ದಿನಕ್ಕೊಂದು ಕಥೆ 336

*🌻ದಿನಕ್ಕೊಂದು ಕಥೆ🌻                                                  ಸೋಲಿಗೆ ಸೋಲದವರು ಗೆಲ್ಲುತ್ತಾರೆ*

ಸೋಲು ಎಲ್ಲರ ಬದುಕಿನಲ್ಲಿಯೂ ಇದೆ. ಆಟವಾಡುವ ಪುಟ್ಟ ಮಕ್ಕಳ ಗುಂಪಿನಲ್ಲಿದೆ ಸೋಲು ಗೆಲುವು. ಮಕ್ಕಳಿಗೆ ನಾಳೆ ಮತ್ತೆ ಆಡಿ ಗೆಲ್ಲುವ ಉತ್ಸಾಹವಿದೆ. ದೊಡ್ಡವರಾಗುತ್ತಾ ಆ ಉತ್ಸಾಹ ಎಲ್ಲಿ ಹೋಗುತ್ತದೆ? ಮಕ್ಕಳು ಬೇಗನೆ ತಮ್ಮ ಆಸೆ, ಗುರಿಯನ್ನು ಬಿಟ್ಟು ಕೊಡುವುದಿಲ್ಲ. ಒಮ್ಮೆ ಸೋತರೆ ಮತ್ತೆ ಗೆಲ್ಲುವುದನ್ನು ಬಿಟ್ಟು ಬೇರೇನನ್ನೂ ಚಿಂತಿಸುವುದಿಲ್ಲ. ಆದರೆ ದೊಡ್ಡವರು ಬೇಗನೆ ನಿರಾಶರಾಗಿಬಿಡುತ್ತಾರೆ.

ಯಶಸ್ಸನ್ನು ಕಂಡ ವ್ಯಕ್ತಿಗಳೆಲ್ಲರೂ ಸೋಲನ್ನೇ ಕಾಣದವರಲ್ಲ. ಆದರೆ ಅವರು ಸೋಲನ್ನು ಸ್ವೀಕರಿಸಿದ ರೀತಿ ಉಳಿದವರಿಗಿಂತ ಭಿನ್ನ. ಬಹಳಷ್ಟು ಮಂದಿಗೆ ಸೋಲು ಎಂಬುದು ಅಂತ್ಯ. Failure is the stepping stone to success. ಸೋಲು ಗೆಲುವಿನ ಕಡೆಗಿರುವ ಮೊದಲ ಮೆಟ್ಟಲು. ಸೋಲು ಗೆಲುವಿನ ಸೋಪಾನ. ಆದರೆ ಸೋಲನ್ನು ಗೆಲುವಿನ ಆರಂಭವಾಗಿ ಸ್ವೀಕರಿಸುವ ಮಂದಿ ವಿರಳ. ಹಾಗಾಗಿಯೇ ಯಶಸ್ಸು ಸ್ವಲ್ಪಜನರ ಬದುಕಿನಲ್ಲಿದೆ, ಮತ್ತಷ್ಟು ಜನರ ಬದುಕಿನಲ್ಲಿಲ್ಲ.

ಸೋಲು ಎಲ್ಲರ ಬದುಕಿನಲ್ಲಿಯೂ ಇದೆ. ಆಟವಾಡುವ ಪುಟ್ಟ ಮಕ್ಕಳ ಗುಂಪಿನಲ್ಲಿದೆ ಸೋಲು ಗೆಲುವು. ಮಕ್ಕಳಿಗೆ ನಾಳೆ ಮತ್ತೆ ಆಡಿ ಗೆಲ್ಲುವ ಉತ್ಸಾಹವಿದೆ. ದೊಡ್ಡವರಾಗುತ್ತಾ ಆ ಉತ್ಸಾಹ ಎಲ್ಲಿ ಹೋಗುತ್ತದೆ?. ಮಕ್ಕಳು ಬೇಗನೆ ತಮ್ಮ ಆಸೆ, ಗುರಿಯನ್ನು ಬಿಟ್ಟು ಕೊಡುವುದಿಲ್ಲ. ಒಮ್ಮೆ ಸೋತರೆ ಮತ್ತೆ ಗೆಲ್ಲುವುದನ್ನು ಬಿಟ್ಟು ಬೇರೇನನ್ನೂ ಚಿಂತಿಸುವುದಿಲ್ಲ. ಆದರೆ ದೊಡ್ಡವರು ಬೇಗನೆ ನಿರಾಶರಾಗಿಬಿಡುತ್ತಾರೆ ಮತ್ತು ಇದಿಲ್ಲವೆಂದರೆ ಮತ್ತೊಂದು ಎಂಬ ನಿರ್ಧಾರಕ್ಕೆ ಬರುತ್ತಾರೆ, ಕೆಲವೊಂದು ಸಂದರ್ಭಗಳಲ್ಲಿ ಈ ರೀತಿಯ ಘನಾತ್ಮಕ ಮನೋಭಾವನೆ ಒಳ್ಳೆಯದೇ. ಆದರೆ ನಾವು ಸೋಲಿಗೆ ಸೋತಂತಾಗುವುದಿಲ್ಲವೇ? ನಮ್ಮ ಗುರಿ ಸೇರಲು ಕೈಲಾಗುವುದಿಲ್ಲವೆಂದು ಕುಳಿತ ಅಸಹಾಯಕರಾಗುವುದಿಲ್ಲವೇ? ಹಾಗಾಗಿ ಮತ್ತೆ ಮತ್ತೆ ಪ್ರಯತ್ನಿಸುವ ಪ್ರವೃತ್ತಿಯನ್ನು ಮೊದಲು ಬೆಳೆಸಿಕೊಳ್ಳಬೇಕು.

ಬಿಟ್ಟರೆ ಅದು ನಿಜವಾದ ಸೋಲು ಒಬ್ಬ ಲೇಖಕ ಬರೆಯಲು ಕುಳಿತಾಗ ತನ್ನ ಲೇಖನ ಇದೇ ಪುಟ, ಇದೇ ಸ್ಥಳದಲ್ಲಿ ಪ್ರಕಟವಾಗಬೇಕೆಂಬ ಆಸೆ ಇಟ್ಟುಕೊಂಡಿರುತ್ತಾನೆ. ಮೊದಲ ಸಲ ನಿರಾಸೆ. ಬಯಸಿದಲ್ಲಿ ಬರದೆ ಮತ್ತೆಲ್ಲೋ ಲೇಖನ ಪ್ರಕಟವಾಗುತ್ತದೆ. ಕನಸು ನನಸಾಗಿ ಕಾಣುವ ಹಠ ಮತ್ತೆ ಪ್ರಯತ್ನಿಸುವಂತೆ ಪ್ರೇರೇಪಿಸುತ್ತದೆ. ಬಯಸಿದಂತೆ ಬಯಸಿದಲ್ಲಿ ಪ್ರಕಟವಾದರೆ ಲೇಖಕನಿಗಾಗುವ ಖುಷಿಗೆ ಬೆಲೆ ಕಟ್ಟಲು ಸಾಧ್ಯವೇ? ಮಾಡೆಲಿಂಗ್‌ಗೆ ಸೇರಿದ ಯುವತಿ ತಾನು ರೂಪದರ್ಶಿಯಾಗಬೇಕೆಂದು ನಿಯಮಿತ ಆಹಾರ, ವ್ಯಾಯಾಮ ಎಲ್ಲವನ್ನು ಸಹಿಸಿ ಕೊನೆಗೊಂದು ದಿನ ರೂಪದರ್ಶಿಯಾಗಿ ಕಾಣಿಸಿಕೊಂಡಾಗ ಆಕೆಗಾಗುವ ಖುಷಿಯನ್ನು ಬೇರೆಯಾರಿಂದಲಾದರೂ ನೀಡಲು ಸಾಧ್ಯವೇ? ಹಾಗೇ ನಾವು ಬಯಸಿದ ಸಣ್ಣ ಪುಟ್ಟ ವಿಚಾರಗಳು ನಿಜವಾದಾಗ, ನಾವು ಗೆಲ್ಲುವಾಗ ಅದು ಅತ್ಯಂತ ಹಿತವಾದ ಆನಂದವನ್ನು ನೀಡುತ್ತದೆ. ಮೊದಲೇ ತನ್ನಿಂದಾಗದು ಎಂದು ಕೈಬಿಟ್ಟರೆ ಗೆಲುವು ನಮ್ಮ ಕೈಹಿಡಿಯಲಾರದು.

ಉತ್ತರಿಸಲು ಉತ್ತರವಿರಲಿಲ್ಲ ಆಕೆಗೆ ಪದವಿ ಅಂತಿಮ ವರ್ಷ ಓದುತ್ತಿದ್ದಾಗ ಪತ್ರಿಕೋದ್ಯಮದಲ್ಲಿ 30ರಲ್ಲಿ ಪ್ರತಿಬಾರಿಯೂ 29 ಅಂಕ ಪಡೆಯುವ ಹಂಬಲ. ಅದಕ್ಕಾಗಿ ಎದ್ದು ಬಿದ್ದು ಓದುವಾಗ ಸಹಪಾಠಿಗಳು ಪತ್ರಿಕೋದ್ಯಮಕ್ಕೆ ಅಂಕ ಬೇಕಿಲ್ಲ. ಕಷ್ಟಪಟ್ಟು ಸುಮ್ಮನೆ ಯಾಕೆ ಓದುತ್ತೀಯ ಎಂದು ನಗುತ್ತಿದ್ದರು. ನಿಜ,ಆಗ ಉತ್ತರಿಸಲು ಆಕೆಗೆ ಉತ್ತರವಿರಲಿಲ್ಲ. ತರಗತಿಯಲ್ಲಿ ಉತ್ತರ ಪತ್ರಿಕೆ ವಿತರಿಸುವ ದಿನ ಆಕೆಗಾಗುವ ಖುಷಿ ಬಹುಶಃ ವಿವರಿಸಿದರೂ ಎಲ್ಲರಿಗೂ ಅರ್ಥವಾಗದು. ಏನನ್ನೋ ಮಾಡಲೆಂದು ಹೊರಟು ಸೋತಾಗ, ಹೋರಾಡುವಾಗ ನೋಡಿ ಆಡಿಕೊಳ್ಳುವವರು, ನಗುವವರು ಇರುವುದು ಸಾಮಾನ್ಯ.

ಆಗ ಅವರೆದುರು ನಾವು ನಿರುತ್ತರರು. ಅಂಥವರಿಗೆ ನಮ್ಮ ಗೆಲುವೇ ಉತ್ತರವಾಗಬೇಕು. ಕಾಯುವ ತಾಳ್ಮೆ ಬೇಕು ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ ಹೇಳುವಂತೆ ತಾಳ್ಮೆ ಕಹಿ ಮತ್ತು ಅದು ನೀಡುವ ಪ್ರತಿಫಲ ಸಿಹಿಯಾಗಿರುತ್ತದೆ. ಗೆಲುವಿನಿಂದ ಕಾಯುವಿಕೆಗೆ ನಿಜವಾದ ಅರ್ಥ ಬರುತ್ತದೆ. ಎಮ್.ಎಸ್.ಧೋನಿ ದಿ ಅನ್ ಟೋಲ್‌ಡ್‌ ಸ್ಟೋರಿ ಚಿತ್ರದ ಮೂಲಕ ಭಾರತೀಯ ಕ್ರಿಕೆಟ್ ಹೀರೋ ಧೋನಿಯ ಜೀವನ ಕಥೆಯನ್ನು ಚಿತ್ರಿಸಲಾಗಿದೆ. ಒಬ್ಬ ವ್ಯಕ್ತಿ ಸಮಾಜಕ್ಕೆ ಹೀರೋ ಆಗುವ ಮೊದಲು ಸಾಕಷ್ಟು ಸಲ ತನ್ನ ಅತ್ಯಂತ ಹತ್ತಿರದವರ ಕಣ್ಣಲೂ ಝೀರೋ ಎನಿಸಿಕೊಂಡಿರುತ್ತಾನೆ.

ಮುಗಿಯದಷ್ಟು ತೊಳಲಾಟ ದ್ವಂದ್ವಕ್ಕೆ ಸಿಲುಕಿಕೊಳ್ಳುತ್ತಾನೆ. ಎಲ್ಲವನ್ನು ಮೀರಿ ಗೆಲುವಿಗಾಗಿ ಮಾತ್ರ ಹೊರಟವನಂತೆ ತಾಳ್ಮೆಯಿಂದ ಕಾದಾಗ ಮಾತ್ರ ಆತ ಗುರಿ ಸೇರುತ್ತಾನೆ. ಆತ್ಮಾರ್ಥವಾಗಿ ನಾವು ಮಾಡುವ ಕೆಲಸಗಳಿಗೆ, ಪ್ರಯತ್ನಗಳಿಗೆ ಅನಿರೀಕ್ಷಿತ ಪ್ರತಿಫಲಗಳು ಖಂಡಿತಾ ದೊರೆಯುತ್ತವೆ. ಅದಕ್ಕಾಗಿ ಕಾಯುವ ತಾಳ್ಮೆ ಬೇಕು. ಈ ಮನಸ್ಥಿತಿ ಇಲ್ಲದವರು ಬೇಗನೆ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಅಥವಾ ಅವರು ನಿಜವಾಗಿಯೂ ಸೋಲುತ್ತಾರೆ. ನಮ್ಮ ಕನಸುಗಳನ್ನು ಸ್ವಪ್ರಯತ್ನದಿಂದ ನನಸಾಗಿಸುವುದರಲ್ಲಿರುವ ಖುಷಿ ಸೋಲಿಗೆ ಸೋತುಬಿಡುವುದರಲ್ಲಿ ಖಂಡಿತಾ ದೊರೆಯದು.

ಕೃಪೆ:ದಿವ್ಯಾ ಪೆರ್ಲ.                                     ಸಂಗ್ರಹ:ವೀರೇಶ್ ಅರಸಿಕೆರೆ.ದಾವಣಗೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059