತಿರುವಾಗ ಸಂಜೆಯಾಯಿತು. ನಾಯಕ ಹೇಳಿದ, ‘ಇದೇ ಯಕ್ಷಿಣಿಯರು ಇರುವ ಸ್ಥಳ. ಹಗಲಾದರೆ ಅವರ ಶಕ್ತಿ ನಡೆಯುವುದಿಲ್ಲ. ಈ ರಾತ್ರಿ ನಾವು ಏಕಮನಸ್ಕರಾಗಿ ನಡೆಯುತ್ತ ಯಾವ ಆಕರ್ಷಣೆಗಳಿಗೂ ಸಿಕ್ಕುವುದು ಬೇಡ’. ಅವರೂ ಒಪ್ಪಿ ನಡೆಯತೊಡಗಿದರು. ಸ್ವಲ್ಪ ಮುಂದೆ ಸಾಗಿದಾಗ ರಸ್ತೆಯ ಬದಿಯಲ್ಲ