ದಿನಕ್ಕೊಂದು ಕಥೆ. 399

*🌻ದಿನಕ್ಕೊಂದು ಕಥೆ🌻                                         ವಿಮಾನ ಪ್ರಯಾಣದಲ್ಲಿ ಊಟ.*

ವಿಮಾನದಲ್ಲಿ ನನ್ನ ಜಾಗದಲ್ಲಿ ಕುಳಿತೆ. ಡೆಲ್ಲಿ ತಲುಪಲು ಐದಾರು ಗಂಟೆಗಳ ಪ್ರಯಾಣ. ಒಂದು ಉತ್ತಮವಾದ ಪುಸ್ತಕ ಓದುವುದು, ಒಂದು ಗಂಟೆ ನಿದ್ರೆ ನನ್ನ ಪ್ರಯಾಣದ ಕಾರ್ಯಕ್ರಮ. ವಿಮಾನ ಹೊರಡುವುದಕ್ಕೆ ಐದು ನಿಮಿಷಗಳ ಮುಂಚೆ ನನ್ನ ಅಕ್ಕ ಪಕ್ಷದ ಸೀಟುಗಳಲ್ಲಿ ಹತ್ತು ಜನ ಯೋಧರು ಕುಳಿತು ಕೊಂಡಿದ್ದರು. ವಿಮಾನ ತುಬಿತ್ತು. ಕಾಲಕ್ಷೇಪಕ್ಕೆ ನನ್ನ ಪಕ್ಕದಲ್ಲಿ ಕುಳಿತ ಯೋಧನನ್ನು "ಎಲ್ಲಗೆ ಪ್ರಯಾಣ" ಎಂದು ವಿಚಾರಿಸಿದೆ. ",ಆಗ್ರಾಗೆ ಸಾರ್, ಅಲ್ಲಿ ಏರಡುವಾರ ಶಿಕ್ಷಣ, ನಂತರ  ಆಪರೇಷನ್ಗೆ ಕಳಿಸುತ್ತಾರೆ"ಎಂದನು.
ಒಂದು ಗಂಟೆ ಕಳೆಯಿತು..ಅನೌಸಮೆಂಟ್ "ಬೇಕಾದವರು ಹಣ ಕೊಟ್ಟು ಊಟ ಪಡೆಯ ಬಹುದು" ಎಂದು. ಸರಿ ತುಂಬಾ ಸಮಯವಿದೆ ಊಟಮುಗಿಸಿದರೆ  ಒಂದು ಕೆಲಸವಾಗುತ್ತದೆ ಎಂದು ನನ್ನ ಪರ್ಸ ತೆಗೆದು ಊಟ ಖರೀದಿಸಲು ಮುಂದಾದಾಗ ಈ ಮಾತುಗಳು ನನ್ನ ಕಿವಿಗೆ ಬಿದ್ದವು"
ನಾವು ಸಹಾ ಊಟಮಾಡೋಣವೇ? ಎಂದು ಒಬ್ಬ ಮತ್ತೋಬ್ಬನನ್ನು ಕೇಳುತ್ತಾನೆ....ಅದಕ್ಕೆ ಆತನು "ಬೇಡ..ಇಲ್ಲಿ ಊಟ ದುಬಾರಿ... ವಿಮಾನದಿಂದ ಇಳಿದ ತಕ್ಷಣ ಯಾವುದಾದರೂ ಸಾಧಾರಣವಾದ ಕಡೆ ಊಟಮಾಡೋಣ "  ಎಂದನು.
ಅದಕ್ಕೆ ಆ ಮೂದಲಿನ ಯೋಧ "ಸರಿ"ಎಂದು ಸುಮ್ಮನಾದನು.
ನಾನು ವಿಮಾನದ ಪರಿಚಾಲಕಿಯ ಬಳಿ ಹೋಗಿ "ದಯವಿಟ್ಟು ನೀವು ಆ ಯೋಧರೆಲ್ಲರಿಗೂ ಊಟ ಕೊಡಿ ಅದರ ಹಣ ನಾನು ಸಂದಾಯಿಸುತ್ತೇನೆ "ಎಂದೆನು. ಹಣ ಪಡೆದು ಎಲ್ಲರಿಗೂ ಊಟದ ಡಬ್ಬಿಗಳನ್ನು ಕೊಟ್ಟರು.
ಆ ಪರಿಚಾರಕಿ ಕಣ್ಣಲ್ಲಿ ನೀರು "ಸಾರ್ ನನ್ನ ತಮ್ಮ ಕಾರ್ಗಿನಲ್ಲಿ ಇದ್ದಾನೆ. ಅವನಿಗೆ ನೀವು ಊಟ ಬಡಿಸಿದಷ್ಟು ಸಂತಸವಾಗುತ್ತಿದೆ"ಎನ್ನುತ್ತಾ ಕೈ ಮುಗಿದಳು. ನನಗೆ ಕಣ್ಣೀರು ತಡೆಯಲಾಗಲಿಲ್ಲ...ದುಖಃದಿಂದ ಬಂದು ನನ್ನ ಸೀಟಿನಲ್ಲಿ ಕುಳಿತೆ. ನಾನು ಊಟ ಮುಗಿಸಿ ಕೈ ತೊಳೆಯಲು ವಾಶ್ ರೂಂ ಕಡೆ ಹೊರಟೆ...ನನ್ನ ಹಿಂದೆಯೇ ಒಬ್ಬ ವಯಸ್ಸಾದವರು ಬಂದು " ನಾನು ನಡೆದದ್ದೆಲ್ಲವನ್ನೂ ಗಮನಿಸಿದ್ದೇನೆ. ನಿಮಗೆ ಅಭಿನಂದನೆಗಳು, ಈ ನಿಮ್ಮ ಸಂತೋಷದಲ್ಲಿ ನನಗೂ ಸ್ವಲ್ಪ ಪಾಲುಕೋಡಿ" ಎಂದು ಒಂದು ಐದು ನೂರು ರೂಪಾಯಿಯ ಹೊಸ ನೋಟನ್ನು ನನ್ನ ಕೈಯಲ್ಲಿ  ತುರುಕಿ. "ನಿಮ್ಮ ಆನಂದದಲ್ಲಿ ನನ್ನ ಭಾಗ ಎಂದರು.
ನಾನು ನನ್ನ ಸೀಟಿನಲ್ಲಿ ಬಂದು ಕುಳಿತೆ. ಒಂದು ಕಾಲು ಗಂಟೆ ಕಳೆದಿರ ಬಹುದು, ವಿಮಾನದ ಕ್ಯಾಪಟನ್...ಯಾರನ್ನೂ ಹುಡುಕುತ್ತಾ ಸೀಟು ನಂಬರ್ ಗಳನ್ನು ನೋಡುತ್ತಾ ನನ್ನ ಬಳಿಬಂದು, ನನ್ನನ್ನು ನೋಡಿ ಮುಗುಳು ನಗೆ ಬೀರುತ್ತಾ "ನಿಮಗೆ ಶೇಕ್ ಹ್ಯಾಂಡ ಕೊಡ ಬಹುದೇ ",ಎಂದು ನನ್ನ ಕೈ ಕುಲುಕಿದನು. ನಾನು ನನ್ನ ಸೀಟಿನ ಪಟ್ಟಿ ಯನ್ನು ಕಳಚಿ ,ನಿಂತುಕೊಂಡೆ ಆತನು "ನಾನು ಕೆಲವು ವರ್ಷ ಪೈಲೆಟ್ ಆಗಿ ಕೆಲಸಮಾಡಿದ್ದೇನೆ ಆಗ ಯಾರೋ ಒಬ್ಬರು ನಿಮ್ಮ ಹಾಗೆ ಊಟ ಕೊಡಿಸಿದರು. "ಅದು ನಿಮ್ಮ ಪ್ರೇಮದ ಕುರುಹು...ನಾನು ಅದನ್ನು ಎಂದೆಂದಿಗೂ ಮರೆಯಲಾರೆ" ಎಂದನು...ಸಹ ಪ್ರಯಾಣಿಕರೆಲ್ಲಾ ಚಪ್ಪಾಳೆ ತಟ್ಟುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು. ನನಗೆ ತುಂಬಾ ಸಂಕೋಚವಾಯಿತು. ನಾನು ಒಂದು ಉತ್ತಮ ವಾದ ನಡವಳಿಕೆ ತೋರಿರ ಬಹುದು ಆದರೆ ಹೊಗಳಿಕೆಗೆ ಅಲ್ಲ.
ನಾನು ನನ್ನ ಸೀಟಿನಿಂದ ಮುಂದಿನ ಸೀಟುಗಳತ್ತ ಬಂದೆ. ಒಬ್ಬ 18 ವರ್ಷ ದ ಹುಡುಗ ನನ್ನ ಕೈ ಕುಲುಕುತ್ತಾ ಒಂದು ನೋಟನ್ನು ಕೊಟ್ಟ .ಪ್ರಯಾಣ ಮುಗಿಯಿತು. ನಾನು ವಿಮಾನ ದಿಂದ ಹೊರ ಬರಲು ಬಾಗಿಲಬಳೀ ನಿಂತಿದ್ದೆ. ಯಾರೋ ಒಬ್ಬರು ನನ್ನ ಜೇಬಿನಲ್ಲಿ ಎನನ್ನೋ ಇಟ್ಟರು....ಮತ್ತೊಂದು ನೋಟು.‌.ಎ
ನಾನು ಹೊರ ಬಂದು ನೋಡಿದಾಗ ಆ ಯೋಧರೆಲ್ಲರೂ ಒಂದು ಕಡೆ ನಿಂತಿದ್ದರು, ನಾನು ಬೇಗ ಬೇಗ ಅವರ ಹತ್ತಿರ ಹೋಗಿ, ವಿಮಾನದಲ್ಲಿ ಸಹ ಪ್ರಯಾಣೀಕರು ಬಲವಂತದಿಂದ ನನಗೆ ಕೊಟ್ಟ ಹಣವನ್ನು ಜೇಬಿನಿಂದ ತೆಗೆದು ಅವರಿಗೆ ಕೊಡುತ್ತಾ "ನೀವು ನಿಮ್ಮ ಶಿಕ್ಷಣ ನಡೆಯುವ  ಊರು ತಲುಪುವ ಮುಂಚೆ ಏನ್ನಾದರೂ ತಿನ್ನಲು ಪ್ರಯೋಜನ ವಾಗುತ್ತದೆ, ನೀವು ನಮ್ಮದೇಶವನ್ನು ರಕ್ಷಿಸಲು ಪಡುತ್ತಿರುವ ಶ್ರಮದ ಮುಂದೆ ಈ ನಮ್ಮ ಸಹಾಯ ಬಹಳಾ ಚಿಕ್ಕದು.ನಿಮ್ಮ ಗಳಿಗೆ ಆ ಭಗವಂತನು ದಯೆತೋರಲಿ, ನಿಮ್ಮ ಪರಿವಾರದ ಸದಸ್ಯ ರೆಲ್ಲರೂ ಸುಖವಾಗಿರಲಿ"ಎಂದಾಗ ನನಗೆ ಅರಿವಿಲ್ಲದೇ ಧಾರಾಕಾರವಾದ ಕಣ್ಣೀರು.
ಆ ಹತ್ತು ಜನ.ಯೋಧರೂ ಸಹ ಪ್ರಯಾಣೀಕರ ಒಲವನ್ನೂ ಸೋರೆಗೊಂಡಿದ್ಧರು. ನಾನು ಕಾರು ಹತುತ್ತಾ ...ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಧಾರೆಯೆರೆಯಲು ಸಿಧ್ಧರಾದ ಈ ಯುವಕರಿಗೆ ನೂರ್ಕಾಲ ಸುಖವಾಗಿ ಬಾಳುವಂತೆ ಹರಸು ಸ್ವಾಮಿ",ಎಂದು ಭಗವಂತನಲ್ಲಿ ಕೇಳಿಕೊಂಡೆ.
ಸೈನಿಕ ನೆಂದರೆ ತನ್ನ ಬಾಳನ್ನು ನಾಡಿಗಾಗಿ ತ್ಯಾಗ ಮಾಡುವ ಬ್ಲಾಂಕ್ ಚೆಕ್ ನಂತೆ. "ಬಾಳೆಲ್ಲವೂ ತನ್ನ ಬದುಕನ್ನು ಮುಡುಪಾಗಿಡುವ ಬ್ಲಾಂಕ್ ಚೆಕ್ಕು"

ಎಷ್ಟು ಸಾರಿ ಓದಿದರೂ ಮನ ತಣಿಸುವ ಈ ಪ್ರಸಂಗ ಕಣ್ಣೀರ ಧಾರೆ ಯಾಗುತ್ತದೆ.
ಭಾರತ ಮಾತೆಯ ಈ ಮುದ್ದು ಮಕ್ಕಳನ್ನು ಗೌರವಿಸುವುದು ನಮ್ಮನ್ನು ನಾವೇ ಗೌರವಿಸಿಕೊಂಡಂತ್ತೆ
ಜೈ ಜವಾನ್.‌‌‌....ಭಾರತ್ ಮಾತಾ ಕೀ ಜೈ.                                                           *ಕೃಪೆ: ಶ್ರೀಧರ ಮೂರ್ತಿ.e-books 2 group*                         ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059