ದಿನಕ್ಕೊಂದು ಕಥೆ 992

ದಿನಕ್ಕೊಂದು ಕಥೆ
ಒಂದು ಸ್ಥಳದಲ್ಲಿ ಪೋಲೀಸರು ಒಂದು ಫಲಕವನ್ನು ಸ್ಥಾಪಿಸಿದರು-

"ನೋ ಪಾರ್ಕಿಂಗ್ ಜೋನ್ ಪೆನಾಲ್ಟಿ 250 ರೂಪಾಯಿ ಗಳು (No Parking Zone.  Penalty Rs. 250)

ಪ್ರಸ್ತುತ ಆಜ್ಞೆಯನ್ನು ಯಾರೂ ಕೂಡ ಪಾಲನೆ  ಮಾಡುತ್ತಿರಲಿಲ್ಲ. ಜನರು ಫಲಕದ ಕೆಳಗಡೆಯೇ ವಾಹನಗಳನ್ನು ನಿಲ್ಲಿಸುತ್ತಿದ್ದರು.

ಕೆಲವು ದಿನಗಳ ನಂತರ ಅಧ್ಯಾಪಕರೊಬ್ಬರು ಆ ದಾರಿಯ ಮೂಲಕ ಹಾದು ಹೋಗುತ್ತಿದ್ದರು. ಅವರು ಆ ಫಲಕ ಮತ್ತು ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಬಳಿಕ ಫಲಕದಲ್ಲಿ ಸಣ್ಣ ಬದಲಾವಣೆಯನ್ನು ಮಾಡಿದರು.

ಫಲಕದಿಂದ "ನೋ" ಮತ್ತು "ಪೆನಾಲ್ಟಿ" ಇವೆರಡನ್ನು ಉಜ್ಜಿ ತೆಗೆದರು. ಈಗ ಅದು ಹೀಗಾಯಿತು : 
"ಪಾರ್ಕಿಂಗ್ ಜೋನ್ 250 ರೂಪಾಯಿಗಳು".

ಆ ನಂತರ ಅಲ್ಲಿ ಯಾರೂ ಕೂಡ ವಾಹನಗಳನ್ನು ನಿಲ್ಲಿಸುತ್ತಿರಲಿಲ್ಲ.!!!

ಪೋಲೀಸರು ಈಗ ಆ ಅಧ್ಯಾಪಕರನ್ನು ಹುಡುಕುತ್ತಿದ್ದಾರೆ, ಅವರಿಂದ ಹೆಚ್ಚು ತಂತ್ರ (trick)ಗಳನ್ನು ಕಲಿಯುವುದಕ್ಕಾಗಿ.....

ಶಿಕ್ಷೆಯಿಂದ ಎಲ್ಲರನ್ನೂ ಸರಿದಾರಿಗೆ ತರಲು ಸಾಧ್ಯವಿಲ್ಲ. ಇದನ್ನು ಸರಿಯಾಗಿ ಬಲ್ಲವರು ನಿಜವಾದ ಅಧ್ಯಾಪಕರಾಗುತ್ತಾರೆ. ಇಲ್ಲಿ ಆಗಿದ್ದೂ ಕೂಡ ಅದೇ. 

ಕೃಪೆ: ವಾಟ್ಸ್ ಆ್ಯಪ್ ಗ್ರೂಪ್
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097