ದಿನಕ್ಕೊಂದು ಕಥೆ 1109

*🌻ದಿನಕ್ಕೊಂದು ಕಥೆ🌻*

ಪಾಂಡುರಂಗನ ಪರಮ ಭಕ್ತನಾದ ಸಂತ ತುಕಾರಾಮರು ನಿರಂತರವಾಗಿ ಪಾಂಡುರಂಗನ ನಾಮಸ್ಮರಣೆಯಲ್ಲಿ ತಲ್ಲೀನರಾಗಿರುತ್ತಿದ್ದರು. ಒಂದು ಸಲ ಅವರ ತಂದೆಯ ಶ್ರಾಧ್ಧ ಇತ್ತು. ಶ್ರಾದ್ಧದಲ್ಲಿ ಅರ್ಥ ಮೃತ್ಯು ಹೊಂದಿದ ವ್ಯಕ್ತಿಗಳ ಪುಣ್ಯತಿಥಿ. ಶ್ರಾದ್ಧದಲ್ಲಿ ಇಬ್ಬರು ಬ್ರಾಹ್ಮಣರಿಗೆ ಕರೆದು ಅವರಿಗೆ ಫಲ ಮತ್ತು ದಕ್ಷಿಣೆ ಕೊಟ್ಟ ಮೇಲೆಯೇ ಮನೆಯ ಸದಸ್ಯರೆಲ್ಲರೂ ಭೋಜನ ಮಾಡಬೇಕಿತ್ತು. ಅವರ ಪತ್ನಿ ಜೀಜಾಯಿ ಅಗತ್ಯವಿರುವ ಸಾಮಾನು ಬೇಗನೆ ತರಲು ಹೇಳಿದಳು. ತುಕಾರಾಮರು ಮನೆಯಿಂದ ಹೊರಟರು. ಮಾರ್ಗದಲ್ಲಿ ಅವರು ಪಾಂಡುರಂಗನ ನಾಮಸ್ಮರಣೆ ಮಾಡುತ್ತಿದ್ದರು. ಅವರು ಊರನ್ನು ದಾಟಿದ ಮೇಲೆ ಒಂದು ಹೊಲದಲ್ಲಿ (ಗದ್ದೆ) ಫಸಲು ತೆಗೆಯುತ್ತಿದ್ದನ್ನು ನೋಡಿದರು. ತುಕರಾಮನನ್ನು ನೋಡಿ ರೈತನು ’ಎನು ಕೆಲಸ ಮಾಡುವೆ? ಕೆಲಸ ಮಾಡಿದರೆ ದುಡ್ಡು ಮತ್ತು ಅದರ ಜೊತೆಗೆ ದಿನಸಿ ಕೂಡಾ ಕೊಡುವೆ" ಎಂದನು.#ಆಧ್ಯಾತ್ಮಿಕ_ಕಥೆಗಳು

ತುಕಾರಾಮರು ಹೊಲದಲ್ಲಿ ಹೋಗಿ ಫಸಲು ಕಡೆಯುತ್ತ ಮನೆಯ ಕೆಲಸವನ್ನು ಮರೆತುಬಿಟ್ಟರು. ಮಧ್ಯಾಹ್ನ ಸಮೀಪಿಸುತ್ತಿತ್ತು. ಜೀಜಾಯಿಗೆ ಎನು ಮಾಡಬೇಕು ಎಂದು ತಿಳಿಯದಾಯಿತು. ಸ್ವಲ್ಪ ಸಮಯದ ನಂತರ ತುಕರಾಮರು ಮನಗೆ ಹಿಂತಿರುಗಿದರು. ಜೀಜಾಯಿ ಹೇಳಿದ ಸಾಮಾನುಗಳನೆಲ್ಲ ತಂದಿದ್ದರು. ಜೀಜಾಯಿ ಬೇಗನೆ ತಯಾರಿ ಮಾಡುತ್ತಿದ್ದರು. ತುಕರಾಮರು ನದಿಗೆ ಹೋಗಿ ಸ್ನಾನ ಮಾಡಿ ಬಂದರು. ಅಷ್ಟರಲ್ಲೆ ಬ್ರಹ್ಮಣರು ಮನೆಗೆ ಬಂದರು. ತುಕರಾಮರು ಅವರಿಗೆ ಹಣ್ಣು ಮತ್ತು ಹಾಲನ್ನು ಕೊಟ್ಟು ಸ್ವೀಕರಿಸಲು ಪ್ರಾರ್ಥಿಸಿದರು. ಅದಾದಮೇಲೆ ತುಕರಾಮರು ಬ್ರಾಹ್ಮಣರಿಗೆ ದಕ್ಷಿಣೆ ನೀಡಿ ನಮಸ್ಕರಿಸಿದರು. ಶ್ರಾಧ್ಧವನ್ನು ಮುಗಿಸಿ ಬ್ರಾಹ್ಮಣರು ತುಕರಾಮರಿಗೆ ಅಶೀರ್ವದಿಸಿ ಹೋದರು. ಇದರ ನಂತರ ಎಲ್ಲರೂ ಭೋಜನ ಮಾಡಿದರು. ತುಕರಾಮರು ಪತ್ನಿಗೆ ಊಟ ಮಾಡಲು ಹೇಳಿ ತಾವು ದೇವಸ್ಥಾನಕ್ಕೆ ಹೋಗಿ ಬಂದಮೇಲೆ ವಿಶ್ರಾಂತಿ ತೆಗೆದುಕೊಳ್ಳುವೆನೆಂದರು.

ಜೀಜಾಯಿ ಶಾಂತಿಯಿಂದ ಭೋಜನ ಮಾಡಿದಳು. ತುಕರಾಮರು ದಣಿವಿನಿಂದ ಮನೆಗೆ ಬರುತ್ತಿದ್ದನ್ನು ಕಂಡು ಅವಳು ಆಶ್ಚರ್ಯಳಾದಳು. ಈಗಲೇ ತುಕರಾಮರು ಮನೆಗೆ ಬಂದು ಬ್ರಾಹ್ಮಣರಿಗೆ ಫಲ ಮತ್ತು ದಕ್ಷಿಣೆ ನೀಡಿ, ಎಲ್ಲಾ ಕೆಲಸ ಮುಗಿಸಿದ್ದನ್ನು ಸ್ವಥಃ ನಾನೆ ನೋಡಿದ್ದೇನೆ ಆದರೆ ಈಗ ಬೇರೆಯೆ ಕಾಣುತ್ತಿದೆ ಎಂದು ವಿಚಾರ ಮಾಡಿದಳು. ತಕ್ಷಣವೆ ಅವಳು ದೇವಸ್ಥಾನಕ್ಕೆ ಹೋಗಿ ನೋಡಿದಳು, ಅಲ್ಲಿ ಯಾರೂ ಇರಲಿಲ್ಲ. ಮನೆಗೆ ಬಂದು ಎಲ್ಲ ವಿಷಯವನ್ನು ತುಕಾರಾಮರಿಗೆ ಹೇಳಿದಳು. ಆಗ ತುಕಾರಾಮರು ಒಂದು ಕ್ಷಣ ಕಣ್ಣು ಮುಚ್ಚಿ ಪಾಂಡುರಂಗನಿಗೆ ಪ್ರಾರ್ಥನೆ ಮಾಡಿದಾಗ ಅವರಿಗೆ ನಡದದ್ದೆಲ್ಲವೂ ತಿಳಿಯಿತು. ಆಗ ಅವರು ಅಳಲಾರಂಭಿಸಿದರು ಮತ್ತು ಉಚ್ಛಸ್ವರದಲ್ಲಿ ಆನಂದದಿಂದ "ಜೀಜಾ ನೀನು ನಿಜವಾಗಿಯು ದೇವತೆ, ಇವತ್ತು ಪಂಡರಿರಾಯನು ನನ್ನ ರೂಪದಲ್ಲಿ ಬಂದು ನೀನು ಹೇಳಿದ ಸಾಮಾನು ತಂದು ಶ್ರಾಧ್ಧವನ್ನು ಉತ್ತಮ ರೀತಿಯಲ್ಲಿ ಪೂರ್ಣ ಮಾಡಿದನು. ನಾವು ಧನ್ಯರಾದೆವು" ಎಂದರು. ನಾನು ಸಾಮಾನು ತರಲು ಹೊರಟಾಗ ಮಾರ್ಗದಲ್ಲಿ ಒಬ್ಬ ರೈತನು ನನಗೆ ಕೆಲಸ ಕೊಟ್ಟನು. ಆ ಕೆಲಸ ಮಾಡುತ್ತ ನಾನು ಮನೆಯ ಕೆಲಸ ಮರೆತುಬಿಟ್ಟೆನು. ಆದರೆ ಭಗವಂತನು ಇವತ್ತು ನನ್ನ ಕಾಳಜಿವಹಿಸಿದನು.

ನಾಮಸ್ಮರಣೆಯ ಮಹಿಮೆ ನೋಡಿದಿರಲ್ಲಾ! ಸ್ವಥಃ ಪಾಂಡುರಂಗನೆ ಅವರ ರೂಪ ಧಾರಣ ಮಾಡಿ ಅವಶ್ಯವಿರುವ ಸಾಮನು ತಂದು ಎಲ್ಲ ವಿಧಿಯನ್ನು ಪೂರ್ಣ ಮಾಡಿದನು. ಅವನು ತನ್ನ ಭಕ್ತನ ಕಾಳಜಿ ವಹಿಸಿದನು.

ಕೃಪೆ: ಆಧ್ಯಾತ್ಮಿಕ ಕಥೆಗಳು
ಸಂಗ್ರಹ: ವೀರೇಶ್ ಅರಸೀಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097