ದಿನಕ್ಕೊಂದು ಕಥೆ 1094
*🌻ದಿನಕ್ಕೊಂದು ಕಥೆ🌻*
ಅದೊಂದು ಶಾಲೆ. ತುಸು ದೂರದಲ್ಲಿ ಒಂದು ಮನೆ. ಆ ಮನೆಯಲ್ಲಿ ಒಬ್ಬ ಮುದುಕ ವಾಸಿಸುತ್ತಿದ್ದಾನೆ.
ಶಾಲೆಯಲ್ಲಿ ಮಕ್ಕಳು ವಸ್ತು ಪ್ರದರ್ಶನ ಏರ್ಪಡಿಸಿದ್ದಾರೆ. ಜನರು ಪ್ರದರ್ಶನ ನೋಡಿ ಹೋಗುತ್ತಿದ್ದಾರೆ. ಹುಡುಗನೊಬ್ಬ ಟಾರ್ಚ್ ಸೆಲ್ಲಿಗೆ ಮತ್ತು ಬಲ್ಬಿಗೆ ಒಂದು ತಂತಿಯನ್ನು ಜೋಡಿಸಿದ್ದಾನೆ. ಜನರಿಗೆ ತಿಳಿಸುತ್ತಾನೆ, ನೋಡಿ ಸೆಲ್ಲನಿಂದ ಕರೆಂಟ್ ಹರಿದು ಬಲ್ಬ್ ಉರಿಯುತ್ತಿದೆ ಎಂದು. ಜನರು ಹುಡುಗನ ಜಾಣ್ಮೆಗೆ ತಲೆದೂಗುತ್ತಾರೆ. ಶಾಲೆಯ ಬಳಿಯಲ್ಲಿರುವ ಮುದುಕ ಪ್ರದರ್ಶನ ನೋಡಲು ಬರುತ್ತಾನೆ. ಹುಡುಗ ಅವನಿಗೂ ಕರೆಂಟ್ ಬಗ್ಗೆ ಹೇಳುತ್ತಾನೆ. ಮುದುಕ ಕೇಳುತ್ತಾನೆ ಮಗುವೇ ನೀನು ಕರೆಂಟ್ ನೋಡಿದ್ದೀಯಾ ಎಂದು? ಹುಡುಗನಿಗೆ ಗೊತ್ತಿಲ್ಲ. ಮುದುಕ ಹೊರಟು ಹೋಗುತ್ತಾನೆ.
ಹುಡುಗ ಶಿಕ್ಷಕರ ಬಳಿ ಬಂದು ನಡೆದುದನ್ನು ಹೇಳುತ್ತಾನೆ. ಶಿಕ್ಷಕರಿಗೂ ಉತ್ತರ ಗೊತ್ತಿಲ್ಲ. ಇಬ್ಬರೂ ಪ್ರಿನ್ಸಿಪಾಲರ ಬಳಿ ವಿಷಯವನ್ನು ತಿಳಿಸುತ್ತಾರೆ. ಪ್ರಿನ್ಸಿಪಾಲರಿಗೂ ಉತ್ತರ ಗೊತ್ತಿಲ್ಲ.
ಮೂವರೂ ಮುದುಕನ ಬಳಿ ಬರುತ್ತಾರೆ. ಪ್ರಿನ್ಸಿಪಾಲರು ಮುದುಕನಿಗೆ ನೀನು ಕರೆಂಟ್ ನೋಡಿದ್ದೀಯಾ ಎಂದು ಕೇಳುತ್ತಾರೆ. ಮುದುಕ ಇಲ್ಲ ಎನ್ನುತ್ತಾನೆ. ಹಾಗಾದರೆ ನಮ್ಮ ಹುಡುಗನಿಗೆ ಯಾಕೆ ನಿನಗೇ ಗೊತ್ತಿಲ್ಲದ ಪ್ರಶ್ನೆಯನ್ನ ಕೇಳಿದೆ ಎಂದು ಕೋಪಿಸುತ್ತಾರೆ.
ಮುದುಕ ಹೇಳುತ್ತಾನೆ. ಕರೆಂಟ್ ಅನ್ನು ಯಾರೂ ನೋಡಲು ಸಾಧ್ಯವಿಲ್ಲ. ಉಪಯೋಗಿಸಬಹುದು. ಈ ಉತ್ತರವನ್ನು ನಾನು ಹುಡುಗನಿಂದ ನಿರೀಕ್ಷಿಸಿದ್ದೆ ಎನ್ನುತ್ತಾನೆ. ಕೋಪದಿಂದ ಪ್ರಿನ್ಸಿಪಾಲರು ಇದು ಎಲ್ಲರಿಗೂ ಗೊತ್ತಿರುವ ವಿಷಯವೆ. ನೀನೇನು ಕರೆಂಟ್ ಕಂಡುಹಿಡಿದ ಮೈಕಲ್ ಫಾರ್ರಡೆ ತರಾ ಆಡುತ್ತಿರುವೆ ಎಂದರು. ಮುದುಕ ಉತ್ತರಿಸಿದ, ಸಾರ್ ನಾನು ಮೈಕೆಲ್ ಫಾರ್ರಡೆ ತರಾ ಆಡುತ್ತಿಲ್ಲ. ನಾನೇ ಮೈಕೆಲ್ ಫಾರ್ರಡೆ ಎಂದು. ಪ್ರಿನ್ಸಿಪಾಲರು ತಡವರಿಸಿ ಮುದುಕನಲ್ಲಿ ಕ್ಪಮೆ ಕೋರಿದರು.
ಕೃಪೆ:ಗಣೇಶ್ ಜಗನ್ನಾಥ್.
ಸಂಗ್ರಹ:ವೀರೇಶ್ ಅರಸೀಕೆರೆ.
Comments
Post a Comment