Posts

Showing posts from March, 2022

ದಿನಕ್ಕೊಂದು ಕಥೆ 1043

*🌻ದಿನಕ್ಕೊಂದು ಕಥೆ🌻* *ನಮಸ್ಕಾರದ ಪ್ರಾಮುಖ್ಯತೆ*        ಮಹಾಭಾರತದ ಯುದ್ಧ ನಡೆಯುತ್ತಿತ್ತು -      ಒಂದು ದಿನ, ದುರ್ಯೋಧನನ ವ್ಯಂಗ್ಯ ವಿಡಂಬನೆಯಿಂದ ನೊಂದ  ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ .        *"ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"*         ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -     ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ -   ಶ್ರೀ ಕೃಷ್ಣ ದ್ರೌಪದಿ ಗೆ, ಈಗ ನನ್ನೊಂದಿಗೆ ಬಾ - ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮಹನ ಶಿಬಿರವನ್ನು ತಲಿಪಿದನು -   ಶಿಬಿರದ ಹೊರಗೆ ನಿಂತು ದ್ರೌಪದಿ ಗೆ – *“ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.”* ಎಂದು ಹೇಳಿದರು       ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ -    *"ಅಖಂಡ ಸೌಭಾಗ್ಯವತಿ ಭವ"* ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!    *"ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿನ್ನನ್ನು ಇಲ್ಲಿಗೆ  ಕರೆತಂದಿದ್ದಾರಾ"?* ಆಗ ದ್ರೌಪದಿ ಹೀಗೆ ಹೇಳಿದಳು -      *"ಹೌದು,ಅವರು ಕೋಣೆಯ ಹೊರಗೆ ನಿಂತಿದ್ದಾರೆ"* ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರ

ದಿನಕ್ಕೊಂದು ಕಥೆ 1042

*🌻 ದಿನಕ್ಕೊಂದು ಕಥೆ*🌻                                                *ಬದುಕಿನ ರೀತಿ*  ಒಂದು ಹೆಮ್ಮರ ಇತ್ತು.  ಒಂದು ಸಸಿ, ಗಾಳಿ ಹೊಡೆತಕ್ಕೆ ಏಳುತ್ತ ಬೀಳುತ್ತ ,ಬೆಳೆಯುತ್ತಿತ್ತು. ಒಬ್ಬ ಸಂತನು ಅಲ್ಲಿಗೆ ಬಂದ. ಎಳೆಯ ಸಸಿಯ ಕಷ್ಟವನ್ನು ಕಂಡು ಮನ ಕರಗಿತು. ಅದಕ್ಕೊಂದು ಕೋಲಿನ ಆಶ್ರಯ ಕೊಡಲು ಹೋದ. ಸಸಿ ಹೇಳಿತು “ಸಂತನೇ”, ಈ ಕೋಲಿನ ಆಶ್ರಯ ನನಗೆ ದಯವಿಟ್ಟು ಕೊಡಬೇಡಿ !” ಸಂತ ಕೇಳಿದ – “ಅದೇಕೆ ಬೇಡ ? ಈ ಕೋಲು ಮಳೆ-ಗಾಳಿಯಿಂದ ನಿನ್ನನ್ನು ರಕ್ಷಿಸುತ್ತದೆ.”   ಸಸಿ ಹೇಳಿತು – “ಎಲ್ಲದಕ್ಕೂ ಆಶ್ರಯವನ್ನು ಬಯಸುವವರು ಮನುಷ್ಯರೇ ವಿನಾ ನಾವಲ್ಲ. ಎಲೆ ಉದುರಬೇಕು. ಅವೆಲ್ಲವನ್ನೂ ಎದುರಿಸಿ ನಾವು ಗಟ್ಟಿಗೊಳ್ಳಬೇಕು. ಭವಿಷ್ಯತ್ತಿನಲ್ಲಿ ಹೆಮ್ಮರವಾಗಿ ಬೆಳೆಯಬೇಕು. ಅದು ನಮ್ಮ ಬದುಕಿನ ರೀತಿ!!” ಸಸಿಯ ಮಾತನ್ನು ಕೇಳಿ ಸಂತರಿಗೆ ಸಾನಂದಾಶ್ಚರ್ಯವಾಯಿತು.  ಸಂಗ್ರಹ: ವೀರೇಶ್ ಅರಸಿಕೆರೆ. ************************************* *🌻 ದಿನಕ್ಕೊಂದು ಕಥೆ 🌻* *ಸಾಮಾನ್ಯನೊಬ್ಬ ಅಸಾಮಾನ್ಯನಾಗಿದ್ದು !* ಕೃಪೆ: ವಿಶ್ವೇಶ್ವರ ಭಟ್ I ಸಂಪಾದಕರು  ವಿಶ್ವವಾಣಿ . ನೀವು ಬ್ರಾಂಡನ್ ಸ್ಟಾಂಟನ್ ಬಗ್ಗೆ ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿ, ತೀರಾ ಸಾಮಾನ್ಯವೆನಿಸುವ ಕೆಲಸಗಳಿಂದಲೂ ಹೇಗೆ ಜಗತ್ತಿನ ಗಮನವನ್ನು ಸೆಳೆಯಬಹುದು ಎಂಬುದಕ್ಕೆ ಆತನೊಬ್ಬ ನಿದರ್ಶನವಾಗಿ ನನಗೆ ಕಾಣುತ್ತಾನೆ. ಮೂಲತಃ ಅಮೆರಿಕದ ಅಟ್ಲಾಂಟಾದವನಾದ

ದಿನಕ್ಕೊಂದು ಕಥೆ 1041

ದಿನಕ್ಕೊಂದು ಕಥೆ *ಹೆಣ ಭಾರವಾದ 🐑ಕುರಿಮರಿ*  ಒಂದೂರಿನಲ್ಲಿ ಒಬ್ಬ ಸತೀಶ ಅಂತ ಹುಡುಗ ಇದ್ದ.ಓ!ಆ ಹುಡುಗ ಯಾರು ಅಂತೀರಾ?ನಾನೇ ಕಣ್ರೀ. ನಮ್ಮ ಊರಲ್ಲಿ ಊರಿಂದ ಹೊರಗೆ ಒಂದು ಹಳ್ಳ ಇತ್ತು.ಹಳ್ಳಕ್ಕೆ ದೊಡ್ಡ ಸೇತುವೆ ಇತ್ತು.ಆ ಸೇತುವೆಯತ್ರ ಮಧ್ಯರಾತ್ರೀಲಿ ದೆವ್ವಗಳು ಓಡಾಡ್ತವೆ ಅಂತ ಊರವರೆಲ್ಲ ಮಾತಾಡ್ತಿದ್ರು. ನನಗೆ ಯಾವಾಗಲೂ ಇಂಥ ಕುತೂಹಲಕಾರಿ ಸಂಗತಿಗಳನ್ನು ಭೇದಿಸುವುದು ಅಂದ್ರೆ ಬಹಳ ಇಷ್ಟ. ಒಂದಿನ ನಾನು ಮಧ್ಯರಾತ್ರೀಲಿ ಹೋಗ್ಬೇಕು ಅಂತ ಅನ್ನುಸ್ತು. ಅಲ್ಲೇನಿದೆ?ನೋಡೇ ಬಿಡಬೇಕು ಅಂತ ಒಂದು ದಿನ ಏಕಾಏಕಿ ನಿರ್ಧಾರ ಮಾಡಿ ಒಬ್ಬನೇ ಹೊರಟೇ ಬಿಟ್ಟೆ.ಮಧ್ಯರಾತ್ರಿ ಹನ್ನೆರಡು ಗಂಟೆ ಆಗಿದೆ.ನಿಧಾನವಾಗಿ ಹೊರಟೆ. ಯಾವ ಕಡೆ ನೋಡಿದರೂ ಕತ್ತಲು ಕತ್ತಲು.ಯಾಕೆಂದ್ರೆ ಅವತ್ತು ಅಮವಾಸೆ ಕಣ್ರೀ.ಒಂದು ಸಣ್ಣ ಇಲಿ ಹೋದ್ರು ಭಯ ಆಗ್ತಿತ್ತು.ಒಂದು ಸಣ್ಣ ಎಲೆ ಗಾಳಿಗೆ ಅಲುಗಾಡಿದರೆ ಸರಸರ ಸರಸರ ಅಂತಿತ್ತು.ಎಂದುಾ ಹೆದರದ ನಾನು ಅವತ್ತು ಒಂದು ಸಣ್ಣ ಎಲೆಗೆ ಹೆದರಲೇಬೇಕಾಯ್ತು. ಯಾಕೇಂದ್ರೆ ಯಾವ ಕಡೆ ನೋಡಿದರೂ ಕತ್ತಲೆ.ಮಧ್ಯರಾತ್ರೀಲಿ ಆಗೊಂದು ಈಗೊಂದು ಗೂಬೆ ಕೂಗೋದು ಬಿಟ್ರೆ ನೀರವ ಮೌನ. ಯಾರೂ ಇಲ್ಲ ನೀವೇ ಊಹೆ ಮಾಡ್ಕೊಳ್ರಿ.ಹೇಗಾಗಿರಬೇಕು? ಧೈರ್ಯವಾಗಿ ನಿಧಾನವಾಗಿ ನಡಕೊಂಡು ನಡಕೊಂಡು ಹೋದೆ. ಅಂತೂ ಇಂತೂ ಆ ಸೇತುವೆಯ ಹತ್ರ ತಲುಪಿದೆ.ನೋಡ್ತಿನಿ ಒಂದು ಸಣ್ಣ ಕುರಿಮರಿ ಆ ಕತ್ತಲ ಸರಿರಾತ್ರೀಲಿ ಮೇಯ್ತಾ ಇದೆ. ಅಯ್ಯೋ!ಪಾಪ ಯಾರೋ  ಕುರಿಮರಿಯನ್ನು ಬಿಟ್ಟುಹೋಗಿದ್ದಾರ