ದಿನಕ್ಕೊಂದು ಕಥೆ. 492
*🌻ದಿನಕ್ಕೊಂದು ಕಥೆ🌻 250 ಜನರನ್ನು ಕಾಪಾಡಿದ ಹಾಲು ವ್ಯಾಪಾರಿ..!*
ಬೆಳಿಗ್ಗೆ ಕೋಳಿ ಕೂಗುತ್ತಲೇ ಏಳುವುದು… ಮನೆ ಮನೆಗೆ ತೆರಳಿ ಹಾಲು ಶೇಖರಿಸುವುದು. ಆ ಹಾಲನ್ನು ಮಾರುವುದರಿಂದ ಬರುವ ಹಣವೇ ಆತನ ಜೀವನಾಧಾರ. ಆದರೆ, ಆತನೀಗ 250 ಜನರಿಗೆ ಪುನರ್ಜನ್ಮ ನೀಡಿದ ದೇವರು. ಅ ಎಲ್ಲಾ 250 ಮಂದಿಯು ತಮ್ಮ ಜೀವಮಾನವಿಡೀ ಅತನನ್ನು ನೆನೆಯಲೇಬೆಕು. ಅವರು ಅನುಭವಿಸುತ್ತಿರುವ ಪ್ರತಿ ಕ್ಷಣವೂ ಈತನು ನೀಡಿರುವಂತದ್ದೇ. ಹಾಲು ವ್ಯಾಪಾರಿ 250 ಜನರಿಗೆ ದೇವರು ಹೇಗಾದ ಎಂದು ಭಾವಿಸುತ್ತಿರಾ.?
ಬನ್ನಿ ಈ ಘಟನೆ ನಡೆದ ಪಂಜಾಬ್ ರಾಜ್ಯಕ್ಕೆ ಹೋಗೋಣ… ಕಳೆದ ವರ್ಷ ಪಂಜಾಬ್ ಪೊಲೀಸ್ ಹಾಗೂ ಉಗ್ರವಾದಿಗಳ ನಡುವೆ ನಡೆದ ಎನ್ ಕೌಂಟರ್ ನಿಮಗೆ ನೆನಪಿದೆಯಲ್ಲವೇ…? ಆ ಎನ್ ಕೌಂಟರ್ ನಲ್ಲಿ ನಮ್ಮ ಪೊಲೀಸರು, ತಮ್ಮ ಪ್ರಾಣಗಳನ್ನೂ ಲೆಕ್ಕಿಸದೆ, ಉಗ್ರವಾದಿಗಳನ್ನು ಸದೆ ಬಡಿದ ವಿಷಯ ನೆನಪಿದೆಯಲ್ಲವೇ..? ಆದರೆ, ಅದೇ ದಿನ ಉಗ್ರವಾದಿಗಳು…ರೈಲ್ವೇ ಟ್ರ್ಯಾಕ್ ಮೇಲೆ ಅಳವಡಿಸಿದ್ದ ಸ್ಪೋಟಕಗಳನ್ನು, ಅವು ಸಿಡಿಯುವ ಮೊದಲೇ ಪೊಲೀಸರು ನಿಷ್ಕ್ರಿಯಗೊಳಿಸಿದ್ದರು. ಆ ಸ್ಪೊಟಕಗಳನ್ನು ಮೊದಲಿಗೆ ಗುರುತಿಸಿದ್ದು ‘ಸತ್ಪಾಲ್ ‘ಎಂಬ ಹಾಲು ವ್ಯಾಪಾರಿ. ಅಂದು ಆತ ತೆಗೆದುಕೊಂಡ ನಿರ್ಣಯದಿಂದ 250 ಜನ ಸಜೀವವಾಗಿ ಉಳಿದರು.
ಹಾಲು ಮಾರುವವ ಎಂದಿನಂತೆ ಅಂದೂ ಸಹ ಹಾಲನ್ನು ಸಂಗ್ರಹಿಸಲು ರೈಲ್ವೇ ಬ್ರಿಡ್ಜ್ ಗೆ ಆ ಕಡೆಯಿರುವ ಮನೆಗೆ ಹೋಗಲು ರೈಲ್ವೇ ಟ್ರ್ಯಾಕ್ ದಾಟುತ್ತಿದ್ದಾನೆ…ಆಗ ಟ್ರ್ಯಾಕ್ ಮೇಲೆಯಿದ್ದ ವೈರ್ ಗಳು ಆತನ ಗಮನ ಸೆಳೆದವು. ಆ ವೈರುಗಳನ್ನು ಐದು ಬಾಕ್ಸ್ ಗಳಿಗೆ ಜೋಡಿಸಲಾಗಿತ್ತು. ಒಡನೆಯೇ ತನ್ನೊಂದಿಗೆ ಬಂದಿದ್ದ ಬಾಲಕನ ಮೂಲಕ ಈ ವಿಷಯವನ್ನು ಲೈನ್ ಮ್ಯಾನ್ ಗೆ ಮುಟ್ಟಿಸಿದ. ಇದರಿಂದ ಎಚ್ಚರಗೊಂಡ ಲೈನ್ ಮ್ಯಾನ್…ಅದಾಗಲೇ ಆ ಕಡೆ ಬರುತ್ತಿದ್ದ 250 ಪ್ರಯಾಣಿಕರು ಪ್ರಯಣಿಸುತ್ತಿದ್ದ ರೈಲನ್ನು ನಿಲ್ಲಿಸಿದ. ಇದರಿಂದಾಗಿ ಸಂಭವಿಸಬಹುದಾದ ದೊಡ್ಡ ಅವಘಡವೊಂದು ತಪ್ಪಿತು. ಪ್ರಯಾಣಿಕರನ್ನು ರಕ್ಷಿಸಿದ ಸತ್ಪಾಲ್ ಹಾಗೂ ಗ್ಯಾಂಗ್ ಮೆನ್ ಗಳನ್ನು ಆರ್ಮೀ ಆಫೀಸರ್ ಗಳು ಸತ್ಕರಿಸಿದರು. Hats off Satpal jee…
ಈ ಘಟನೆ ನಡೆದು ಇಂದಿಗೆ ಒಂದು ವರ್ಷವಾಗಿದೆ. ಅಂದು ಹಾಲು ಮಾರುವವನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾದ 250 ಜನ ತಮ್ಮ ಸಂಸಾರದೊಂದಿಗೆ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ.
ಕೃಪೆ: ಪೆಸ್ ಬುಕ್. ಸಂಗ್ರಹ: ವೀರೇಶ್ ಅರಸಿಕೆರೆ.
Comments
Post a Comment