ದಿನಕ್ಕೊಂದು ಕಥೆ 1029
*🌻ದಿನಕ್ಕೊಂದು ಕಥೆ🌻* ಸಾಧಕರಿಗೆ ಜೇಡರ ಹುಳು ಒಂದು ಜೀವಂತ ಪಾಠವಾಗಿದೆ.ಸಹನೆ ಮತ್ತು ಪ್ರಯತ್ನಶೀಲತೆಗೆ ಜೇಡರ ಹುಳು ಒಂದು ಆದರ್ಶ.ಬಲೆ ನಿರ್ಮಿಸುವ ಕೆಲಸದಲ್ಲಿ ಅದು ಹಲವು ಬಾರಿ ಸೋಲುತ್ತದೆ.ನೆಲಕ್ಕೆ ಉರುಳುತ್ತದೆ.ಆದರೂ ಅದು ಸದ್ದಿಲ್ಲದೆ ತನ್ನ ಪ್ರಯತ್ನವನ್ನು ಸಹನೆಯಿಂದ ಮುಂದುವರೆಸುತ್ತದೆ.ಅದು ಕೊನೆಗೂ ಒಂದು ಬಲೆಯನ್ನು ನಿರ್ಮಿಸಿಯೇ ನಿರ್ಮಿಸುತ್ತದೆ. ಒಬ್ಬ ರಾಜ ಯುದ್ದದಲ್ಲಿ ಹಲವು ಬಾರಿ ವೈರಿಗಳಿಂದ ಸೋತುಹೋದ.ಸೋತ ಆತ ನಿರಾಶನಾದ.ಹಾಗೆ ಕುಳಿತ್ತಿದ್ದಾರೆ ಅವನ ಕಣ್ಣಿಗೆ ಒಂದು ಜೇಡರ ಹುಳು ಕಾಣಿಸಿಕೊಂಡಿತು.ಅದನ್ನು ಆತ ಗಮನವಿರಿಸಿ ನೋಡಿದ! ಜೇಡರ ಹುಳು ತನ್ನ ಬಲೆ ರಚಿಸುವ ಕಾರ್ಯದಲ್ಲಿ ಹಲವು ಸಾರಿ ಸೋತಿತು.ಸೋತು ನೆಲಕ್ಕುರುಳಿತು.ಅದರೂ ಅದು ಸದ್ದು ಮಾಡಲಿಲ್ಲ.ಸಹನೆ ಕಳೆದುಕೊಳ್ಳಲಿಲ್ಲ.ಪ್ರಯತ್ನ ಬಿಡಲಿಲ್ಲ.ಮರಳಿ ಯತ್ನವ ಮಾಡು ಎಂಬಂತೆ ಆ ಜೇಡರ ಹುಳುವು ಎಡಬಿಡದೆ ಪ್ರಯತ್ನಿಸಿ ಕೊನೆಗೆ ಬಲೆಯೊಂದನ್ನು ನೇಯ್ದೇಬಿಟ್ಟಿತು! ಅದು ತನ್ನ ಪ್ರಯತ್ನದಲ್ಲಿ ಸಫಲತೆ ಪಡೆಯುವವರೆಗೂ ಸುಮ್ಮನಾಗಲಿಲ್ಲ. ಇದನ್ನ