ದಿನಕ್ಕೊಂದು ಕಥೆ 944

*🌻ದಿನಕ್ಕೊಂದು ಕಥೆ🌻*

*ತಾಜಾ ಹಣ್ಣುಗಳನ್ನು  ತೆಗೆದುಕೊಳ್ಳಲೆಂದು ಹೊರಟಾಗ ತುಂಬಾ ಜನಸಂದಣಿ ಇರುವ ದಾರಿಯಲ್ಲಿ ಒಂದು ಅಂಗಡಿ ಕಾಣಿಸಿತು.  ಅಂಗಡಿಯಲ್ಲಿ ತರತರಹದ ಹಣ್ಣುಗಳು ಇದ್ದವು. ಆದರೆ ಅಂಗಡಿಯ ಯಜಮಾನ ಮಾತ್ರ ಎಲ್ಲೂ ಕಾಣಲಿಲ್ಲ.  ಹಣ್ಣುಗಳ ಬೆಲೆಯನ್ನು ಕಾಗದದ ಮೇಲೆ ಬರೆದು ಇಟ್ಟಿದ್ದಾರೆ. ಅಂಗಡಿಯ ಮಧ್ಯದಲ್ಲಿ ಒಂದು ಕಾಗದದ ಚೀಟಿ ನೇತಾಡುತ್ತಿತ್ತು.  ಅದು ನನ್ನನ್ನು ಆಕರ್ಷಿಸಿತು. ಕುತೂಹಲದಿಂದ ಅದರಲ್ಲಿ ಬರೆದಿರುವುದನ್ನು ಓದಿದೆ. *"ನನ್ನ  ತಾಯಿಯವರಿಗೆ ಆರೋಗ್ಯ ಸರಿಯಿಲ್ಲದ ಕಾರಣ ಅವರ ಸೇವೆ ಮಾಡಲು ನಾನು ಸದಾ ಅವರ ಬಳಿ ಇರಬೇಕಾಗಿದೆ. ಆದ್ದರಿಂದ ನೀವುಗಳು ನಿಮಗೆ ಬೇಕಾದ ಹಣ್ಣುಗಳನ್ನು ಪಡೆದು ಅದಕ್ಕೆ ಸರಿಯಾದ ದರವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಹಾಕಿ."* *ಎಂದು ಬರೆದಿತ್ತು .*
*ನನಗೆ ಆಶ್ಚರ್ಯವಾಯ್ತು. ಈ ಕಾಲದಲ್ಲೂ ಇಂತಹ ಅಮಾಯಕರು ಇರುತ್ತಾರೆಯೇ ?* *ಯಾರಾದರೂ ಅವನ ಗಲ್ಲಾಪೆಟ್ಟಿಗೆಯನ್ನು ದೋಚಿದರೆ ಅವನ ಪರಿಸ್ಥಿತಿ ಏನು?  ಅವನ  ಅಮಾಯಕತ್ವ ಕಂಡು ನಗು ಸುಳಿಯಿತು.* *ಏನಾದರೂ ಆಗಲಿ ಇವನಿಗೆ ಈ ತರಹ ಮಾಡಬಾರದೆಂದು ತಿಳಿ ಹೇಳಬೇಕೆಂದು ನಿರ್ಣಯಿಸಿದೆ. ಸಾಯಂಕಾಲ ಅಂಗಡಿಗೆ ಬಂದು ಹಣವನ್ನು ತೆಗೆದುಕೊಳ್ಳಲು ಬರುತ್ತಾನಲ್ಲ ಆಗ ಅವನಿಗೆ ತಿಳಿ ಹೇಳಬೇಕೆಂದು  ಸಾಯಂಕಾಲ ಪುನ: ಅವನ ಅಂಗಡಿಯ ಬಳಿ ಹೋದೆ. ಅಂಗಡಿಯ ಮಾಲೀಕ ಹಣವನ್ನು ತೆಗೆದುಕೊಂಡು ಅಂಗಡಿಯನ್ನು ಮುಚ್ಚಲು ಮುಂದಾಗುತ್ತಿದ್ದಾನೆ. ನನ್ನನ್ನು ನಾನು ಪರಿಚಯಿಸಿಕೊಂಡು ನೀನು ಎಂತಹ ಬುದ್ಧಿ ಇಲ್ಲದ ಕೆಲಸ ಮಾಡುತ್ತಿರುವೆ ತಿಳಿಯಿತೆ ನಿನ್ನ ಗಲ್ಲಾ ಪೆಟ್ಟಿಗೆಯಲ್ಲಿನ ಹಣವನ್ನು ಯಾರಾದರೂ ಕಳ್ಳರು ದೋಚಿದರೆ?* ಹಣ್ಣುಗಳನ್ನು ಉಚಿತವಾಗಿ ತೆಗೆದುಕೊಂಡರೆ ??  ಎಂದು ಬುದ್ಧಿ ಹೇಳಲು ಹೋದರೆ ....
ಅವನು ಅಯ್ಯಾ "ನಾನು ಮೊದಲು ನಿಮ್ಮ ಹಾಗೆ ನಮ್ಮ ತಾಯಿಯನ್ನು ಕೇಳಿದೆ  - "ನಾನು ನಿನ್ನ ಸೇವೆಯಲ್ಲಿ ಇದ್ದಾಗ ಅಂಗಡಿಯ ಪರಿಸ್ಥಿತಿ ಏನು?"  ಅದಕ್ಕೆ ನಮ್ಮ ತಾಯಿ, "ನಾನು ಈಗ ಅವಸಾನದ ಸ್ಥಿತಿಯಲ್ಲಿ ಇದ್ದೇನೆ. ನಿನ್ನನ್ನು ನೋಡದೇ ಇರಲು ಆಗೋದಿಲ್ಲ. ನಾನು ದೇವರನ್ನು ಪ್ರಾರ್ಥಿಸುತ್ತೇನೆ, ನಾನು ಹೇಳಿದ ರೀತಿಯಲ್ಲಿ ಮಾಡು"  ಎಂದು ಹೇಳಿದಳು.  ಆ ದಿನದಿಂದ ನಾನು ಈ ರೀತಿ ಮಾಡುತ್ತಿದ್ದೇನೆ.  ಎಂದುಾ  ನಿನಗೆ  ನಷ್ಟವಾಗಿಲ್ಲವೆ ಎಂದು ಕೇಳಿದೆನು.  ಅದಕ್ಕೆ ಅವನು ಗಲ್ಲಾ ಪೆಟ್ಟಿಗೆಯನ್ನು ತೆಗೆದು ತೋರಿಸುತ್ತಾನೆ,  ಆಶ್ಚರ್ಯ !  ಅದರ ತುಂಬಾ ಹಣ!!   ಅಂಗಡಿಯ ಹಣ್ಣಿನ ಬೆಲೆಗಿಂತ ಹತ್ತರಷ್ಟು ಹಣ ಅದರಲ್ಲಿದೆ.  ಅಂಗಡಿಯಲ್ಲಿ ತರತರಹದ ವಸ್ತುಗಳನ್ನು ತೋರಿಸಿದನು. ಅದರಲ್ಲಿ ಸೀರೆಗಳು, ಸ್ವೆಟರುಗಳು ,ಆಗಲೇ ತಯಾರಿಸಿದ ಪಲಾವ್ ಅನೇಕ ತರಹದ ತಿಂಡಿ ತಿನಿಸುಗಳು ಇವೆ, ಅದರ ಮೇಲೆ ಈ ರೀತಿ ಬರೆದಿದೆ: "ತಾಯಿಯವರಿಗೆ ಇವುಗಳನ್ನು ನನ್ನ ಕಡೆಯಿಂದ ಕೊಡುವುದು" ;
"ಅಂಕಲ್ ತಾಯಿಯವರನ್ನು ನಮ್ಮ ಹಾಸ್ಪಿಟಲ್ಗೆ ಕರೆದು ತನ್ನಿ, ನಾನು ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುವೆನು" ಎಂದು ಬರೆದಿತ್ತು.  ಅವರ ವಿಸಿಟಿಂಗ್ ಕಾರ್ಡ್ ಇಟ್ಟಿದ್ದರು.  ಇದನ್ನೆಲ್ಲಾ ನೋಡಿದ ನನಗೆ ಕಣ್ಣಲ್ಲಿ ನೀರಾಡಿತ್ತು.  ಸಮಾಜವು ಸ್ವಾರ್ಥದಿಂದ ತುಂಬಿದೆ,  ಒಳ್ಳೆಯತನ ಕಾಣುತ್ತಿಲ್ಲವೆಂದು ತಿಳಿದ ನಾನು, ಆಗ ನನ್ನ ಭಾವನೆ ಎಲ್ಲಾ ಹರಿದು ಚೂರಾಯಿತು.  ಸಮಾಜದಲ್ಲಿ ಇನ್ನೂ ಒಳ್ಳೆಯತನವಿದೆ.  ಮೊದಲು ನಾವು ನೊಡುವ ದೃಷ್ಟಿಯನ್ನು  ಬದಲಾಯಿಸಿಕೊಳ್ಳಬೇಕು. *ತಾಯಿಯ ಸೇವೆ ಮಾಡುವುದರಿಂದ ಸಾಕ್ಷಾತ್ ದೇವರೇ ಅವನ ಅಂಗಡಿಯ ಕಾವಲುಗಾರ ನಾಗಿದ್ದಾನೆ.*
*ಎಷ್ಟೇ ಕೋಪಗೊಂಡರೂ ಮತ್ತೆ ನಮ್ಮ ಮೇಲೆ ಕೋಪಿಸಿ ಕೊಳ್ಳದೇ ಇರುವವರು  ಈ ಸೃಷ್ಟಿಯಲ್ಲಿ  ತಾಯಿಯೊಬ್ಬರಳೇ.    ತಾಯಿಗೆ ಮಾಡುವ ಸೇವೆ  ಎಂದೂ ನಿರರ್ಥಕವಾಗದು.*

ಕೃಪೆ:ನಲಿಕಲಿ ವಾಟ್ಸಾಪ್ ಗ್ರೂಪ್.
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059