ದಿನಕ್ಕೊಂದು ಕಥೆ 929
*🌻ದಿನಕ್ಕೊಂದು ಕಥೆ🌻*
ಹೆಂಡತಿ ಹೇಳಿದಳು - ರೀ ಇವತ್ತು ಪದೆ ಪದೆ ಬಟ್ಟೆ ಬದಲಿಸ ಬೇಡಿ....
ಯಜಮಾನ - ಯಾಕೆ ?
ಹೆಂಡತಿ- ನಮ್ಮ ಮನೆ ಕೆಲಸದವಳು 3 ದಿನ ರಜೆಗೆ ಹೋಗುತ್ತಾಳೆ.
ಯಜಮಾನ - ಯಾಕೆ ?
ಹೆಂಡತಿ - ನಾವು ಅವಳಿಗೆ ಗಣಪತಿ ಹಬ್ಬಕ್ಕೆ ರಜೆ ಕೊಟ್ಟಿಲ್ಲ ನಮ್ಮ ಮನೆ ಕೆಲಸ ಹೆಚ್ಚಿದೆ ಎಂದು ಆದರಿಂದ ಅವಳು ಅವಳ ಮಗಳ ಮನೆಗೆ ಹೋಗಿಲ್ಲ ಈಗ ಹೋಗಿ ಮಮ್ಮಗಳನ್ನು ನೋಡಿ ಬರುತ್ತೇನೆ.... ನೆನಪಾಗುತ್ತಿದೆ ಎನ್ನುತ್ತಿದ್ದಳು ಅದಕ್ಕೆ ಹೋಗಿ ಬಾ ಎಂದೇ.
ಯಜಮಾನ - ಹು.... ಕಣೆ ಸರಿ ಜಾಸ್ತಿ ಬಟ್ಟೆ ಬಳಸುವುದಿಲ್ಲ.
ಹೆಂಡತಿ - ರೀ...... ಮತ್ತೆ ನಾನು ಅವಳಿಗೆ ಗಣಪತಿ ಹಬ್ಬದ ಬೋನಸ್ ಆಗಿ 500 ಕೊಡಲಾ?
ಯಜಮಾನ - ಈಗ ದೀಪಾವಳಿ ಬರ್ತಾ ಇದೆಯಲ್ಲಾ ಆವಾಗ ಕೊಡೋಣ.
ಹೆಂಡತಿ - ಇಲ್ಲ ರೀ, ಪಾಪ ಅವಳು ಕಡೂ ಬಡವಳು ಮಗಳ ಮನೆಗೆ ತನ್ನ ಮಮ್ಮಗಳನ್ನು ನೋಡಲು ಹೋಗುತ್ತಿದ್ದಾಳೆ ಕಣ್ರೀ, ಈಗಿನ ದುಭಾರಿ ದುನಿಯಾದಲ್ಲಿ ಪಾಪ ಅವಳ ಸಂಬಳದಲ್ಲಿ ಏನು ಖರೀದಿ ಮಾಡಲು ಸಾಧ್ಯ? ಮಮ್ಮಗಳನ್ನು ನೋಡಲು ಹೋಗುತ್ತಿದ್ದಾಳೆ ಪಾಪ ಕಣ್ರೀ.
ಯಜಮಾನ - ನೀನು ಅವಶ್ಯಕತೆಗಿಂದ ಹೆಚ್ಚು ಜನರ ಪಾಪ ನೋಡ್ತಿಯ.
ಹೆಂಡತಿ - ರೀ...... ಚಿಂತಿಸಬೇಡಿ ನಾನು ಇವತ್ತು ಪಿಜ್ಜಾ ತಿನ್ನುವ ಕಾರ್ಯಕ್ರಮ ಕ್ಯಾನ್ಸಲ್ ಮಾಡಿ ಬಿಡುತ್ತೇನೆ...ಸುಮ್ನೆ ಯಾಕೆ ಆ ಎಂಟು ರೊಟ್ಟಿಯ ತುಂಡಿನ ಹಿಂದೆ 500 ರೂಪಾಯಿ ಹಾಕುವುದು ಅಲ್ವಾ ?
ಯಜಮಾನ - ವಾರೇ ವ್ಹಾ.... ನಮ್ಮ ಬಾಯಿಂದ ಪಿಜ್ಜಾ ಕಸಿದು ಕೆಲಸದವಳಾಕೆಯ ಬಾಯಿಗೆ ?
3 ದಿನಗಳ ನಂತರ.....
ಯಜಮಾನ - ಏನಮ್ಮಾ... ಹೇಗಿತ್ತು ನಿನ್ನ ರಜಾ ದಿನಗಳು ?
ಮನೆಯ ಆಳು - ಸಾಹೇಬ್ರೆ ತುಂಬಾ ಚೆನ್ನಾಗಿತ್ತು, ಆಕ್ಕಾ 500 ರೂಪಾಯಿ ಕೊಟ್ಟಿದ್ರಲ್ಲಾ ಬೋನಸ್, ಅದರಿಂದ ತುಂಬಾ ಸಹಾಯ ಆಯ್ತು.
ಯಜಮಾನ - ಹಾಗಂದ್ರೆ....??? ಮಗಳ ಮನೆಗೆ ಹೋಗಿ ಬಂದೆಯಾ? ಮಮ್ಮಗಳನ್ನು ಭೇಟಿಯಾಗಿ ಬಂದೆಯಾ ?
ಮನೆಯ ಆಳು - ಹೌದು ಸಾಹೇಬ್ರೆ, ತುಂಬಾ ಮೋಜು ಮಸ್ತಿ ಆಯ್ತು, 2 ದಿನದಲ್ಲಿ 500 ರೂಪಾಯಿ ಖರ್ಚು ಮಾಡಿದೆ.
ಯಜಮಾನ - ಹೌದಾ.... ???? ಅಂದ್ರೆ ಏನು ಮಾಡಿದೆ 500 ರೂಪಾಯಿಯನ್ನು ನೀನು?
ಮನೆಯ ಆಳು - ಮಮ್ಮಗಳಿಗಾಗಿ 150 ರೂಪಾಯಿಯ ಬಟ್ಟೆ ತೆಗೆದು ಕೊಂಡೆ, 40 ರೂಪಾಯಿಯ ಒಂದು ಗೊಂಬೆ, 50 ರೂಪಾಯಿಯ ಮಿಟಾಯಿ, 50 ರೂಪಾಯಿಯ ದೇವರ ಹುಂಡಿಗೆ ಹಾಕಿದೆ, 25 ರೂಪಾಯಿಯ ಬಳೆಗಳು ಮಗಳಿಗಾಗಿ, 60ರೂಪಾಯಿ ಹೋಗುವ ಖರ್ಚು,50ರೂಪಾಯಿಯ ಬೆಲ್ಟ್ ಅಳಿಯರಿಗೆ, ಉಳಿದ 75 ರೂಪಾಯಿ ಮಮ್ಮಗಳಿಗೆ ಶಾಲೆಗೆ ಹೋಗಲು ಪಟ್ಟಿ, ಪೆನ್ನ ಬೇಕು ಎನ್ನುತಿದ್ದಳು ಅವಳಿಗೆ ಬೇಕಾದಷ್ಟು ಖರೀದಿ ಮಾಡು ಎಂದು ಕೊಟ್ಟೆ .... ಮನೆಯ ಆಳು ನೆಲ ಒರಿಸುವಾಗ ತನ್ನ ನಾಲಿಗೆಯಲ್ಲಿಯೇ ಇದ್ದ ಖರ್ಚಿನ ಲೆಕ್ಕ ಹೇಳಿದಳು.
ಯಜಮಾನ - 500 ರೂಪಾಯಿಯಲ್ಲಿ ಇಷ್ಟೆಲ್ಲ ? ? ??
ಯಜಮಾನ ಆಶ್ಚರ್ಯನಾಗಿ ಮನಸ್ಸಿನಲ್ಲೇ ಯೋಚಿಸಲು ಸುರು ಮಾಡಿದ. ಅವನ ಕಣ್ಣು ಮುಂದೆ ಎಂಟು ತುಂಡು ಮಾಡಿದ ಪಿಜ್ಜಾ ಓಡಾಡಲು ಸುರುವಾಯಿತು. ಒಂದೊಂದು ತುಂಡು ಅವನ ತಲೆಗೆ ಸುತ್ತಿಗೇಯ ಪೆಟ್ಟು ಹೊಡೆಯಲು ಶುರುವಾಯಿತು.... ತಾನು ಪಿಜ್ಜಾಗಾಗಿ ಮಾಡುವ ಒಂದು ಖರ್ಚು, ಅವಳು ತನ್ನ ಕುಟುಂಬದ ಜನರಿಗೆ ಒಂದೊಂದು ತುಂಡು ಹಂಚಿ ಕೊಂಡ ಲೆಕ್ಕ ಅವನ ತಲೆ ಕೆಡಿಸಲು ಸುರುಮಾಡಿತು. ಮೊದಲ ತುಂಡು ಮಮ್ಮಗಳ ಬಟ್ಟೆ, ಎರಡನೆಯದು ಗೊಂಬೆ, ಮೂರನೆಯ ತುಂಡು ಮಿಟಾಯಿ, ನಾಲ್ಕು ಮಂದಿರಕ್ಕೆ ಕಾಣಿಕೆ, 5ನೇಯದು ಅವಳು ಹೋದ ಖರ್ಚು 6ನೇಯದು ಅಳಿಯನಿಗೆ ಬೆಲ್ಟು 7ನೇಯದು ಮಗಳಿಗೆ ಬಳೆ 8ನೇಯದು ಮಮ್ಮಗಳಿಗೆ ಪೆನ್ನು ಪಟ್ಟಿ ಕೊಳ್ಳುವ ಖರ್ಚು.
ಯಜಮಾನ ಇವತ್ತಿನವರೆಗೆ ಪಿಜ್ಜಾದ ಒಂದೇ ಮುಖವನ್ನು ನೋಡಿದ್ದ ಎಂದಿಗೂ ಅದನ್ನು ತಿರುಗಿಸಿ ನೋಡಿರಲಿಲ್ಲ ಪಿಜ್ಜಾ ಹಿಂದಿನಿಂದ ಹೇಗೆ ಕಾಣುತ್ತದೆ ಎಂದು, ಆದ್ರೆ ಇವತ್ತು ಮನೆಯ ಕೆಲಸದವಳು ಪಿಜ್ಜಾದ ಎರಡನೆಯ ಮುಖವನ್ನು ತೋರಿಸಿದಳು. ಪಿಜ್ಜಾದ ಎಂಟು ತುಂಡುಗಳು ಯಜಮಾನನಿಗೆ ಜೀವನದ ಅರ್ಥವೇ ತಿಳಿಸಿ ಕೊಟ್ಟಿತು.
# ಜೀವನಕ್ಕಾಗಿ_ಖರ್ಚಾ_ಅಥವಾ_ಖರ್ಚಿಗಾಗ
ಿ_ಜೀವನ "
ಜೀವನದ ನಿಜವಾದ ತಿರುಳು ಕೇವಲ ಒಂದೇ ಕ್ಷಣದಲ್ಲಿ ಅರ್ಥ ಮಾಡಿಕೊಂಡ.
ಗೆಳೆಯರೇ ಇದು ನಮಗೆಲ್ಲರಿಗೂ ಒಂದು ಒಳ್ಳೆಯ ಪಾಠ ಕಣ್ರೀ......
ಕೃಪೆ:ಮುಖ ಪುಸ್ತಕ
ಸಂಗ್ರಹ:ವೀರೇಶ್ ಅರಸಿಕೆರೆ
Comments
Post a Comment