ದಿನಕ್ಕೊಂದು ಕಥೆ. 629
*🌻ದಿನಕ್ಕೆ ಇನ್ನೊಂದು ಕಥೆ🌻 ಯಾಕೆ ತಂದೆ ಹೀಗೆ*
ಕೃಪೆ: e-book 3 group.
ಮಗ ಶಾಲೆಗೆ ಹೋಗುತಿದ್ದ , ಅದ್ಯಾಪಕರು ಕೊಟ್ಟ ಹೋಂ ವರ್ಕ್ ಮಾಡಿದ್ದೀಯಾ ಎಂದು ತಂದೆ ಕೇಳಿದರು
ಆಯ್ತು ಎಂದು ಮಗನು ಉತ್ತರಿಸಿದ ಎಲ್ಲಾ ಕಾರ್ಯದಲ್ಲೂ ತಂದೆ ಮಗನನ್ನು ಪ್ರಶ್ನಿಸುತ್ತಿದ್ದರು.
ಗೇಟ್ ತೆರೆದು ಬಿಟ್ಟು ಹೋದರೆ ಗೇಟ್ ಹಾಕಿ ಹೋಗೆಂದೂ ಪೈಪಲ್ಲಿ ನೀರಿನ ಹನಿಗಳು ಬೀಳುತ್ತಿದ್ಧರೆ ಪೈಪ್ ಸರಿಯಾಗಿ ಬಂದ್ ಮಾಡೆಂದೂ, ಫ್ಯಾನ್ ಸ್ವಿಚ್ ಆನ್ ಮಾಡಿ ಆಫ್ ಮಾಡದೆ ಹೋದರೆ ಸುಮ್ಮನೆ ಯಾಕೆ ಫ್ಯಾನ್ ಕರಗಿಸ್ತೀಯ, ನೆನೆದ ಬಟ್ಟೆಯನ್ನು ಬೆಡ್ ಶೀಟ್ ಮೇಲೆ ಇಟ್ಟರೆ ನಿನ್ನ ಬಟ್ಟೆಯಿಂದ ಬೆಡನ್ನೂ ನೆನೆಸ್ತೀಯ ಎಂದೆಲ್ಲ ಹೇಳಿ ಗದರಿಸುತ್ತಿದ್ದರು
ತಂದೆಯ ಮಾತನ್ನು ಕೇಳಿ ಕೇಳಿ ಬೆಳೆದ ನಿಂತ ಮಗನಿಗೆ ತಂದೆಯ ಮಾತು ಕಿರಿಕಿರಿಯಾಗತೊಡಗಿತು
ಎಲ್ಲ ವಿಷಯದಲ್ಲೂ ನನಗೆ ಕಿರಿಕಿರಿ ಮಾಡುವ ತಂದೆಯಿಂದ ದೂರವಾಗಬೇಕೆಂದು ಚಿಂತಿಸಿದ ಆದರೆ ಯಾವ ಕೆಲಸವಿಲ್ಲದೆ ತಂದೆಯಿಂದ ದೂರವಾದರೆ ಗತಿಯೇನೆಂದು ಚಿಂತಿಸಿದ
ಎಷ್ಟು ಗದರಿಸಿದರೂ ಬೇಕಾದದ್ದನ್ನು ಕೊಡುತ್ತಿದ್ದರು
ಅದೊಂದು ದಿನ ಇಂಟರ್ವ್ಯೂಗೆ ಕರೆ ಬಂತು ಒಳ್ಳೆಯ ಸ್ಯಾಲರಿ ಇರುವ ಜೋಬ್ . ಜೋಬ್ ಸಿಕ್ಕದರೆ ಜೀವಿಸಲು ಚಿಂತೆಯಿಲ್ಲ
ಆಗಲೇ ತೀರ್ಮಾನಿಸಿದ ನಾನು ಈ ಕೆಲಸಕ್ಕೆ ಸೇರಿ ಒಳ್ಳೆಯ ಸಂಪತ್ತು ಗಳಿಸಿ ಶತ್ರುವಾದ ತಂದೆಯಿಂದ ದೂರವಾಗ ಬೇಕು ಇನ್ನು ಮುಂದೆ ನನ್ನ ತಂಟೆಗೆ ಬರಬಾರದು
ಇಂಟರ್ವ್ಯೂಗೆ ಹೋಗುವಾಗಲೂ ನಿನ್ನ ಮಕ್ಕಳಾಟ ಬಿಟ್ಟು ಸರಿಯಾಗಿ ಉತ್ತರಿಸು ಎಂದು ತಂದೆ ಹೇಳಿದರು
ಅವರ ಮಾತಿಗೆ ಬೆಲೆ ಕೊಡದೆ ಅವರಿಂದ ದೂರವಾಗಿ ಯಾವ ಕಿರಿಕಿರಿ ಇಲ್ಲದೆ ಜೀವಿಸಬಹುದೆಂದು ನೆನೆದು ಮುಂದೆ ನಡೆದನು ಇಂಟರ್ವ್ಯೂ ಹಾಲಿಗೆ ಹೋಗುವಾಗ ಗೇಟ್ ತೆರೆದಿತ್ತು ಗೇಟ್ ಹಾಕಿ ಹೋಗೆಂದು ಹೇಳುವ ತಂದೆಯ ಮಾತು ನೆನಪಾಗಿ ಗೇಟ್ ಹಾಕಿ ಒಳ ನಡೆದನು ಹಾಲ್ನಲ್ಲಿ ಎಲ್ಲಾ ಕಡೆಯೂ ಫ್ಯಾನ್ ತಿರುಗುತಿತ್ತು ಅಲ್ಲೂ ತಂದೆಯ ಮಾತು ನೆನಪಾಗಿ ಅಗತ್ಯವಿಲ್ಲದೆ ತಿರುಗುವ ಫ್ಯಾನ್ ಆಫ್ ಮಾಡಿದನು
ಸುಮ್ಮನೆ ನೀರಿನ ಹನಿಗಳು ಬೀಳುತ್ತಿದ್ದವು ಅದನ್ನು ನಿಲ್ಲಿಸಿದನು
ಅರ್ದ ಗಂಟೆಯ ಬಳಿಕ ಮೆನೇಜರ್ ಬಂದು ಹೇಳಿದರು "ನಾಳೆಯಿಂದ ನೀವು ಕೆಲಸಕ್ಕೆ ಬನ್ನಿ ನಿಮ್ಮನ್ನು ನಾವು ಆಯ್ಕೆ ಮಾಡಿದ್ದೇವೆ.
ಇಂಟರ್ವ್ಯೂ ನಡೆಯದೇ ಹೇಗೆ ಆಯ್ಕೆ ಮಾಡಿದ್ದೀರಿ
ನೀವು ಗೇಟ್ ಹಾಕಿದ್ದನ್ನೂ ಫ್ಯಾನ್ ಆಫ್ ಮಾಡಿದ್ದನ್ನೂ ನೀರು ನಿಲ್ಲಿಸಿದ್ದನ್ನೂ ನಾವು ಸಿಸಿ ಯಲ್ಲಿ ನೋಡಿದ್ದೇವೆ ನೀವಲ್ಲದೆ ಬೇರೆಯಾರೂ ಅದನ್ನು ಚಿಂತಿಸಲಿಲ್ಲ ನಿಮ್ಮಂತವರು ನಮಗೆ ಬೇಕು
ಮನೆಗೆ ಬಂದಾಗ ತಂದೆಯನ್ನು ಅಪ್ಪಿ ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳಿದ ಕ್ಷಮಿಸಿ ಅಪ್ಪಾ ನೀವು ಗದರಿಸಿ ಕಲಿಸಿದ್ದು ನನಗೆ ಈ ಕೆಲಸ ಸಿಗಲು ಕಾರಣವಾಯಿತು ನೀವು ನನಗೆ ಸ್ಫೂರ್ತಿ ನಿಮ್ಮಿಂದ ದೂರವಾಗಲಾರೆ.
*ಪಾಠ : ಮಾತಾ ಪಿತರ ಮಾತು ಅಮೂಲ್ಯ.*
Superb.....I like it very much
ReplyDeleteBut I am staying in hostel and reading this one ...I am 😭 crying like anything....my dad is same to same .....I love my dad very much.....miss u papa...
Delete