ದಿನಕ್ಕೊಂದು ಕಥೆ 993

ದಿನಕ್ಕೊಂದು ಕಥೆ

ಟೈಟಾನಿಕ್ ಹಡಗು ಮುಳುಗುತ್ತಾ ಇದ್ದಾಗ ಅದರ ಆಸುಪಾಸು ಒಟ್ಟು ಮೂರು ಬೇರೆ ಹಡಗುಗಳಿದ್ದವು ಹಾಗೂ ಇವು ಮನಸ್ಸು ಮಾಡಿದ್ದರೆ 1500 ಜನರನ್ನು ಬದುಕಿಸಬಹುದಿತ್ತು.
ತೀರಾ ಹತ್ತಿರ ಇದ್ದ ಹಡಗಿನ ಹೆಸರು 'ಸ್ಯಾಮ್ಸನ್'ಇದು ಕೇವಲ ಏಳು ಮೈಲಿ ದೂರದಲ್ಲಿತ್ತು. ಅಷ್ಟೇ ಅಲ್ಲ ಟೈಟಾನಿಕ್ ಹಡಗಿನ ಕ್ಯಾಪ್ಟನ್ ಮಾಡಿದ್ದ ಎಮರ್ಜೆನ್ಸಿ ಸಿಗ್ನಲ್  ಹಾಗೂ ಟೈಟಾನಿಕ್ ಹಡಗಿನಲ್ಲಿದ್ದ ಜನರ ಚೀತ್ಕಾರ ಸಹ ಕೇಳುತ್ತಿತ್ತು.ಆದರೆ ಒಂದೇ ಕಾರಣಕ್ಕೆ ಈ ಕ್ಯಾಪ್ಟನ್ ಮನಸು ಮಾಡಲಿಲ್ಲ ಯಾಕೆ ಅಂದರೆ  ಈ ಹಡಗಿನಲ್ಲಿದ್ದವರು ಕಾನೂನು ಬಾಹಿರವಾಗಿ ಸಮುದ್ರ ಜೀವಿಗಳನ್ನು ಬೇಟೆ ಮಾಡುತ್ತಿದ್ದರು. ಹಾಗಾಗಿ ತನ್ನ ಹಡಗಿನ ದಿಕ್ಕನ್ನು ಬದಲಾಯಿಸಿದ್ದ ಸ್ಯಾಮ್ಸನ್ ಹಡಗಿನ ಕ್ಯಾಪ್ಟನ್.
ಇದು ಹೇಗಿದೆ ಅಂದರೆ ನಮ್ಮಲ್ಲಿ ಕೆಲವು ಜನ ತಮ್ಮ ಪಾಪಭರಿತ ಜೀವನದಲ್ಲಿ ಮಗ್ನರಾಗಿ ಮಾನವೀಯತೆಯನ್ನೇ ಮರೆತುಬಿಡುವವರ ಹಾಗಿದೆ.
ಎರಡನೇ ಹತ್ತಿರವಿದ್ದ ಹಡಗಿನ ಹೆಸರು 'ಕ್ಯಾಲಿಫೋರ್ನಿಯನ್'ಇದು ಟೈಟಾನಿಕ್ ಹಡಗಿನಿಂದ 14 ಮೈಲಿ ದೂರದಲ್ಲಿ ಇತ್ತು.ಈ ಹಡಗಿನ ಕ್ಯಾಪ್ಟನ್ ಗು ಟೈಟಾನಿಕ್ ನ ಎಮರ್ಜೆನ್ಸಿ ಸಿಗ್ನಲ್ ಸಿಕ್ಕಿತ್ತು. ಆದರೆ ಈ ಹಡಗು ಟೈಟಾನಿಕ್ ಯಾವ ಮಂಜುಗಡ್ಡೆಯ ಪರ್ವತಕ್ಕೆ ಡಿಕ್ಕಿ ಹೊಡೆದಿತ್ತೋ ಅದನ್ನು ಸುತ್ತಿಕೊಂಡು ಹೋಗಬೇಕಿತ್ತು.ಹಾಗಾಗಿ ಈ ಕ್ಯಾಪ್ಟನ್  ಬೆಳಕು ಹರಿಯಲಿ ನೋಡೋಣ ಅಂತ ಕಾಯ್ತಾ ಇದ್ದ.ಆದರೆ ಅವನು ಮರುದಿನ ಅಲ್ಲಿಗೆ  ಹೋಗುವಷ್ಟೊತ್ತಿಗೆ ಟೈಟಾನಿಕ್ ನ ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್ ಸಮೇತ 1569 ಜನ ಜಲಸಮಾಧಿ ಆಗಿದ್ದರು.
ಇದನ್ನು ಬೇರೆಯವರಿಗೆ ಅನಿವಾರ್ಯ ಇದ್ದಾಗ  ಸಹಾಯ ಮಾಡಲಿಕ್ಕೆ ತಮ್ಮ ಅನುಕೂಲ  ನೋಡಿಕೊಂಡು  ಮುಂದುವರೆಯುವ ಜನರಿಗೆ ಹೋಲಿಸಬಹುದು.
ಇನ್ನು ಮೂರನೆಯ ಹಡಗು. ಈ ಹಡಗಿನ ಹೆಸರು ಕಾರ್ಪಾಥಿಯ ಈ ಹಡಗು ಟೈಟಾನಿಕ್ ನಿಂದ 68 ಮೈಲಿ ದೂರದಲ್ಲಿತ್ತು. ರೇಡಿಯೋದಲ್ಲಿ  ಟೈಟಾನಿಕ್ ಹಡಗಿನ  ಸುದ್ದಿ ಹಾಗೂ ಪ್ರಯಾಣಿಕರ ಅಳು ಕೇಳಿದ್ದೆ ತಡ ಈ ಹಡಗಿನ ಕ್ಯಾಪ್ಟನ್  ಆರ್ತೋ ರಾಸ್ಟನ್ ತನ್ನ ಹಡಗಿನ ದಿಕ್ಕು ಬದಲಾಯಿಸಿದ್ದ ಅಷ್ಟೇ ಅಲ್ಲ 710 ಟೈಟಾನಿಕ್ ಹಡಗಿನಲ್ಲಿದ್ದ ಜನರನ್ನು ರಕ್ಷಣೆ ಮಾಡಲು ಯಶಸ್ವಿ ಆಗಿದ್ದ.ನಂತರ ಈ ಕ್ಯಾಪ್ಟನ್ ಬಹಳ ಸನ್ಮಾನಕ್ಕೆ ಪಾತ್ರನಾಗಿದ್ದ. ಆದನ್ನು  ಖಂಡಿತ ಡಿಸರ್ವ ಸಹ ಮಾಡಿದ್ದ.
ಪ್ರತಿಯೊಬ್ಬರ ಜೀವನದಲ್ಲೂ ಸವಾಲುಗಳಿರುತ್ತವೆ ಆದರೆ ಅಂತಹ  ಪರಿಸ್ಥಿತಿಗಳನ್ನು ನಿಭಾಯಿಸುತ್ತ ಮಾನವೀಯತೆಯ ನೆಲೆಯಲ್ಲಿ ಸಹಾಯ ಮಾಡುವವರೇ ನಿಜವಾದ ಮನುಷ್ಯರು.
ಈ ವಿಶ್ವವೇ ಟೈಟಾನಿಕ್ ಅನ್ನುವ ಹಡಗು.ಅದರಲ್ಲಿ ನಮ್ಮ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಇತರರಿಗೆ, ಅವಶ್ಯಕತೆ ಇದ್ದವರಿಗೆ ನೆರವಾದರೆ ಭವಿಷ್ಯದಲ್ಲಿ ಯಾವ ಟೈಟಾನಿಕ್ ಸಹ ಮುಳುಗುವದಿಲ್ಲ.

ಕೃಪೆ:ವಾಟ್ಸ್ ಆ್ಯಪ್ ಗ್ರೂಪ್
ಸಂಗ್ರಹ:ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097