ದಿನಕ್ಕೊಂದು ಕಥೆ. 497

Veeresh Arssikere:
*🌻ದಿನಕ್ಕೊಂದು ಕಥೆ🌻*
ನೀವು ಯಾರನ್ನಾದರೂ, ‘ಬದುಕಿನಲ್ಲಿ ನಿಮ್ಮ ಗುರಿಯೇನು?’ ಎಂದು ಕೇಳಿ ನೋಡಿ. ‘ನಾನು ಯಶಸ್ವಿಯಾಗಬೇಕು’, ತುಂಬಾ ಹಣ ಮಾಡಬೇಕು, ‘ಖುಷಿಯಾಗಿರಬೇಕು’ ಎಂದು ಹೇಳುತ್ತಾರೆ. ಆದರೆ ನಾನು ಹೇಳುವುದಾದರೆ ಅವೆಲ್ಲವೂ ಆಶಯಗಳೇ ಹೊರತು, ನಿರ್ದಿಷ್ಟ ಗುರಿಗಳಲ್ಲ. ಬದುಕಿನಲ್ಲಿ ನಿಮ್ಮ ಗುರಿ SMART ಆಗಿರಬೇಕು.
S- Specific.
‘ನಾನು ತೂಕ ಇಳಿಸಿಕೊಳ್ಳಬೇಕು’ ಎಂಬುದು ಆಸೆ ಅಥವಾ ಆಶಯವಷ್ಟೆ. ಆಶಯವೊಂದು ಗುರಿ ಎನಿಸಿಕೊಳ್ಳಬೇಕಾದರೆ ಅದಕ್ಕೊಂದು ನಿರ್ದಿಷ್ಟ ರೂಪ ಸಿಗಬೇಕು. ಉದಾಹರಣೆಗೆ: ನಾನು ಎರಡು ತಿಂಗಳಲ್ಲಿ 3 ಕೆಜಿ ತೂಕ ಕಳೆದುಕೊಳ್ಳಬೇಕು.
M- Measurable.
ನಿಮ್ಮ ಗುರಿ ಅಳತೆಗೆ ಸಿಗುವಂಥದ್ದಾಗಿಎಬೇಕು. ಅದನ್ನು ಅಳೆಯಲು ಬರದಿದ್ದರೆ ಸಾಧಿಸುವುದೂ ಕಷ್ಟವಾಗುತ್ತದೆ.
A- Achievable.
ಬದುಕಿನಲ್ಲಿ ನೀವು ಇಟ್ಟುಕೊಳ್ಳುವ ಗುರಿ ನಿಮಗೆ ಸಾಧಿಸಲು ಸಾಧ್ಯವಂಥದ್ದಾಗಿರಬೇಕು. ನಿಮ್ಮ ಸಾಮರ್ಥ್ಯ ಹಾಗೂ ಬಲಹೀನತೆಗಳ ಬಗ್ಗೆ ನಿಮಗೆ ಚೆನ್ನಾಗಿ ಅರಿವಿರಬೇಕು. ಇಲ್ಲದಿದ್ದರೆ ನಿಮ್ಮ ಗುರಿ ಬೇರೆಯವರಿಗೆ ಹುಚ್ಚುತನದಂತೆ ಕಾಣಿಸಬಹುದು ಅಥವಾ ನಿಲುಕದ ಗುರಿಯಿಂದ ನೀವು ನಿರಾಶರಾಗಬೇಕಾಗಬಹುದು.
R- Realistic
ನಿಮ್ಮ ಗುರಿ ವಾಸ್ತವಕ್ಕೆ ಆದಷ್ಟು ಹತ್ತಿರವಾಗಿರಬೇಕು. ನಾನು ಒಂದೇ ದಿನದಲ್ಲಿ 5 ಕೆಜಿ ತೂಕ ಇಳಿಸಿಕೊಳ್ಳುತ್ತೇನೆಂದು ಹೊರಡುವುದನ್ನು ಗುರಿಯೆಂದು ಕರೆಯಲಾಗದು.
T- Time bound
ನಿಮ್ಮ ಸಾಧನೆಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿಕೊಳ್ಳುವುದು ಉತ್ತಮ. ಈ ಕೆಲಸವನ್ನು ಇಂತಿಷ್ಟು ದಿನದೊಳಗೆ ಮುಗಿಸುತ್ತೇನೆ, ಇನ್ನು ನಾಲ್ಕು ವರ್ಷದೊಳಗೆ ನಾನು ಪ್ರಮೋಷನ್ ಪಡೆಯಬೇಕು…ಹೀಗೆ ನಿಮಗೆ ನೀವೇ ಸಮಯದ ಮಿತಿಯನ್ನು ಹಾಕಿಕೊಂಡರೆ ಗುರಿ ಸಾಧನೆ ಸುಲಭವಾಗುತ್ತದೆ.
***************************
ಊರೂರು ಅಲೆಯುತ್ತಿದ್ದ ಮನುಷ್ಯನೊಬ್ಬ ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ನಿಂತಿದ್ದ. ಅಲ್ಲಿಗೆ ಬಂದ ಸ್ಥಳೀಯನ ಬಳಿ ‘ಅಣ್ಣಾ ಈ ರಸ್ತೆಗಳು ಎಲ್ಲಿಗೆ ಹೋಗಿ ತಲುಪುತ್ತವೆ?’ ಎಂದು ಕೇಳಿದ. ಅದಕ್ಕೆ ಸ್ಥಳೀಯ ನಿಮಗೆ ಎಲ್ಲಿಗೆ ಹೋಗಬೇಕಿದೆ?’ ಎಂದು ಪ್ರಶ್ನಿಸುತ್ತಾನೆ. ಪ್ರಯಾಣಿಕ ಎಲ್ಲಿಗೆ ಹೋಗಬೇಕೆಂದು ನನಗೆ ಗೊತ್ತಿಲ್ಲ’ ಎನ್ನುತ್ತಾನೆ. ಆಗ ಸ್ಥಳೀಯ ಹೇಳುತ್ತಾನೆ, ‘ಹಾಗಾದರೆ ನಿಮ್ಮ ಪ್ರಶ್ನೆಗೆ ಉತ್ತರ ಹೇಳಿ ಪ್ರಯೋಜನವಿಲ್ಲ. ಯಾವ ರಸ್ತೆಯಲ್ಲಿ ಬೇಕಾದರೂ ಹೋಗು, ಏನೂ ವ್ಯತ್ಯಾಸವಿಲ್ಲ’ ಎಂದು ಹೇಳಿ ಹೊರಟು ಹೋಗುತ್ತಾನೆ. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲಾ, ಒಂದು ಗುರಿಯಿರಬೇಕು. ಇಲ್ಲದಿದ್ದರೆ ಊರೂರು ತಿರುಗುವ ಪ್ರಯಾಣಿಕನ ಪ್ರವಾಸದಂತೆ ಬದುಕು ವ್ಯರ್ಥವಾಗುತ್ತದೆ!

*ಕೃಪೆ:ಗೌರ್ ಗೋಪಾಲ್ ಪ್ರಭು*.                  ಸಂಗ್ರಹ :ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097