ದಿನಕ್ಕೊಂದು ಕಥೆ 1011
ದಿನಕ್ಕೊಂದು ಕಥೆ
"ಸುರಭಿ ಸ್ಕೂಲ್ಗೆ ಚಿನ್ನ ತರಬಾರದು ಅಂತ ಗೊತ್ತಿಲ್ವಾ ನಿನಗೆ "
"ಸಾರ್ ಅದು ನಿನ್ನೆ ನನ್ನ ಹುಟ್ಟಿದ ಹಬ್ಬ ಇತ್ತು ಅಂತ ಅಮ್ಮ ಸರ ಹಾಕಿದ್ರು ವಾಪಸ್ ಕೊಡೋದು ಮರೆತೆ..
ಸಂಜೆ ಕೊಡೋಣ ಅಂತ ಬ್ಯಾಗ್ ಅಲ್ಲಿ ಇಟ್ಟಿದ್ದೆ ..ಈಗ ನೋಡಿದ್ರೆ ಇಲ್ಲ"
"ಎಲ್ಲ ಕಡೆ ನೋಡಿದೆಯಾ,ಡೆಸ್ಕ್ ಬ್ಯಾಗ್ ಎಲ್ಲ"
"ಹು ಸಾರ್ ಎಲ್ಲ ಕಡೆ ನೋಡಿದೆ"
ಪ್ರಿನ್ಸಿಪಾಲ್ ಚೇಂಬರ್ ಅಲ್ಲಿ ಎಲ್ಲರ ಮುಖದಲ್ಲೂ ಒಂದು ರೀತಿಯ ದುಗುಡ ಗಾಬರಿ...
ಸರಿ ನೀನು ಕ್ಲಾಸ್ಗೆ ಹೋಗು ನಾನು ಬರ್ತೀನಿ
ಪ್ರಿನ್ಸಿಪಾಲ್ ಹೇಳಿದಾಗ ಕ್ಲಾಸ್ ಟೀಚರ್ ಜೊತೆ ತರಗತಿಗೆ ಬಂದಳು..10 ನಿಮಿಷದಲ್ಲಿ ಬಂದವರೇ
"ಸುರಭಿದು ಚಿನ್ನದ ಚೈನ್ ಕಳುವಾಗಿದೆ ಯಾರು ತೊಗೊಂಡಿದಿರಾ ನಿಜ ಹೇಳಿ"
ಇಡೀ ತರಗತಿಯಲ್ಲೂ ಪೂರ್ತಿ ನಿಶಬ್ದ...
"ಸರಿ ..ನಿಮಗೆಲ್ಲ ಯಾರ ಮೇಲೆ ಆದ್ರೂ ಅನುಮಾನ ಇದೆಯಾ ಇದ್ರೆ ಹೇಳಿ..."
ಎಲ್ಲರ ದೃಷ್ಟಿ ಕೊನೆ ಬೆಂಚ್ ಕೊನೆ ಹುಡುಗನ ಕಡೆ ಹೋಯ್ತು
ಗಣೇಶ ಇದೆ ವರ್ಷ ಶಾಲೆಗೆ ಸೇರಿದ್ದ ಬಂದು ತಿಂಗಳು ಆಗಿತ್ತು
ಪ್ರಾಂಶುಪಾಲರು ಕೋಪದಿಂದ
"ಅದ್ಕೆ ಅವತ್ತೇ ನಿಮ್ ತಾಯಿಗೆ ಸೇರಿಸಿಕೊಳ್ಳೋದಿಲ್ಲ ಅಂತ ಹೇಳಿದೆ..
ನೀವೆಲ್ಲ ಸರಕಾರಿ ಶಾಲೆ ಮಕ್ಳು ಹೀಗೆ..ನಿಮಗೆಲ್ಲ ಶಿಸ್ತು ಅನ್ನೋದೇ ಗೊತ್ತಿರೋಲ್ಲ..ಓದು ಇರೋಲ್ಲ... ಅದರ ಜೊತೆ ಈ ಕಳ್ಳತನ ...ಸುಳ್ಳುತನಗಳು ಬೇರೆ"
"ಸಾರ್ ಇಲ್ಲ ಸಾರ್ ನಾನು ಏನು ಕದಿಲ್ಲ ಸಾರ್..ನಾವು ಬಡವರೆ ಇರಬಹುದು ಆದರೆ ನಮ್ಮ ಮನೆಯಲ್ಲಿ ಆಗ್ಲಿ
ಶಾಲೆಯಲ್ಲಿ ಆಗಲಿ ಕಳ್ಳತನ ಮಹಾಪಾಪ ಅಂತ ಹೇಳಿದ್ದಾರೆ"
"ಸಾಕು ಬಾಯಿ ಮುಚ್ಚೋ ..ನಿಮ್ಮ ತಾಯಿ ಅವತ್ತು ನನ್ನ ಹತ್ರ ಬಂದು ನನ್ನ ಮಗ ಕನ್ನಡ ಮಾಧ್ಯಮದಲ್ಲಿ ಸರಕಾರಿ ಶಾಲೆಲಿ ಓದ್ತಾ ಇದಾನೆ ಅವನಿಗೆ ಇಂಗ್ಲಿಷ್ ಮೀಡಿಯಂ ಪ್ರೈವೇಟ್ ಸ್ಕೂಲನಲ್ಲಿ ಓದೋ ಆಸೆ ಇನ್ನು ನಾಲ್ಕು ಮನೆ ಮುಸುರೆ ಹೆಚ್ಚಿಗೆ ತಿಕ್ಕಿ ನಿಮ್ಮ ಫೀಸ್ ಕಟ್ಟುತ್ತೇನೆ ನನ್ನ ಮಗನ್ನ ನಿಮ್ಮ ಶಾಲೆಗೆ ಸೇರಿಸಿಕೊಳ್ಳಿ ಸಾರ್ ಅಂತ ಕೇಳಿಕೊಂಡಿದ್ದಕ್ಕೆ ಸೇರಿಸಿಕೊಂಡೇ...ಇದಕ್ಕೆ ನಾ ಬಂದದ್ದು ನೀನು ಈ ಶಾಲೆಗೆ ಶ್ರೀಮಂತರ ಹುಡುಗರು ಇರ್ತಾರೆ ದಿನ ಒಂದು ಕದಿಬಹುದು ಅಂತ"
"ಇಲ್ಲ ಸಾರ್ ನಾನು ಏನು ಕದಿಲ್ಲ ಸಾರ್ ದೇವರ ಅಣೆಗೂ "
"ಇನ್ನು ಒಂದು ಮಾತು ಕೂಡ ಆಡಬೇಡ ನಡಿ ಈಗ್ಲೇ ಕ್ಲಾಸ್ನಿಂದ Tc ತೊಗೊಂಡು ನಿಮ್ಮಂಥವರಿಗೆಲ್ಲ ಕನ್ನಡ ಸರಕಾರಿ ಶಾಲೆಗಳೇ ಸರಿ"
"ಸಾರ್ ಒಂದು ನಿಮಿಷ ಆಫೀಸ್ ಗೆ ಬರಬೇಕಂತೆ ವಿನೂತ ಮೇಡಂ ಕರಿತಾ ಇದ್ದಾರೆ"
ಸ್ಕೂಲ್ ಜವಾನ ಬಂದು ಹೇಳಿದ ವಿನೂತ ಮೇಡಂ ಕಂಪ್ಯೂಟರ್ ಟೀಚರ್
"ಸಾರ್ ಸುರಭಿ ಚೈನ್ ಕಳೆದಿದೆ ಅಂದಾಗ ನಾನು ಎಲ್ಲ cctv ಫೂಟೇಜ್ ಚೆಕ್ ಮಾಡಿದೆ ಒಂದರಲ್ಲಿ ಇದು ಸಿಕ್ತು ನೋಡಿ"
ಶ್ರೀಮಂತ ರಾಮಪ್ಪ ಅವರ ಮಗ ಕರಣ್ ಚಿನ್ನದ ಚೈನ್ ಜೇಬಿನಿಂದ ತೆಗೆದು ಅಲ್ಲೇ ಇರೋ ಹೂವಿನ ಕುಂಡದಲ್ಲಿ ಬಚ್ಚಿಡ್ತಾ ಇದ್ದ...
ಪ್ರಿನ್ಸಿಪಾಲ್ ಕ್ಲಾಸ್ ಗೆ ಬಂದು ಕರಣ್ನ ಗಟ್ಟಿಯಾಗಿ ಗದರಿದಾಗ ಚಿನ್ನದ ಚೈನ್ ಕದ್ದಿದ್ದಾಗಿ ಒಪ್ಪಿಕೊಂಡ
"ಗಣೇಶ್ ಚೈನ್ ಸಿಕ್ಕಾಯ್ತು ಇನ್ನು ನೀನು ಎಲ್ಲಿಗು ಹೋಗಬೇಕಾಗಿಲ್ಲ ಇಲ್ಲೇ ಓದು ಮುಂದುವರೆಸು"
*"ಬೇಡ ಸಾರ್ ನಾನು ಇಲ್ಲಿ ಇರೋಲ್ಲ..*
*ನಾನು ಕನ್ನಡ ಶಾಲೆಲಿ ಓದ್ತಾ ಇದ್ದಾಗ ಅಲ್ಲಿ ನಾನು ರಾಜನ ಹಾಗೆ ಇದ್ದೆ ...ನೀವು ಹೇಳೋ ಹಾಗೆ ಕನ್ನಡ ಮಾಧ್ಯಮದಲ್ಲಿ ಓದ್ತಾ ಇರೋರೆಲ್ಲ ದಡ್ಡರು ಅಲ್ಲ ಸಾರ್..*
*ನಾವು ಕನ್ನಡ ಮಾಧ್ಯಮದವರು ಯಾವುದೇ ವಿಷಯ ಕೊಟ್ಟರು ಗಂಟೆಗಟ್ಟಲೆ ಮಾತಾಡೋ ತಾಕತ್ತು ನಮಗೆ ಇದೆ...ನಿಮ್ಮ ಇಂಗ್ಲಿಷ್ ಮಕ್ಳು ಮಾತಾಡ್ತಾರೆ ನಾ?*
*ನಿಜ ನಮ್ಮ ಸರಕಾರಿ ಶಾಲೆಗಳಲ್ಲಿ ನೀವು ಹೇಳಿದ ಹಾಗೆ ಶಿಸ್ತು ಇರೋಲ್ಲ ಯಾಕಂದ್ರೆ ನಮ್ಮ ಉಪಾಧ್ಯಾಯರು ನಮ್ಮನ್ನು ವಿದ್ಯಾರ್ಥಿಗಳ ಹಾಗೆ ಅಲ್ಲ ಮಕ್ಕಳ ಹಾಗೆ ನೋಡ್ಕೋತಾರೆ ಅಲ್ಲಿ ಪ್ರೀತಿ ಇರುತ್ತೆ ಭಯ ಅಲ್ಲ..*
*ಕಳ್ಳತನ ಸುಳ್ಳು ಹೇಳೋದು ನಮಗೆ ಬರೋಲ್ಲ ಸಾರ್..*
*ನಾನು ಸರಕಾರಿ ಶಾಲಿಯಲ್ಲಿ ಇದ್ದಾಗ ಹಕ್ಕಿ ಹಾಗೆ ಸ್ವತಂತ್ರವಾಗಿ ಖುಷಿ ಖುಷಿಯಾಗಿ ಇದ್ದೆ ಆದರೆ ಅಮ್ಮನ್ನ ಕಾಡಿ ಕಾಡಿ ಈ ಶಾಲೆಗೆ ಸೇರಿದ ಮೇಲೆ ಗೊತ್ತಾಯ್ತು ಆಂಗ್ಲ ಮಾಧ್ಯಮ ಶಾಲೆಗಳು ಅಂದ್ರೆ ಚಿನ್ನದ ಪಂಜರಗಳು ಅಂತ..*
*ಬದುಕು ಕಲಿಯಬೇಕು ಅಂದ್ರೆ ಕನ್ನಡ ಸರಕಾರಿ ಶಾಲೆಲಿ ಕಲಿಯಬೇಕು ಅಂತ ಅರ್ಥ ಆಯ್ತು, ಕನ್ನಡ ಮಾಧ್ಯಮದಲ್ಲಿ ಓದಿನೇ ಇವರೆಲ್ಲರಗಿಂತ ದೊಡ್ಡ ಸ್ಥಾನ ಪಡೆದು ಎಲ್ಲರಿಗೂ ಕನ್ನಡ ಶಾಲೆಗಳ ಶಕ್ತಿ ಏನು ಅಂತ ತೋರಿಸುತ್ತೇನೆ ಬರುತ್ತೇನೆ ಸಾರ್"*
ಕೃಪೆ: ವಾಟ್ಸ್ ಆ್ಯಪ್ ಗ್ರೂಪ್.
ಸಂಗ್ರಹ:ವೀರೇಶ್ ಅರಸಿಕೆರೆ.
Comments
Post a Comment