ದಿನಕ್ಕೊಂದು ಕಥೆ 952

ದಿನಕ್ಕೊಂದು ಕಥೆ
ಹಾಲಿನಿಂದ_ಬೆಳಕಾಗುವ_ಪರಿ..! 

ಇದೇನಿದು ಹಾಲಿನಿಂದ ಬೆಳಕೇ? 

ಸಂಸ್ಕೃತದಲ್ಲಿ ಒಂದು ಕಥೆ ಇದೆ.. 

ಒಂದು ಸಲ ಹಾಲು ದೇವರನ್ನು ಕುರಿತು ತಪಸ್ಸು ಮಾಡಿತಂತೆ.. ದೇವರು ಪ್ರತ್ಯಕ್ಷನಾಗಿ ಏನು ಸಮಸ್ಯೆ ಎಂದನಂತೆ..

ಆಗ ಹಾಲು ಹೇಳಿತಂತೆ..' ದೇವರೇ.. ನಾನು ಹಾಲು ಆಕಳು.. ಎಮ್ಮೆಯಿಂದ ಬಂದಾಗ ಶುದ್ಧವಾಗೇ ಇರುತ್ತೇನೆ... ಆದರೆ ಈ ಪಾಪಿ ಮಾನವ ನನಗೆ ಹುಳಿ ಇಂಡಿ ನನ್ನ ಮನಸ್ಸನ್ನು ಕೆಡಿಸಿಬಿಡುತ್ತಾನೆ.. ನನಗೆ ಹಾಲಾಗೇ ಇರುವಂತೆ ವರ ಕೊಡು ' ಎಂದು ಬೇಡಿಕೊಂಡಿತಂತೆ..

ಆಗ ದೇವರು ನಕ್ಕು. 
' ಎಲೈ .. ಹಾಲೇ ಇಲ್ಲಿ ಕೇಳು.. ನೀನು ಹಾಲಾಗಿ ಇರುವ ಬದುಕಿಗೆ ಆಸೆ ಪಡುವ ಮೊದಲು ಈ ಮಾತನ್ನು ಕೇಳು.. 

ನೀನು ಹಾಲಾದರೆ ಒಂದು ದಿನ ಮಾತ್ರ ಬದುಕುವೆ.. ಹಾಲಿಗೆ ಹೆಪ್ಪಾಕಿದರೆ ಎರಡು ದಿನ ಬದುಕುವೆ.. ಮೊಸರಾಗಿ ಕಡೆದರೆ.. ಹುಳಿ ಹುಳಿಯಾಗಿ ಮೂರನೇ ದಿನ ಬದುಕುವೆ.. ಮಜ್ಜಿಗೆಯಿಂದ ಬಂದ ಬೆಣ್ಣೆಯಾದರೆ ವಾರಗಟ್ಟಲೆ ಬದುಕುವೆ... ಬೆಣ್ಣೆಯನ್ನು  ಹದವಾಗಿ ಕಾಯಿಸಿ.. ಮೇಲೆ ಒಂದೆರೆಡು ವೀಳ್ಯೆದೆಲೆ ಹಾಕಿದರೆ ಘಮಗುಡುವ ತುಪ್ಪವಾಗುವೆ.. ಆ ತುಪ್ಪದಿಂದ ದೀಪ ಹಚ್ಚಿದರೆ ನನಗೆ ಬೆಳಕಾಗುವೆ.  

ಈಗ ಹೇಳು ಒಂದು ದಿನ   ಹಾಲಾಗಿಯೇ ಹುಟ್ಟಿ ಹಾಲಾಗಿಯೇ ಸಾಯುವೆಯಾ.. 

ಅಥವಾ ಕ್ಷಣ ಕ್ಷಣವೂ.. ಅನುದಿನವೂ .. ದಿನ ದಿನವೂ..  ಬೆಳೆದು.. ರೂಪಾಂತರ ಪಡೆದು ..  ಭಗವಂತನಿಗೆ ಬೆಳಕಾಗುವೆಯಾ ' ಎಂದು ದೇವರು ಪ್ರಶ್ನಿಸಿದನಂತೆ...

ದೇವರ ಮಾತಿಗೆ..
ಹಾಲು ಮೂಕವಾಯಿತು..
ಶರಣಾಯಿತು..
ತನ್ನ ಮನದ ಅಂಧಕಾರ.. ಮದದಿಂದ ಹೊರಬಂತು.. 
ದೇವರ ಮುಂದೆ ಪ್ರಜ್ವಲಿಸುವ ಬೆಳಕಾಯಿತು..

ನಾವು ಹಾಗೇ ಅಲ್ವಾ.. ನಮ್ಮ ಮನಸ್ಸಿಗೆ ಯಾರೋ ಹುಳಿ ಹಿಂಡಿದರೆಂದು ಕೊರಗದೆ.. ಹಾಲಾಗಿ ಮೊಸರಾಗಿ ಮಜ್ಜಿಗೆ ಬೆಣ್ಣೆ ತುಪ್ಪವಾಗಿ ದೇವರ ಮುಂದೆ ದೀಪವಾಗುವ ಸಾರ್ಥಕ ಬದುಕಿಗೆ ಬದಲಾಗೋಣ..

         ಜೈ ಸದ್ಗುರುನಾಥ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059