ದಿನಕ್ಕೊಂದು ಕಥೆ 1047
*🌞ದಿನಕ್ಕೊಂದು ಕಥೆ 🌞* ಕಾಲೇಜು ಪ್ರಿನ್ಸ್ ಪಾಲರ ಮನೆಗೆ ತೆಂಗಿನ ಮರಕ್ಕೆ ಹತ್ತಲು ಸುಬ್ಬಣ್ಣ ಹೋಗಿದ್ದ. ಮನೆಯ ಜಗಲಿಯಲ್ಲಿ ಪ್ರಿನ್ಸಿಪಾಲರು ಸೋಫಾದಲ್ಲಿ ಕುಳಿತ್ತಿದ್ದರು. ಅವರೊಂದಿಗೆ ಮಾತನಾಡುತ್ತ ಸುಬ್ಬಣ್ಣ ಕೇಳಿದ "ಧನಿ ನಿಮಗೆ ಕಾಲೇಜಿನಲ್ಲಿ ಸಂಬಳ ಎಷ್ಟು ಸಿಗುತ್ತದೆ". ಅದಕ್ಕೆ ಅವರು ಹೇಳಿದರು "ಒಂದು ಒಂದೂವರೆ ಲಕ್ಷದಷ್ಟು". ಆಗ ಸುಬ್ಬಣ್ಣ ಹೇಳಿದ "ಅದು ಸ್ವಲ್ಪ ಜಾಸ್ತಿ ಆಯಿತು ಅಲ್ವಾ" ಅದಕ್ಕೆ ಪ್ರಿನ್ಸಿಪಾಲ್ ಹೇಳಿದರು "ಶಾಲೆಗೆ ಹೋಗೋ ಸಮಯದಲ್ಲಿ ಹಲಸಿನ ಮರ ಮಾವಿನ ಮರ ಏರಿ ಆಟ ಆಡದೆ ಶಾಲೆಗೆ ಹೋಗಬೇಕಿತ್ತು ಈಗ ಅಸೂಯೆ ಪಟ್ಟು ಪ್ರಯೋಜನ ಇಲ್ಲ "ಎಂದು ನಕ್ಕುಬಿಟ್ಟರು. ನಂತರ ಸುಬ್ಬಣ್ಣ ತೆಂಗಿನ ಮರಕ್ಕೆ ಹತ್ತಿ ತೆಂಗಿನ ಕಾಯಿ ಎಲ್ಲಾ ತೆಗೆದು. ಪ್ರಿನ್ಸಿಪಾಲರ ಹತ್ತಿರ ಕೂಲಿಗಾಗಿ ಕೈ ಚಾಚಿದ ಆಗ ಪ್ರಿನ್ಸಿಪಾಲರು ಅವನ ಕೈಗೆ 100 ರೂಪಾಯಿ ನೋಟೊಂದನ್ನು ಕೈಗೆ ಕೊಟ್ಟರು. ಆಗ ಸುಬ್ಬಣ್ಣ ಹೇಳಿದ "ನನ್ನ ಕೂಲಿ ನೂರು ರೂಪಾಯಿ ಅಲ್ಲ 500 ರೂಪಾಯಿ "ಎಂದ. ಅದಕ್ಕೆ ಪ್ರಿನ್ಸಿಪಾಲರು "ಅದು ಜಾಸ್ತಿಯಾಯಿತು ಅಲ್ವ" ಎಂದರು. ಸುಬ್ಬಣ್ಣ ಅದಕ್ಕೆ ಉತ್ತರಿಸಿದ "ಚಿಕ್ಕ ವಯಸ್ಸಿನಲ್ಲಿ ಕಾಗದ, ಪೆನ್ನು, ಶಾಲೆ ಕಾಲೇಜು ಅಂತ ತಿರುಗಾಡುವಾಗ ಆಲೋಚಿಸಬೇಕಿತ್ತು. ತೆಂಗಿನ ಮರ ಹತ್ತಲು ಕೂಡ ಕಲಿಯಬೇಕು ಎಂದ".... ಪ್ರಿನ್ಸಿಪಾಲರು ಒಮ್ಮೆಗೆ ದಂಗಾಗಿ ಸುಬ್ಬಣ್ಣನಿಗೆ 500