ದಿನಕ್ಕೊಂದು ಕಥೆ. 369

*🌻ದಿನಕ್ಕೊಂದು ಕಥೆ*🌻                                                          

*_ಕರ್ತವ್ಯ ನಿಭಾಯಿಸುವ ಉದ್ದೇಶ_*

ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧ ಮುಗಿದ ನಂತರ ಒಂದು ಸನ್ನಿವೇಶ ಬರುತ್ತದೆ. ಯುದ್ದದಲ್ಲಿ ಕೌರವರೆಲ್ಲಾ ಸತ್ತು ಹೋದ ನಂತರ ಹಸ್ತಿನಾಪುರದಲ್ಲಿ ಸ್ಮಶಾನ ಮೌನ ಆವರಿಸಿತ್ತು. ಗಾಂಧಾರಿಯಂತೂ ದುಃಖದ ಮಡುವಿನಲ್ಲಿ ಮುಳುಗಿದ್ದಳು. ಆ ಸಂದರ್ಭದಲ್ಲಿ ಅವರಿಗೆ ಸಾಂತ್ವನ ಹೇಳಲು ಶ್ರೀ ಕೃಷ್ಣ ಮತ್ತು ಧರ್ಮರಾಯನು ಹೋಗುತ್ತಾರೆ. ಶ್ರೀ ಕೃಷ್ಣನನ್ನು ನೋಡಿದಾಕ್ಷಣ ಸಿಟ್ಟುಗೊಂಡು ಗಾಂಧಾರಿ ಹೇಳುತ್ತಾಳೆ- "ನನ್ನ ಮಕ್ಕಳ ಸಾವಿಗೆ ನೀನೇ ಕಾರಣ. ನೀನು ಮನಸ್ಸು ಮಾಡಿದ್ದರೆ ಈ ಯುದ್ದ ತಡೆಯಬಹುದಿತ್ತು. ಮಾತುಕತೆಯ ಮೂಲಕ ಸಂಧಾನ ಮಾಡಿಸಬಹುದಿತ್ತು. ಅದಲ್ಲದೆಯೂ ನೀನು ಕೌರವರಿಗೆ ಒಳ್ಳೆಯ ಬುದ್ದಿಯನ್ನು ಕೊಡಬಹುದಿತ್ತು. ಆದರೆ ನೀನೇನನ್ನೂ ಮಾಡದೆ ನನ್ನ ಎಲ್ಲಾ ಮಕ್ಕಳನ್ನು ಸಾಯಲು ಬಿಟ್ಟುಬಿಟ್ಟೆ".

ಅದಕ್ಕೆ ಶ್ರೀ ಕೃಷ್ಣ ಪರಮಾತ್ಮನು ಶಾಂತಿಯಿಂದ ಉತ್ತರಿಸುತ್ತಾನೆ- "ಗಾಂಧಾರಿ, ಒಮ್ಮೆ ಶಾಂತಚಿತ್ತದಿಂದ ಯೋಚಿಸು. ನಿನಗೆ ನಾನು ಆರೋಗ್ಯ ಕೊಟ್ಟೆ. ನಿನ್ನ ಪತಿ ಧೃತರಾಷ್ಟ್ರ ಕುರುಡ ಅಂದ ಕಾರಣಕ್ಕೆ ನೀನೂ ಕೂಡಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿನ್ನ ಪತಿಯ ಸೇವೆಯನ್ನು ಮಾಡುವುದರಿಂದ ವಂಚಿಸಿಕೊಂಡೆ. ಅಷ್ಟೇ ಅಲ್ಲದೆ ಕೌರವರು ಹುಟ್ಟಿದ ಮೇಲೆ ಕೂಡಾ ನೀನು ಕಣ್ಣಿಗೆ ಪಟ್ಟಿ ಕಟ್ಟಿಕೊಂಡದ್ದರಿಂದ, ಅವರನ್ನು ಸಾಕಿ ಸಲುಹಿ, ಅವರಿಗೆ ಸಂಸ್ಕಾರವನ್ನು ಕೊಡಲಿಲ್ಲ. ಅವರು ಬೆಳೆಯುತ್ತಾ ಮಾಡಿದ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳಲಿಲ್ಲ. ಅವರುಗಳಿಗೆ ತಾಯಿಯ ಮಾರ್ಗದರ್ಶನ ನೀಡಲಿಲ್ಲ. ಈ ರೀತಿಯಲ್ಲಿ ಒಬ್ಬ ತಾಯಿಯಾಗಿ, ಪತ್ನಿಯಾಗಿ ಎಲ್ಲಾ ಅವಕಾಶವಿದ್ದರೂ ಕೂಡ ನೀನು ನಿನ್ನ ಕರ್ತವ್ಯಗಳಿಂದ ತಪ್ಪಿಸಿಕೊಂಡೆ. ಮಕ್ಕಳು ದಾರಿ ತಪ್ಪಿದಾಗ ಅವರುಗಳಿಗೆ ತಿಳಿಹೇಳಲು ಯಾರೂ ಇರಲಿಲ್ಲ. ಆದುದ್ದರಿಂದ ಕೌರವರ ಇಂದಿನ ಸ್ಥಿತಿಗೆ ಯಾರಾದರೂ ಕಾರಣ ಅಂತಿದ್ದರೆ ಅದು ನೀನೇ"

ನೀತಿ:- ಬೇರೆಯವರ ಮೇಲೆ ದೋಷ ಹೊರಿಸುವ ಮೊದಲು ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿದ್ದೇವೆಯೇ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ ಹಾಗೂ ಜಾಣತನವೂ ಕೂಡಾ..                                          ಕೃಪೆ :ವಿಜಯ ಕರ್ನಾಟಕ.                ಸಂಗ್ರಹ :ವೀರೇಶ್ ಅರಸಿಕೆರೆ.

Comments

  1. ಈ ಕಥಾಸಂಗ್ರಹ ಅತ್ಯುತ್ತಮ ಮಟ್ಟದಲ್ಲಿದ್ದು ಉತ್ತಮ ಜ್ಞಾನ ನೀಡುವಲ್ಲಿ ಶಕ್ತವಾಗಿದೆ. ನಾವು ಮನೆ ಮಂದಿಯೆಲ್ಲಾ ಈ ಕಥೆಗಳನ್ನು ಓಡುವುದರ ಜೊತೆಗೆ ಇನ್ನಿತರ ಅನೇಕರಲ್ಲೂ ಕಥೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗಿವೆ.
    ಧನ್ಯವಾದ ಮತ್ತು ಅಭಿನಂದನೆಗಳು.

    ReplyDelete

Post a Comment

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059