ದಿನಕ್ಕೊಂದು ಕಥೆ 984
ದಿನಕ್ಕೊಂದು ಕಥೆ 🙏ಇಂದಿನ ಐಕಾನ್ - ಆಧುನಿಕ ಸಾವಿತ್ರಿ ಲತಾ ಭಗವಾನ್ ಖರೆ. ನನ್ನ ತರಬೇತಿಗಳಲ್ಲಿ ಅತೀ ಹೆಚ್ಚು ಸಲ ಬಳಸಿಕೊಂಡ ರಿಯಲ್ ಲೈಫ್ ಕಥೆಗಳಲ್ಲಿ ಇದು ಕೂಡ ಒಂದು. ಆಕೆ ಸಿನೆಮಾ ತಾರೆ ಅಥವಾ ಮಾಡೆಲ್ ಅಲ್ಲ. ಆದರೆ ಆಕೆಯ ಬದುಕಿನ ಹೋರಾಟ ಸಾವಿರಾರು ಮಂದಿಗೆ ಸ್ಫೂರ್ತಿ ತುಂಬಬಲ್ಲದು. ಆಕೆ ಲತಾ ಭಗವಾನ್ ಖರೆ. ಆಕೆಯ ಗಂಡ ಭಗವಾನ್ ಖರೆ. ಮಹಾರಾಷ್ಟ್ರದ ಬುಲ್ದಾನ ಜೆಲ್ಲೆಯ ಒಂದು ಗ್ರಾಮದವರು. ಗಂಡನಿಗೆ 68 ವರ್ಷ ಮತ್ತು ಹೆಂಡತಿಗೆ 67 ವರ್ಷ. ಗಂಡ ಸುದೀರ್ಘ ವರ್ಷ ಸೆಕ್ಯುರಿಟಿ ಗಾರ್ಡ್ ಆಗಿದ್ದು ನಿವೃತ್ತಿ ಆಗಿದ್ದವರು. ಈಗ ಅವರಿಬ್ಬರೂ ಕೃಷಿಯ ದಿನಗೂಲಿ ನೌಕರರು. ಅವರಿಗೆ ಮೂರು ಜನ ಹೆಣ್ಣು ಮಕ್ಕಳು. ಮಕ್ಕಳಿಗೆ ಮದುವೆ ಮಾಡಿದ ಈ ದಂಪತಿ ತುಂಬಾ ಸಾಲ ಮಾಡಿದರು. ಮನೆಯನ್ನು ಮಾರಿ ಗುಡಿಸಲಲ್ಲಿ ಇರಬೇಕಾಯಿತು. ದುಡಿದರೆ ಮಾತ್ರ ಅವರ ಹಸಿವು ನೀಗುತ್ತಿತ್ತು..ಬಹಳ ಕಷ್ಟದ ಸಮಯ ಅವರದ್ದು. ಒಂದು ದಿನ ಗದ್ದೆಯಲ್ಲಿ ಕೃಷಿಯ ಕೆಲಸ ಮಾಡುವಾಗ ಗಂಡ ತಲೆ ತಿರುಗಿ ಬಿದ್ದು ಬಿಟ್ಟರು. ಹೆಂಡತಿಗೆ ತಕ್ಷಣ ಏನು ಮಾಡುವುದು ಎಂದು ತೋಚಲಿಲ್ಲ. ಒಂದು ರಿಕ್ಷಾದಲ್ಲಿ ಗಂಡನನ್ನು ಹಾಕಿಕೊಂಡು ಪಕ್ಕದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಅಲ್ಲಿನ ವೈದ್ಯರು ಪರೀಕ್ಷೆ ಮಾಡಿ ಏನೋ ಸೋಂಕು ಉಂಟಾಗಿದೆ. ನಮ್ಮಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ದೊಡ್ಡ ಆಸ್ಪತ್ರೆಗೆ ಹೋಗಿ ಎಂದರು. ಗಂಡನನ್ನು ಮನೆಗೆ ಕರೆದು ತಂದ ಹೆಂಡತಿ ಕೆಲವು