ದಿನಕ್ಕೊಂದು ಕಥೆ. 692

ದಿನಕ್ಕೊಂದು ಕಥೆ                                                            ಶಿಕ್ಷಕರ_ಸಂತೃಪ್ತಿ

ಒಬ್ಬ_ಶಿಕ್ಷಕರನ್ನು_ವಿಧ್ಯಾರ್ಥಿ_ಕೇಳಿದನು ‌.‌.
ಸರ್ ನೀವು ಕಲಿಸುತ್ತಿರುವ ವಿದ್ಯೆಯಿಂದ ನಾವು ಬಹಳ ಉನ್ನತ ಸ್ಥಾನಕ್ಕೆ ಸೇರಿಕೊಂಡಾಗ , ನಿಮಗೆ ಅಸೂಯೆ ಅಗುವುದಿಲ್ಲವೆ ,

ಏಕೆಂದರೆ ನೀವೂ ಸೇರಿಕೊಳ್ಳದ ಸ್ಥಾನಕ್ಕೆ ನಾವು ಸೇರಿಕೊಂಡಿದ್ದೆವೆ..

ನೀವು ಮಾತ್ರ ಇದೇ ತರಹ ಜೀವನ ಪರ್ಯಂತ ಇರುತ್ತೀರ..
ಇದರಿಂದ ನಿಮಗೆ ನೋವು ಆಗುವುದಿಲ್ಲವೇ.. ?

ಎಂದು ಕೇಳಿದನು..

ವಿಧ್ಯಾರ್ಥಿ ಕೇಳಿದ ಪ್ರಶ್ನೆಗೆ
ಶಿಕ್ಷಕರು ಸ್ವಲ್ಪ #ತರ್ಕಬದ್ಧವಾಗಿ ಹೇಳಿದರು..

#ಐವತ್ತು_ಅಂತಸ್ತುಗಳ ಕಟ್ಟಡವನ್ನು ಯಾರು ಕಟ್ಟುತ್ತಾರೆ..

ಐವತ್ತು ಅಡಿಗಳ ಮನುಷ್ಯ  ಅಲ್ಲ ತಾನೇ.

ಅರು ಅಡಿಗಳ ಒಳಗಡೆ ಇರುವ ಮನುಷ್ಯ ಐವತ್ತು ಅಂತಸ್ತಿನ ಕಟ್ಟಡವನ್ನು ಕಟ್ಟುತ್ತಾನೆ.

ಐವತ್ತು ಅಂತಸ್ತುಗಳ ಕಟ್ಟಡವನ್ನು ಕಟ್ಟಲು ಐವತ್ತು ಅಡಿ ಮನುಷ್ಯ ಬೇಕೆಂದರೆ ಹೇಗೆ ?

#ಎಷ್ಟೋ ಜನರಿಗೆ ನೆರಳು ಕೊಡುವ #ಮರ ತನಗೆ ನೆರಳು ಇಲ್ಲ ಅಂದರೆ ಈ ಸೃಷ್ಟಿಯಲ್ಲಿ ಇರುವ ಪ್ರಕೃತಿಗೆ ಅರ್ಥವಿಲ್ಲ..

ತನ್ನ ನೆರಳು ಬಗ್ಗೆ ಯೋಚನೆ ಮಾಡದೆ ಇದ್ದರೆ ತಾನೆ ಹತ್ತಾರು ಜನರಿಗೆ ನೆರಳು ಕೊಡಲು ಸಾಧ್ಯ...

ತನ್ನ ನೆರಳಿನಲ್ಲಿ ಎಷ್ಟೋ ಜನ ಉನ್ನತಿ ಹೊಂದಿದರು..
ಅವರ ಉನ್ನತಿಯೇ ತನ್ನ ಸಾಧನೆ ಎಂದು ಸಂತೃಪ್ತಿ ಹೊಂದಿದರೆ ಅದಕ್ಕಿಂತ ಮಿಗಿಲಾದ ಅನಂದ ಮತ್ತೊಂದಿಲ್ಲ...

ಅದನ್ನೇ ನಾನು ಅನುಭವಿಸುತ್ತೇನೆ ಎಂದು ಶಿಕ್ಷಕರು ಹೇಳಿದರು

"Being a Teacher"

ಕೃಪೆ :ವಾಟ್ಸ್ ಆಪ್ ಗ್ರೂಪ್

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059