ದಿನಕ್ಕೊಂದು ಕಥೆ 1055
*🌻ದಿನಕ್ಕೊಂದು ಕಥೆ 🌻* *ಮಿಡಿತ* "ಅವ್ವಾ..ss, ಬಾಕ್ಲು ಹಾಕ್ಕೋ..,ನಾ ಬತ್ತೀನೀ.."ಎಂದು ತನ್ನ ತಾಯಿಗೆ ಕೂಗಿ ಹೇಳಿದ ನಿಂಗಿಯ ಗಂಡ ಪರಶು,ಅವರ ಉತ್ತರಕ್ಕಾಗಿ ಕಾಯದೇ, ಎಂದಿನಂತೆ ಗಾರೆ ಕೆಲಸಕ್ಕೆಂದು ಮೊಪೆಡ್ ಸ್ಟಾರ್ ಮಾಡಿ, ಇನ್ನೇನು ಹೊರಡಬೆಕೆನ್ನುವಷ್ಟರಲ್ಲಿ ಎದುರಿನಿಂದ ನಿಧಾನವಾಗಿ ಬರುತ್ತಿದ್ದ ಆಟೋ ಆತನ ಪಕ್ಕಕ್ಕೆ ಬಂದು ನಿಂತಿತು.ಪರಶು ಇಣುಕಿ ನೋಡಿದ.ಅದರೊಳಗೆ ತನ್ನ ಪತ್ನಿ ಇರುವುದನ್ನು ಕಂಡು ಮನದಲ್ಲಿ"ಅರ್ರೇ.. ಇದೇನು ಇವಳು ಭಾಗಕ್ಕನ ಮನೆ ಕೆಲಸಕ್ಕೆ ಹೋಗಿ ಇನ್ನೂ ಒಂದು ಗಂಟೆ ಕೂಡಾ ಆಗಿಲ್ಲ.. ಇದ್ಯಾಕೆ ರಿಕ್ಷಾ ದಲ್ಲಿ ಬಂದ್ಲು"ಎಂದು ಯೋಚಿಸುತ್ತಿದ್ದವ ಅರ್ಧಕ್ಕೆ ನಿಲ್ಲಿಸಿ ಕುತೂಹಲದಿಂದ"ಇದ್ಯಾಕೆ ನಿಂಗೀ.."ಎಂದು ಕೇಳುತ್ತಿದ್ದಂತೆ , ಆಕೆ ಕುಳಿತಲ್ಲಿಂದಲೇ "ಮತ್ತೆ..ಭಾಗಕ್ಕಾವ್ರು ಇಂದ ನಸಕ್ ನ್ಯಾಗೆ ಹೂ ಕಿತ್ತಾಕೆ ಹೋಗಿ ತಲೆತಿರುಗಿ ಮೆಟ್ಲಮ್ಯಾಲಿಂದ ಬಿದ್ದು ತಲೆಗೆ ಏಟು ಮಾಡ್ಕೊಂಡಾವ್ರೆ.. ತಲೆಯಿಂದ ಸಾನೆ ರಕ್ತ ಹೋಗಿ ಪ್ರಜ್ಞೆ ತಪ್ಪಿತ್ತಂತೆ, ಹಿಂಗಾಗಿ ಅಪ್ಪಾರು ಮತ್ತೆ ಅವರ ಮಗ ಎಲ್ಲಾ ಸೇರಿ ಅವರನ್ನ ಆಸ್ಪತ್ರೆಗೆ ಸೇರ್ಸಿದ್ದಾರಂತೆ... ಅಲ್ಲಿ ಅವ್ರ ರಕ್ತದ ಗುಂಪಿನ ರಕ್ತ ಸಿಗ್ತಿಲ್ಲಂತ ಎಲ್ಲಾ ಕಡೆ ಹುಡುಕ್ತಾವ್ರೆ... ಹಿಂಗಾಗಿ ಭಾಗಕ್ಕಾರ ಮಗಳು. ನನಗೆ ಪಾತ್ರೆ ತೊಳ್ದು ಬಿಟ್ಟು, ನೀ ಆಸ್ಪತ್ರೆಗೆ ಹೋಗೀರು ಎಂದು ಆಟೋ ಮಾಡಿ ಕಳ್ಸಕೊಟ್ಟವ್ರೆ.. ಅದ್ಕೆ ಅತ್ತೆಗೆ ಒ