ದಿನಕ್ಕೊಂದು ಕಥೆ 1041

ದಿನಕ್ಕೊಂದು ಕಥೆ

*ಹೆಣ ಭಾರವಾದ 🐑ಕುರಿಮರಿ* 

ಒಂದೂರಿನಲ್ಲಿ ಒಬ್ಬ ಸತೀಶ ಅಂತ ಹುಡುಗ ಇದ್ದ.ಓ!ಆ ಹುಡುಗ ಯಾರು ಅಂತೀರಾ?ನಾನೇ ಕಣ್ರೀ. ನಮ್ಮ ಊರಲ್ಲಿ ಊರಿಂದ ಹೊರಗೆ ಒಂದು ಹಳ್ಳ ಇತ್ತು.ಹಳ್ಳಕ್ಕೆ ದೊಡ್ಡ ಸೇತುವೆ ಇತ್ತು.ಆ ಸೇತುವೆಯತ್ರ ಮಧ್ಯರಾತ್ರೀಲಿ ದೆವ್ವಗಳು ಓಡಾಡ್ತವೆ ಅಂತ ಊರವರೆಲ್ಲ ಮಾತಾಡ್ತಿದ್ರು. ನನಗೆ ಯಾವಾಗಲೂ ಇಂಥ ಕುತೂಹಲಕಾರಿ ಸಂಗತಿಗಳನ್ನು ಭೇದಿಸುವುದು ಅಂದ್ರೆ ಬಹಳ ಇಷ್ಟ. ಒಂದಿನ ನಾನು ಮಧ್ಯರಾತ್ರೀಲಿ ಹೋಗ್ಬೇಕು ಅಂತ ಅನ್ನುಸ್ತು. ಅಲ್ಲೇನಿದೆ?ನೋಡೇ ಬಿಡಬೇಕು ಅಂತ ಒಂದು ದಿನ ಏಕಾಏಕಿ ನಿರ್ಧಾರ ಮಾಡಿ ಒಬ್ಬನೇ ಹೊರಟೇ ಬಿಟ್ಟೆ.ಮಧ್ಯರಾತ್ರಿ ಹನ್ನೆರಡು ಗಂಟೆ ಆಗಿದೆ.ನಿಧಾನವಾಗಿ ಹೊರಟೆ. ಯಾವ ಕಡೆ ನೋಡಿದರೂ ಕತ್ತಲು ಕತ್ತಲು.ಯಾಕೆಂದ್ರೆ ಅವತ್ತು ಅಮವಾಸೆ ಕಣ್ರೀ.ಒಂದು ಸಣ್ಣ ಇಲಿ ಹೋದ್ರು ಭಯ ಆಗ್ತಿತ್ತು.ಒಂದು ಸಣ್ಣ ಎಲೆ ಗಾಳಿಗೆ ಅಲುಗಾಡಿದರೆ ಸರಸರ ಸರಸರ ಅಂತಿತ್ತು.ಎಂದುಾ ಹೆದರದ ನಾನು ಅವತ್ತು ಒಂದು ಸಣ್ಣ ಎಲೆಗೆ ಹೆದರಲೇಬೇಕಾಯ್ತು. ಯಾಕೇಂದ್ರೆ ಯಾವ ಕಡೆ ನೋಡಿದರೂ ಕತ್ತಲೆ.ಮಧ್ಯರಾತ್ರೀಲಿ ಆಗೊಂದು ಈಗೊಂದು ಗೂಬೆ ಕೂಗೋದು ಬಿಟ್ರೆ ನೀರವ ಮೌನ. ಯಾರೂ ಇಲ್ಲ ನೀವೇ ಊಹೆ ಮಾಡ್ಕೊಳ್ರಿ.ಹೇಗಾಗಿರಬೇಕು? ಧೈರ್ಯವಾಗಿ ನಿಧಾನವಾಗಿ ನಡಕೊಂಡು ನಡಕೊಂಡು ಹೋದೆ. ಅಂತೂ ಇಂತೂ ಆ ಸೇತುವೆಯ ಹತ್ರ ತಲುಪಿದೆ.ನೋಡ್ತಿನಿ ಒಂದು ಸಣ್ಣ ಕುರಿಮರಿ ಆ ಕತ್ತಲ ಸರಿರಾತ್ರೀಲಿ ಮೇಯ್ತಾ ಇದೆ. ಅಯ್ಯೋ!ಪಾಪ ಯಾರೋ  ಕುರಿಮರಿಯನ್ನು ಬಿಟ್ಟುಹೋಗಿದ್ದಾರೆ.ಅನ್ಕೊಂಡು ಭಾಳ ಖುಷಿ ಪಟ್ಟು ಓಡೋಗಿ ಕುರಿ ಮರಿಯನ್ನು ಹಿಡ್ಕೊಂಡು ನನ್ನ ಹೆಗಲ ಮೇಲೆ ಹೊತ್ತುಕೊಂಡು ನಿಧಾನವಾಗಿ ಆ ಸೇತುವೆ ಮೇಲೆ ನಡೀತಾ ಹೋದೆ.ಕುರಿ ಮರಿಯನ್ನು ಹೊತ್ಕೊಂಡು ಹೋಗ್ತಾ ಹೋಗ್ತಾ ಹೋಗ್ತಾ ಒಂದು 5 ಕೆಜಿ ಇದ್ದಂಥ ಸಣ್ಣ ಕುರಿಮರಿ ಹೆಣ ಭಾರವಾಗ್ತಾ ಹೋಯ್ತು.ಅಯ್ಯೋ!ಇಷ್ಟು ಹಗುರವಾಗಿದ್ದ ಕುರಿ ಯಾಕಿಷ್ಟು ಭಾರವಾಗುತ್ತಾ ಹೋಗುತ್ತಿದೆ?ಸರಿ ಏನಾದ್ರೂ ಆಗ್ಲಿ ಈ ಕುರಿಮರಿನಾ ಮನೆಗೆ ತೊಗೊಂಡು ಹೋಗ್ಲೇ ಬೇಕು ಅಂತಿದ್ದೋನು ಹೋಗ್ತಾ ಹೋಗ್ತಾ ಹೋಗ್ತಾ ಭಾರ ವಿಪರೀತ ವಾಗುತ್ತಾ ಹೋಯ್ತು.ಆವಾಗ ಊರೋರೆಲ್ಲ ಹೇಳುತ್ತಿದ್ದ ದೆವ್ವಗಳು ನೆನಪಾದವು.ಓಹೋ!ಇದು ನಿಜವಾದ ದೆವ್ವಾನೇ ಇರಬೇಕು ಅಂತ ಅನ್ನಿಸಿದ್ದೇ ತಡ ಗಾಬರಿಯಿಂದ ಎತ್ತಿ ಬಿಸಾಕಿ,ಎದ್ನೋ ಬಿದ್ನೋ ಅಂತ ಓಡೋಕೆ ಶುರು ಮಾಡ್ದೆ.ಗಾಬರಿಯಿಂದ ಓಡ್ತಾ ಓಡ್ತಾ ಓಡ್ತಾ ಓಡ್ತಾ ಓಡ್ತಾ ಓಡ್ತಾನೆ ಇದ್ದೆ. ದಿಢೀರಂತ ಆ ಕುರಿಮರಿ  ನನ್ನ ಬೆನ್ನಟ್ಟಿ ಓಡಿ ಬಂದು ನನ್ನ ಗುದ್ದಿ ಬಿಡೋದೆ?ಗುದ್ದಿದ ಫೋರ್ಸ್ ಗೆ ಮಂಚದಿಂದ ಕೆಳಗೆ ಬಿದ್ದೆ.ಕಣ್ಣು ಬಿಟ್ಟು ನೋಡ್ತೀನಿ,ಅಯ್ಯಯ್ಯಪ್ಪ!! ಭಯಂಕರ ಕನಸು ಮಾರಾಯರೆ. 😜😜😜😜😜🤣🤣🤣🤣

ಕೃಪೆ: ಶ್ರೀ ಸತೀಶ್ ಕೆ ಎಸ್ 
ಸ ಹಿ ಪ್ರಾ ಶಾಲೆ ಬೆನಕನಕೊಪ್ಪ
ತಾ॥ನರಗುಂದ         ಜಿ॥ಗದಗ್
ಸಂಗ್ರಹ: ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097