ದಿನಕ್ಕೊಂದು ಕಥೆ. 689

*🌻ದಿನಕ್ಕೊಂದು ಕಥೆ🌻*                                                                                  ಒಮ್ಮೆ ಬಿಲ್ ಗೇಟ್ಸ್ ನತ್ರ ಮಾತನಾಡುತ್ತಿರುವಾಗ ಒಬ್ಬಾತ ಹೇಳಿದ - " ಜಗತ್ತಿನಲ್ಲಿ ನಿಮಗಿಂತಲೂ ದೊಡ್ಡ ಶ್ರೀಮಂತರಿಲ್ಲ...."
ಆಗ ಬಿಲ್ ಗೇಟ್ಸ್ ತನ್ನ ಒಂದು ಅನುಭವವನ್ನು ಹೀಗೆ ವಿವರಿಸುತ್ತಾರೆ -

ಕೆಲವು ವರ್ಷಗಳ ಹಿಂದೆ ನನ್ನನ್ನು ಕೆಲಸದಿಂದ ತೆಗೆದುಹಾಕಿದ ಸಮಯವಾಗಿತ್ತು....
ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಒಬ್ಬ ನ್ಯೂಸ್ ಪೇಪರ್ ಮಾರುವ ಹುಡುಗನನ್ನು ನೋಡಿದೆ... ಆ ಹುಡುಗನ ಕೈಯಲ್ಲಿದ್ದ ಪೇಪರ್ ನ ಹೆಡ್ ಲೈನ್ಸ್ ಓದಿದಾಗ ಒಂದು ಪೇಪರ್ ಖರೀದಿಸಲು ಮುಂದಾದೆ. ಆ ಹುಡುಗನನ್ನು ಕರೆದೆ.. ಆದರೆ ನನ್ನ ಬಳಿ ಚಿಲ್ಲರೆ ಇರಲಿಲ್ಲ.... ಆದ್ದರಿಂದ ನಾನು ಪೇಪರ್ ಬೇಡಾ ಅಂದು ಬಿಟ್ಟೆ..
ಆದರೆ ಆ ಕಪ್ಪು ವರ್ಣದ ಹುಡುಗ ಒಂದು ಪೇಪರನ್ನು ತೆಗೆದು ನನಗೆ ಕೊಟ್ಟ..
ನನ್ನ ಬಳಿ ಚಿಲ್ಲರೆ ಇಲ್ಲ ಅಂತ ಹೇಳಿದಾಗ , ಪರವಾಗಿಲ್ಲ ಇದು ಫ್ರೀಯಾಗಿ ಇರಲಿ ಅಂತ ಹೇಳಿ ಪೇಪರನ್ನು ಕೊಟ್ಟು ಹೊರಟು ಹೋದ....
ಸುಮಾರು ಮೂರು ತಿಂಗಳ ನಂತರ ಪುನಃ ನಾನು ಅದೇ ವಿಮಾನ ನಿಲ್ದಾಣಕ್ಕೆ ಹೋಗಬೇಕಾಯಿತು.
ಪುನಃ ಹಿಂದಿನ ಹಾಗೆ ಹೆಡ್ ಲೈನ್ಸ್ ನೋಡಿದ ನಾನು ಆ ಹುಡುಗನಿಂದ ಪೇಪರ್ ಖರೀದಿಸಲು ಮುಂದಾದೆ. ಅಂದು ಕೂಡಾ ನನ್ನ ಬಳಿ ಚಿಲ್ಲರೆ ಇರಲಿಲ್ಲ.
ಅವತ್ತು ಕೂಡಾ ಆ ಹುಡುಗ ಫ್ರೀಯಾಗಿ ನನಗೆ ಪೇಪರ್ ಕೊಟ್ಟ.. ನಾನು ಆತನಿಂದ ಪೇಪರನ್ನು ತೆಗೊಳ್ಳಲು ಹಿಂಜರಿದೆ..
ಆಗ ಆತ ಪರವಾಗಿಲ್ಲ ಇಟ್ಟುಕೊಳ್ಳಿ... ನನ್ನ ಲಾಭದಲ್ಲಿ ಒಂದು ಚಿಕ್ಕ ಪಾಲು ಇದಾಗಿದೆ ಅಂತ ಹೇಳುತ್ತಾ ಒತ್ತಾಯಿಸಿ ಪೇಪರ್ ಕೊಟ್ಟು ಹೋದ...

ಹತ್ತೊಂಬತ್ತು ವರ್ಷಗಳ ನಂತರ ನಾನು ಶ್ರೀಮಂತನಾದೆ...
ಅದ್ಯಾಕೋ ನನಗೆ ಆ ಹುಡುಗನನ್ನೊಮ್ಮೆ ಕಾಣಬೇಕು ಅಂತ ಮನಸಾಯಿತು.
ಒಂದೂವರೆ ತಿಂಗಳ ಹುಡುಕಾಟದ ಬಳಿಕ ಆ ಹುಡುಗ ಸಿಕ್ಕಿದ...
ಆತನತ್ರ ನಾನು ಕೇಳಿದೆ - " ನನ್ನ ಗುರುತ್ತು ಇದೆಯಾ?"
ಹೌದು ಸರ್ ಗುರುತು ಸಿಕ್ಕಿದೆ . ತಾವು ಅತ್ಯಂತ ದೊಡ್ಡ ಶ್ರೀಮಂತ ಬಿಲ್ ಗೇಟ್ಸ್ ಅಲ್ಲವೇ?
ಕೆಲವು ವರ್ಷಗಳ ಹಿಂದೆ ನೀನು ನನಗೆ ಎರಡು ನ್ಯೂಸ್ ಪೇಪರ್ ಫ್ರೀಯಾಗಿ ಕೊಟ್ಟದ್ದು ನಿನಗೆ ನೆನಪಿದೆಯಾ?
ಅದಕ್ಕೆ ಪ್ರಾಯಶ್ಚಿತ್ತ ವಾಗಿ ನಿನಗೆ ಏನಾದರೂ ಕೊಡಲು ನಾನು ಬಯಸುವೆ... ನೀನು ಏನು ಬೇಕಾದರೂ ಕೇಳಬಹುದು...
ಆ ಹುಡುಗ - ತಮ್ಮಿಂದ ನನಗೆ ಅದರ ಪ್ರಾಯಶ್ಚಿತ್ತ ವನ್ನು ಕೊಡಲು ಸಾಧ್ಯವಿಲ್ಲ ಸರ್...
ಬಿಲ್ ಗೇಟ್ಸ್ - ಏನು ಕಾರಣ....!??
ಆ ಹುಡುಗ - ನಾನು ಬಡವನಾಗಿದ್ದಾಗ ನಾನು ನಿಮಗೆ ಕೊಟ್ಟೆ...
ಆದರೆ ತಾವು ಶ್ರೀಮಂತರಾದ ಬಳಿಕ ನನಗೆ ಕೊಡಲು ತಾವು ಬಂದಿದ್ದೀರಿ...

ಹಾಗಿರುವಾಗ ಬಡವನಾಗಿದ್ದ ಅವಸ್ಥೆಯಲ್ಲಿ ನಾನು ಕೊಟ್ಟದ್ದು ಮತ್ತು ಶ್ರೀಮಂತನಾದ ಬಳಿಕ ತಾವು ಕೊಡುವುದಕ್ಕೂ ಸಾಮ್ಯತೆ ಇಲ್ಲ ಸರ್....

ಇಷ್ಟು ಹೇಳಿದ ನಂತರ ಬಿಲ್ ಗೇಟ್ಸ್ ತನ್ನನ್ನು ಅತಿ ದೊಡ್ಡ ಶ್ರೀಮಂತ ಅಂತ ಹೇಳಿದ ವ್ಯಕ್ತಿಯತ್ರ ಹೇಳುತ್ತಾರೆ - ಈಗ ಹೇಳಿ ಅತ್ಯಂತ ದೊಡ್ಡ ಶ್ರೀಮಂತ ಆ ಕಪ್ಪಾದ ಹುಡುಗನಲ್ಲವೇ...?

( ದಾನ ಧರ್ಮ ಮಾಡಲು ಶ್ರೀಮಂತರಾಗಬೇಕಿಲ್ಲ ಅಥವಾ ಶ್ರೀಮಂತನಾಗುವವರೆಗೂ ಕಾಯಬೇಕಿಲ್ಲ... ವೇಗ
ಸಹಾಯ ಮಾಡುವ ಗುಣಕ್ಕೆ ಸಮಯದ ಪರಿಧಿಯಿಲ್ಲ. ಶ್ರೀಮಂತ ಬಡವ ಎಂಬ ಭೇದಭಾವ ಇಲ್ಲ. ಆ ಗುಣವು ಹೃದಯದಿಂದ ಬರಬೇಕು)
(ಕೃಪೆ : ವ್ಯಾಟ್ಸಪ್ ಗೆಳೆಯರು)

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059