ದಿನಕ್ಕೊಂದು ಕಥೆ. 496

*🌻ದಿನಕ್ಕೊಂದು ಕಥೆ🌻*                                                                                                                       ಅಪ್ಪ ಮಗಳು ಹಾಗೆ ಕಾಡಹಾದಿಯಲ್ಲಿ ನಡೆದು ಹೊರಟಿದ್ರು .
ಅಲ್ಲೆಲ್ಲೋ ಒಂದು ಮರದ ಕೊಂಬೆ ಮುರಿದು ಬಿದ್ದಿತ್ತು . ಸುಮಾರು ದೊಡ್ಡದಾಗೇ ಇತ್ತು .
ಮಗಳು ಅಪ್ಪನನ್ನ ಕೇಳಿದ್ಳು 'ನಾ ಇದನ್ನ ಎತ್ತಿ ಪಕ್ಕಕ್ಕೆ ಸರಿಸಬಹುದೇ ಅಪ್ಪ?"
'ಓ, ನಿನ್ನೆಲ್ಲಾ ಶಕ್ತಿ ಹಾಕಿ ಎತ್ತಿದರೆ ಖಂಡಿತ ಸರಿಸಬಹುದು'
ಮಗಳು ಪ್ರಯತ್ನಿಸಿದಳು , ಆಗಲಿಲ್ಲ . ಅಪ್ಪನ ಮುಖ ನೋಡಿದಳು . ಅಪ್ಪ ಮತ್ತದೇ ನಗುಮೊಗದಿಂದ 'ನಿನ್ನೆಲ್ಲಾ ಶಕ್ತಿ ಹಾಕು ಮಗ' ಅಂದ
ಮಗಳು ಮತ್ತೆ ಮತ್ತೆ ಯತ್ನಿಸಿದಳು . ಆಗಲೇ ಇಲ್ಲ . ಮುಖ ಸಪ್ಪಗಾಯ್ತು .. ಅಪ್ಪನತ್ತ ನೋಡಿದ್ಳು !
ಅಪ್ಪ ಮತ್ತದೇ ನಗುಮೊಗದಿಂದ 'ನಿನ್ನೆಲ್ಲಾ ಶಕ್ತಿ ಹಾಕು ಮಗ ಅಂದೆ ಅಲ್ವ ಮಗ, ನಾನೂ ನಿನ್ನ ಶಕ್ತಿ ಅನ್ನೋದನ್ನ ಮರೆತೆಯಲ್ಲ ' ಅಂತ ಹೇಳಿ ಅವಳ ಜೊತೆ ಸೇರಿಸಿ ಆ ಕೊಂಬೆಯನ್ನ ಸರಿಸಿದ . ಮಗಳ ಮೊಗದಲ್ಲಿ ನಗು ಮೂಡಿತು !
ಹಿರಿಯರೊಬ್ಬರು ಹೇಳಿದ ಕಥೆ .. ಹಂಚಿಕೊಳ್ಳಬೇಕು ಅನಿಸ್ತು .                                                     *ಕೃಪೆ:e--books 5 ವಾಟ್ಸ್ ಆ್ಯಪ್ ಗ್ರೂಪ್*. ********************************************************************                                                                                                               #ಅಪ್ಪಾ, ಅಮ್ಮ ಎಲ್ಲಿ..ಬರ್ಲೇ ಇಲ್ಲ..
#ಬರ್ತಾಳೆ ಪುಟ್ಟ
#ಯಾವಾಗ್ ಬರ್ತಾಳೆ.ದಿನಾಲೂ ಹಿಂಗೇ ಹೇಳ್ತೀಯಾ.ಅಮ್ಮ ಬರೋದೇ ಇಲ್ಲ
#ಬರ್ತಾಳೆ ಪುಟ್ಟ
#ಅದೇ ಯಾವಾಗ ಬರ್ತಾಳೆ ಪಪ್ಪಾ.
#ಅಮ್ಮನಿಗೆ ಭಾರೀ ಕೆಲಸ.ಅದಕ್ಕೆ ಅವಳು ಬೇಗ ಬರ್ತಾ ಇಲ್ಲ..
#ಮಮ್ಮಿಗೆ ಏನ್ ಕೆಲಸ.
#ನಿನಗೆ ಹೇಳ್ತಿದ್ದೆನಲ್ಲ ಪುಟ್ಟ
#ಏನ್ ಹೇಳ್ತಿದ್ದೆ.ಬರೀ ಸುಳ್ಳು
#ಸುಳ್ಳಲ್ಲ ಪುಟ್ಟ. ‌ನಿಮ್ಮ ಮಮ್ಮಿ maths ನಲ್ಲಿ ತುಂಬಾ ತುಂಬಾ intelligent ಅಂತ ಹೇಳ್ತಿದ್ದೆ ನಿನಗೆ ನೆನಪಿದೆಯಾ?
#ನೆನಪಿದೆ ಏನಿವಾಗ?
#ಅದೇ ಪುಟ್ಟ .ಆ ದೇವರಿದ್ದಾನಲ್ಲ
#ಎಲ್ಲಿ?
#ಅದೇ ಮೇಲೆ ಮೇಲೆ.
#ಹೇಳು ಪಪ್ಪಾ.ನನಗೆ ಮಮ್ಮಿ ಬೇಕೇಬೇಕು
#ಅದೇ ನಿಮ್ಮಮ್ಮ ಗಣಿತದಲ್ಲಿ ಬಹಳ ಇಂಟಲಿಜೆಂಟು ಅಂತ ಹೇಳಿದೆನಲ್ಲಾ..ಅದ್ಕೆ ಅವಳನ್ನು ಮೇಲಿದಾನಲ್ಲ ಅವ್ನು ಆ ದೇವ್ರು ಅವ್ನು ನಿಮ್ಮ ಮಮ್ಮೀನ ಕರೆಸಿಕೊಂಡು ಕೆಲಸ ಕೊಟ್ಟಿದ್ದಾನೆ.
#ಏನ್ ಕೆಲಸ ಪಪ್ಪಾ(ಆಕಳಿಸುತ್ತಾ ಕೇಳುತ್ತದೆ ಪುಟ್ಟ ಮಗು)
#ಅದೇ ಅವಳಿಗೆ ಆ ದೇವರು ಆಕಾಶದಲ್ಲಿ ಕಾಣ್ತಾ ಇವೆಯಲ್ಲ ಆ ಚುಕ್ಕಿಗಳು.ಅವುಗಳನ್ನೆಲ್ಲಾ ಎಣಿಸೋಕೆ ಕರೆಸಿಕೊಂಡಿದ್ದಾನೆ ಪುಟ್ಟ.ಅಕೆ ಇನ್ನೂ ಎಣಿಸ್ತಾನೇ ಇದಾಳೆ.ಇನ್ನೂ ಎಣಿಸೋದು ಮುಗಿದಿಲ್ಲ.ಎಣಿಸಿದ ತಕ್ಷಣ ಓಡೋಡಿ ಬರ್ತಾಳೆ ಪುಟ್ಟ.
#ಅಷ್ಟೊಂದು ಚುಕ್ಕಿಗಳ್ನ ಮಮ್ಮಿ ಒಂದೇ ಎಣಿಸಬೇಕಾ ಪಪ್ಪಾ? ಮಮ್ಮಿಗೆ ಎಣಿಸಿ ಎಣಿಸಿ ಕೈ ನೋವಾಗಿರುತ್ತೆ ಅಲ್ಲ ಪಪ್ಪಾ.ಮಮ್ಮಿಗೆ ಕೈ ನೋವಾದರೆ ಅಲ್ಲಿ ಯಾರು ನೋಡ್ಕೋತಾರೆ ಪಪ್ಪಾ‌.(ಅಳುವನು ಪುಟ್ಟ)
#ಆ ದೇವರು ನೊಡ್ಕೋತಾನೆ ಪುಟ್ಟ. ದೇವರಿಗೆ ಹೇಳಿದ್ದೀನಿ ಬೇಗ ನಿಮ್ಮಮ್ಮ ನ ಕಳಿಸೋಕೆ.ಆಗ್ಲಿ ಅಂದಿದಾನೆ.ಇನ್ನೇನು ಸ್ವಲ್ಪ ಎಣಿಸೋದಿದೆಯಂತೆ.ಎಣಿಸಿ ಬೇಗ ಬಂದ್ ಬಿಡ್ತಾಳೆ.ನೀನು ಮಲಗು ಪುಟ್ಟ.
#ಅಪ್ಪಾ,ನನಗ ಮಮ್ಮಿ ಬೇಕು ಬೇಕೇ ಬೇಕು(ಅಳುವನು ಪುಟ್ಟ).
#ಬರ್ತಾಳೆ ನೀನು ಮಲಗು ಪುಟ್ಟ,ಇವತ್ತು ಕನಸಲ್ಲಿ ಬಂದು ನಿನ್ನ ಮಾತಾಡಿಸ್ತಾಳೆ .ದೇವರಿಗೆ ಹೇಳಿದ್ದೀನಿ.ಕನಸಿನಲ್ಲಿ ಕಳಿಸು ಅಂತ.ನಿನಗೆ ಮಮ್ಮಿ ಬೇಕು ತಾನೆ .ಹಂಗಾದ್ರೆ ಬೇಗ ಮಲಗು ಜಾಣ ಮರಿ ಮಮ್ಮಿ‌ ಕನಸಲ್ಲಿ ಬರ್ತಾಳೆ.ಇನ್ನೆನು ಮಮ್ಮಿ ಕನಸಲ್ಲಿ ಬರೋ ಹೊತ್ತಾಯ್ತು. ಬೇಗ ಮಲಗು ಜಾಣ ಮರಿ.
#ಹಂಗಾ ಪಪ್ಪಾ.ಮಲಗ್ತೀನಿ.ಮಮ್ಮಿಗೆ ಬೇಗ ಬರೋಕೆ ಹೇಳು ಪಪ್ಪಾ.ಅವಳು ಕನಸಲ್ಲಿ ಬರ್ಲಿ .ಬಂದ್ರೆ ವಾಪಸ್ ಹೋಗೋಕೆ ಬಿಡಲ್ಲ.ಗಟ್ಟಿಯಾಗಿ ಹಿಡಕೋತೀನಿ ಪಪ್ಪಾ..ಗುಡ್ ನೈಟ್ ಪಪ್ಪಾ..
(ಮಗು ಮಲಗುವುದು.ಅವರಪ್ಪ ಕಣ್ಣೀರಿಡುತ್ತಾ ಮಗುವಿನ ಮುದ್ದು ಮುಖ ನೊಡುತ್ತಾ ದುಃಖಿಸುವನು...ಓ ದೇವರೇ ನೀನೆಷ್ಟು ಕ್ರೂರಿ)

*ಕೃಪೆ:ಮಲ್ಲಿಕಾರ್ಜನ ಸ್ವಾಮಿ ಹಿರೇಮಠ್.*                                                  ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059