ದಿನಕ್ಕೊಂದು ಕಥೆ 954
ದಿನಕ್ಕೊಂದು ಕಥೆ ಇರಾಕ್ ದೇಶದ ಕತೆ: ಬುದ್ಧಿ ಕಲಿತ ಸೋಮಾರಿ ಒಂದು ಪಟ್ಟಣದಲ್ಲಿ ಮಹಮೂದ್ ಎಂಬ ವ್ಯಾಪಾರಿಯಿದ್ದ. ಅವನು ಮನೆಮನೆಗಳಿಗೆ ಹೋಗಿ ಮೂಲೆಯಲ್ಲಿ ಎಸೆದ ಹಳೆಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದ. ಅದು ನಿರುಪಯೋಗಿ ವಸ್ತುವೆಂಬ ಭಾವನೆಯಿಂದ ಅವನು ಎಷ್ಟು ಕಡಿಮೆ ಬೆಲೆ ಕೊಟ್ಟರೂ ಅಷ್ಟನ್ನೇ ಜನ ಸ್ವೀಕರಿಸಿ ಅವನಿಗೆ ವಸ್ತುವನ್ನು ಒಪ್ಪಿಸಿಬಿಡುತ್ತಿದ್ದರು. ಬುದ್ಧಿವಂತನಾದ ಮಹಮೂದ್ ಈ ವಸ್ತುವನ್ನು ಥಳಥಳ ಹೊಳೆಯುವ ಹಾಗೆ ಮಾಡಿ ರಾಜ ಮಹಾರಾಜರು, ಧನಿಕರಿಗೆ ತೆಗೆದುಕೊಂಡು ಹೋಗಿ ಕೊಡುತ್ತಿದ್ದ. ಅದೊಂದು ಅಮೂಲ್ಯ ವಸ್ತುವೆಂದು ಅವರು ಕೈತುಂಬ ಚಿನ್ನದ ನಾಣ್ಯಗಳನ್ನೇ ಬೆಲೆಯಾಗಿ ಕೊಟ್ಟು ಕೊಳ್ಳುತ್ತಿದ್ದರು. ಹೀಗೆ ಬಂದ ಹಣದಿಂದ ವ್ಯಾಪಾರಿ ಆಗರ್ಭ ಶ್ರೀಮಂತನಾದ. ವ್ಯಾಪಾರಿಗೆ ಸಲೀಂ ಎಂಬ ಒಬ್ಬನೇ ಮಗನಿದ್ದ. ತನ್ನ ಮಗ ಮುಂದೆ ಈ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗಿ ಸಂಪತ್ತನ್ನು ವೃದ್ಧಿಪಡಿಸುತ್ತಾನೆಂದು ವ್ಯಾಪಾರಿ ಭಾವಿಸಿದ್ದ. ಆದರೆ ಅವನಿಗೆ ಯಾವುದೇ ಕೆಲಸದಲ್ಲಿಯೂ ಆಸಕ್ತಿಯಿರಲಿಲ್ಲ. ಹೊಟ್ಟೆ ತುಂಬ ಊಟ ಮಾಡುವುದು, ಕೆಲಸ ಮಾಡದೆ ಅಲೆಯುವ ಗೆಳೆಯರ ಜೊತೆಗೆ ವಿಹಾರಕ್ಕೆ ಹೋಗುವುದು, ಹೊತ್ತೇರುವವರೆಗೂ ಮಲಗುವುದು ಇದರಲ್ಲಿಯೇ ಆಯುಷ್ಯ ಕಳೆಯುತ್ತಿದ್ದ. ಇದನ್ನು ಕಂಡು ವ್ಯಾಪಾರಿಗೆ ಬೇಸರವಾಗುತ್ತಿತ್ತು. ವೃತ್ತಿಯನ್ನು ಕಡೆಗಣಿಸಬಾರದೆಂದು ಹಲವು ರೀತಿಯಿಂದ ಮಗನಿಗೆ ಬುದ್ಧಿ ಹೇಳಿದ. ಆದರೂ ಅವನು ದಾರಿಗೆ ಬರಲಿಲ್ಲ. ಒಂದು ದಿನ ವ್