ದಿನಕ್ಕೊಂದು ಕಥೆ 1010
*🌻ದಿನಕ್ಕೊಂದು ಕಥೆ 🌻*
*ಜೋನ್ ಆಫ್ ಆರ್ಕ್*
ಫ್ರಾನ್ಸ್ ಬ್ರಿಟಿಷರ ಆಳ್ವಿಕೆಗೆ ಸಿಲುಕಿ ನಲುಗಿ ಹೋಗಿದ್ದ ಕಾಲವದು. ಫ್ರಾನ್ಸ್ಗೆ ಹೆಸರಿಗೊಬ್ಬ ರಾಜನಿದ್ದನು ಅವನು ಆಂಗ್ಲರ ಅಡಿಯಾಳಾಗಿ ಕೆಲಸ ಮಾಡುತ್ತಿದ್ದನು. ಇಂತಹ ದಿನಗಳಲ್ಲಿ ಒಮ್ಮೆ ಫ್ರಾನ್ಸ್ನ ಬೀದಿಯಲ್ಲಿ ಮಲಗಿದ್ದ ಅನಾಥ ಬಾಲಕಿಯೊಬ್ಬಳಿಗೆ ಕನಸೊಂದು ಬಿದ್ದಿತು. ಆ ಕನಸಿನಲ್ಲಿ ಸಂತನೊಬ್ಬ ಕಾಣಿಸಿಕೊಂಡು ಫ್ರಾನ್ಸ್ನ್ನು ಬ್ರಿಟಿಷರಿಂದ ಮುಕ್ತಗೊಳಿಸುವಂತೆ ಬಾಲಕಿಗೆ ಆದೇಶವಿತ್ತರಂತೆ. ಆದರೆ, ದೇಶಕ್ಕೆ ದೇಶವೇ ಮಹಾರಾಜನಿಂದ ಹಿಡಿದು ಎಲ್ಲರೂ ಬ್ರಿಟಿಷರ ಅಡಿಯಾಳಾಗಿರುವಾಗ ಕೇವಲ ೧೩ ವರ್ಷ ವಯಸ್ಸಿನ ಆ ಹುಡುಗಿಯಿಂದ ಫ್ರಾನ್ಸ್ ಗೆ ಸ್ವಾತಂತ್ರ ಕೊಡಿಸಲಾದೀತೇ?
ಆದರೆ, ಆ ಬಾಲಕಿ ಧೃತಿಗೆಡದೆ ಸಂತವಾಣಿಯಿಂದ ಪ್ರಭಾವಿತಳಾದವಳಂತೆ ನೇರವಾಗಿ ಸೇನಾ ಮುಖ್ಯಸ್ಥರನ್ನು ಕಂಡು ತನಗೆ ಬಿದ್ದ ಕನಸಿನ ಬಗ್ಗೆ ವಿವರಿಸಿ, ಬ್ರಿಟಿಷರ ವಿರುದ್ಧ ಹೋರಾಡುವಂತೆ ತಿಳಿಸಿದಳು. ಮೊದಮೊದಲು ಬಾಲಕಿಯ ಮಾತಿಗೆ ಫ್ರಾನ್ಸ್ ಸೈನಿಕರು ನಗುತ್ತಿದ್ದರು. ಆದರೆ, ಪಟ್ಟು ಬಿಡದ ಬಾಲಕಿ ಸೈನಿಕರನ್ನು ಹೂರಿದುಂಬಿಸಿದಳು. ಸೈನಿಕರಿಗೆ ಬಾಲಕಿಯ ಧೈರ್ಯ, ಕೆಚ್ಚಿದೆ ಮತ್ತು ಅವಳಿಗಿದ್ದ ರಾಷ್ಟ್ರಾಭಿಮಾನ ಮೆಚ್ಚುಗೆಯಾಯಿತು ಮತ್ತು ಬ್ರಿಟಿಷರ ದಬ್ಬಾಳಿಕೆಗೆ ರೋಸಿಹೋಗಿದ್ದ ಅವರು ಅವರು ಬಾಲಕಿಯಿಂದ ಸ್ಪೂರ್ತಿ ಪಡೆದವರಂತೆ ದೊರೆಯ ಮಾತನ್ನು ಲೆಕ್ಕಿಸದೆ ಆಂಗ್ಲರ ವಿರುದ್ಧ ದಂಗೆ ಎದ್ದರು. ಫ್ರಾನ್ಸ್ ಕಲಿಗಳ ಕೆಚ್ಚೆದೆಯ ಹೋರಾಟಕ್ಕೆ ಬ್ರಿಟಿಷರು ಹೆದರಿ ಸೋತು ಹೋದರು. ಫ್ರಾನ್ಸ್ನಿಂದ ಕಾಲ್ಕಿತ್ತರು. ಫ್ರಾನ್ಸ್ ಸ್ವತಂತ್ರವಾಯಿತು.
[sociallocker]ಫ್ರೆಂಚ್ ಪ್ರಜೆಗಳು ಪುಃನ ತಮ್ಮ ರಾಜನನ್ನು ಸಿಂಹಾಸನವನ್ನೇರಿಸಿದರು ಮತ್ತು ಪ್ರಜಾಡಳಿತ ನೆಲಿಸುವಂತೆ ಮಾಡಿದರು. ಆ ಪುಟಾಣಿ ಬಾಲಕಿಗಂತೂ ಎಲ್ಲೆಲ್ಲಿಯೂ ಗೌರವಾದರಗಳು ದೊರೆತವು. ಅನಾಥ ಬಾಲಕಿಯೊಬ್ಬಳು ದೇಶದ ಸ್ವಾತಂತ್ರ್ಯಕ್ಕಾಗಿ ತೋರಿದ ಧೈರ್ಯ ಸಾಹಸವು ದೇಶಾದ್ಯಂತ ಮಾರ್ದನಿಸಿತು. ಹೋದಲ್ಲೆಲ್ಲಾ ಸನ್ಮಾನ ನೆರೆವೆರಿಸಿ ಪ್ರಜೆಗಳು ತಮ್ಮ ಧನ್ಯತೆಯನ್ನು ತೋರ್ಪಡಿಸುತ್ತಿದ್ದರು.
ಫ್ರಾನ್ಸ್ ಬ್ರಿಟಿಷರಿಂದ ಮುಕ್ತಿ ಹೊಂದಿದ್ದರೂ ಸಹ ರಾಜನು ಇನ್ನೂ ಕೆಲವು ಆಂಗ್ಲ ಅಧಿಕಾರಿಗಳನ್ನು ಆಡಳಿತದ ಹಿತದೃಷ್ಟಿಗಾಗಿ ಇರಲೆಂದು ತನ್ನ ದೇಶದಲ್ಲಿಯೇ ಉಳಿಸಿಕೊಂಡಿದ್ದನು. ಬಾಲಕಿಯ ದುರದೃಷ್ಟಿಯು ಅಧ್ಬುತವಾಗಿದ್ದು ಅವಳು ರಾಜನನ್ನು ಭೆಟೆಯಾಗಿ ಉಳಿಸಿಕೊಂಡಿರುವ ಆಂಗ್ಲ ಅಧಿಕಾರಿಗಳನ್ನು ಅವರ ದೇಶಕ್ಕೆ ವಾಪಸ್ ಕಳಿಸಿರೆಂದು ಬೇಡಿಕೊಂಡಳು. ಇದೇ ಸಂದರ್ಭದಲ್ಲಿ ಆ ಬಾಲಕಿಯ ಉನ್ನತಿಯನ್ನು ಸಹಿಸದ ಕೆಲವು ಕಿಡಿಗೇಡಿಗಳು ರಾಜನ ಬುದ್ಧಿಯನ್ನು ಕೆಡಿಸಿ ಬಾಲಕಿಯ ವಿರುದ್ಧ ಆರೋಪ ಹೊರಿಸಿ ಚಾಡಿ ಹೇಳುತ್ತಿದ್ದರು. ಅಲ್ಲದೆ ಆಂಗ್ಲ ಅಧಿಕಾರಿಗಳೂ ಸಹ ಇದೇ ಸಮಯವನ್ನು ಬಳಸಿಕೊಂಡು ಬಾಲಕಿಯನ್ನು ಕೊನೆಗಾಣಿಸಲು ನಿರ್ಧರಿಸಿ ರಾಜನ ತಲೆಕೆಡಿಸಿ ಬಾಲಕಿಯನ್ನು ಸೆರೆಹಿಡಿದು ಕೊಲ್ಲಿಸಲು ಆಜ್ಞೆ ಹೊರಡಿಸಿದರು.
ರಾಜಾಜ್ಞೆಯಂತೆ ಸೈನಿಕರು ಹದಿನೇಳು ವರ್ಷದ ಬಾಲಕಿಯನ್ನು ಸೆರೆಹಿಡಿದು ನೆಪಕ್ಕೆಂಬಂತೆ ವಿಚಾರಣೆ ನಡೆಸಿ ಬಜಾರಿನ ಪ್ರಮುಖ ಬೀದಿಯಲ್ಲಿ ಕಂಬಕ್ಕೆ ಕಟ್ಟಿಹಾಕಿದರು. ಕಿಡಿಗೇಡಿಗಳು ಆ ಬಾಲಕಿಯನ್ನು ನಿಂದಿಸಿ ಮಾತನಾಡಿದರು. ಕೆಲವರಂತೂ ಉಗುಳುತ್ತಿದ್ದರು. ದೇಶದ್ರೋಹಿ ಬಾಲಕಿ ಎಂದು ಹಣೆಪಟ್ಟಿಯನ್ನು ಹಾಕಲಾಗಿತ್ತು. ತನಗೆ ಇಷ್ಟೆಲ್ಲಾ ಆಗುತ್ತಿದ್ದರೂ ಆ ಬಾಲಕಿ ಹಸನ್ನುಖಿಯಾಗಿದ್ದಳು ಮತ್ತು ತಾನು ಮಾಡಿದ್ದೆಲ್ಲವೂ ರಾಷ್ಟ್ರದ ಹಿತಕ್ಕಾಗಿ ಎಂದಷ್ಟೇ ಹೇಳಿದಳು. ನಿಜವಾದ ರಾಷ್ಟ್ರಾಭಿಮಾನಿಗಳು ವೀರ ಬಾಲಕಿಗಾಗಿ ಕಣ್ಣೀರು ಸುರಿಸಿದರು. ಕಿಡಿಗೇಡಿಗಳು ಬಾಲಕಿಯನ್ನು ಕಲ್ಲಿನಿಂದ ಹೊಡೆದು ಸಾಯಿಸಿದರು.
ಆ ಬಾಲಕಿ ಮತ್ಯಾರೂ ಅಲ್ಲ. ಆಕೆ ಜೋನ್ ಆಫ್ ಆರ್ಕ್! ಓದು ಬರಹ ಕಲಿಯದ ಅನಾಥೆ. ಆದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಸೈನಿಕರನ್ನು ಹುರಿದುಂಬಿಸಿ ರಾಷ್ಟ್ರಪ್ರೇಮ ಮರೆದಳು. ತನ್ಮೊಲಕ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಳು. ಬದುಕಿನ ಕೊನೆಯ ಘಳಿಗೆವರೆಗೂ ಫ್ರಾನ್ಸ್ಗೆ ಒಳಿತನ್ನೇ ಬಯಸಿದ ಆ ಬಾಲಕಿಯನ್ನು ಸಂತಳೆಂದು ಗೌರವಿಸಿ ಇಂದಿಗೂ ಯುರೋಪಿನಾಧ್ಯಂತ ಪ್ರತಿವರ್ಷ ಮೇ ೩೦ ರಂದು ಪುಣ್ಯದಿನವನ್ನು ಆಚರಿಸಲಾಗುತ್ತಿದೆ. ಈ ಮೂಲ್ಕ ಅವರು ಆಕೆಯ ರಾಷ್ಟ್ರಾಭಿಮಾನಕ್ಕೆ ಗೌರವ ನೀಡುತ್ತಿದ್ದಾರೆ.
ಕೃಪೆ : ಪ ನಾ ಹಳ್ಳಿ ಹರೀಶ ಕುಮಾರ್.
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment