ದಿನಕ್ಕೊಂದು ಕಥೆ 904

*🌻ದಿನಕ್ಕೊಂದು ಕಥೆ🌻*

*ಚಿಕ್ಕ ಬದಲಾವಣೆ ದೊಡ್ಡ ವ್ಯತ್ಯಾಸಕ್ಕೆ ಬುನಾದಿ*

ಬೆಳಗಿನ ಜಾವ ಒಬ್ಬ ಮುದುಕ ವಾಕಿಂಗ್ ಮಾಡಲು ಸಮುದ್ರದ ಕಿನಾರೆಯ ಬಳಿ ಬಂದಾಗ, ಸಾವಿರಾರು ನಕ್ಷತ್ರ ಮೀನುಗಳು ದಡದಲ್ಲಿರುವುದನ್ನು ನೋಡಿದ. ಮುಂಜಾನೆಯ ಸಮುದ್ರದ ಉಬ್ಬರ-ಇಳಿತದ ರಭಸದಿಂದಾಗಿ ಮೀನುಗಳೆಲ್ಲವು ದಡಕ್ಕೆ ಬಂದು ಸೇರಿದ್ದವು.  ಆಗತಾನೆ ಸೂರ್ಯೊದಯವಾಗುತ್ತಿರುವುದರಿಂದ ಆ ಮೀನುಗಳು ಇನ್ನು ಜೀವಂತವಾಗಿದ್ದವು. ಅವುಗಳು ಇಲ್ಲಿಯೆ ಇದ್ದರೆ ಸೂರ್ಯನ ಬಿಸಿಲಿನಿಂದ ಸತ್ತು ಹೋಗುವುದು. ಹಾಗಾಗಿ ಆ ಮುದುಕ ಅವುಗಳಿಗೆ ಸಹಾಯ ಮಾಡಬೇಕೆಂದು ನಿಶ್ಚಯಿಸಿದ. ಒಂದೊಂದೆ ನಕ್ಷತ್ರ ಮೀನನ್ನು ಹಿಡಿದು ಸಮುದ್ರಕ್ಕೆ ಎಸೆದ. ಹೀಗೆ ಎಸೆಯುದನ್ನು ನೋಡಿದ ಪಕ್ಕದಲ್ಲಿದ್ದ ವ್ಯಕ್ತಿಗೆ ಇವನು ಏನು ಮಾಡುತ್ತಿದ್ದಾನೆಂದು ಅರ್ಥವಾಗದೆ, ಅವನನ್ನು ನಿಲ್ಲಿಸಿ “ಏನು ಮಾಡುತ್ತಿದ್ದಿರಾ? ಇಲ್ಲಿ ಸಾವಿರಾರು ನಕ್ಷತ್ರ ಮೀನುಗಳಿವೆ. ಏಷ್ಟನ್ನು ನೀವು ಒಬ್ಬರೆ ಬದುಕಿಸಲು ಸಾಧ್ಯ? ಇದರಿಂದ ಏನು ದೊಡ್ಡ ವ್ಯತ್ಯಾಸ ಆಗುತ್ತದೆ?” ಆ ಮುದುಕ ಅವನ ಮಾತಿಗೆ ಕಿವಿಗೊಡಲಿಲ್ಲ. ಅವನು ಮತ್ತೆ ಇನ್ನೊಂದು ಮೀನನ್ನು ಹಿಡಿದು ನೀರಿಗೆ ಎಸೆದ ಮತ್ತು ಹೇಳಿದ “ಇದು ಒಂದು ನನಗೆ ವ್ಯತ್ಯಾಸ ಕೊಡುತ್ತದೆ.”

“ನಿಜ, ನಮ್ಮ ಜೀವನದಲ್ಲಿ ಈ ಚಿಕ್ಕ ಚಿಕ್ಕ ಬದಲಾವಣೆಗಳಿಂದಲೇ ಮುಂದೆ ದೊಡ್ಡ ಬದಲಾವಣೆ ಸಾಧ್ಯ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆಯಂತೆ. ನಾನೊಬ್ಬನೆ ಏನು ಮಾಡಲು ಸಾಧ್ಯ? ಈ ಮಾತು ಸರ್ವೆ ಸಾಮಾನ್ಯ. ಆದರೆ ಪ್ರತಿಯೊಬ್ಬರ ಒಂದು ಚಿಕ್ಕ ಚಿಕ್ಕ ಬದಲಾವಣೆಯಿಂದ ಬಹಳಷ್ಟು ದೊಡ್ಡ ಬದಲಾವಣೆ ಮಾಡಲು ಸಾಧ್ಯ.”

ಕೃಪೆ:ಹೊಸತನ
ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097