ದಿನಕ್ಕೊಂದು ಕಥೆ 1129
*🌻ದಿನಕ್ಕೊಂದು ಕಥೆ🌻* *ಮಗನನ್ನು ಜ್ಞಾನ ಶಿಲ್ಪಿಯಾಗಿ ಕಡೆದ ತಂದೆ* ಆ ಊರಿನ ಒಬ್ಬ ಶಿಲ್ಪಿ ಸುಂದರವಾದ ಮೂರ್ತಿಗಳನ್ನು ಕೆತ್ತನೆ ಮಾಡುತ್ತಿದ್ದ ಇದರಿಂದ ಅವನಿಗೆ ಒಳ್ಳೆಯ ಆದಾಯ ಇತ್ತು. ಶಿಲ್ಪಿಗೆ ವಿವಾಹವಾಗಿ ಒಂದು ಗಂಡು ಮಗು ಜನಿಸಿತು. ಮಗುವಾಗಿದ್ದಾಗಲೇ ತಂದೆ ಕಲ್ಲು ಕಡೆಯುವುದನ್ನು ಆಸಕ್ತಿಯಿಂದ ನೋಡುತ್ತಿತ್ತು. ಪುಟ್ಟ ಬಾಲಕನಾದಾಗಲೇ ಉಳಿ ಹಿಡಿದು ಕಲ್ಲು ಕೆತ್ತುವುದನ್ನು ಕಲಿತು, ಸ್ವಲ್ಪ ದೊಡ್ಡವನಾದಂತೆ, ಸುಂದರವಾದ ಮೂರ್ತಿಗಳನ್ನು ತಯಾರಿಸುತ್ತಿದ್ದ. ಮಗನ ಕೆತ್ತನೆ ಕಂಡು ತಂದೆಗೆ ಬಹಳ ಖುಷಿಯಾಯಿತು. ಹಾಗಂತ ಮಗನನ್ನು ಹೊಗಳದೆ, ಮಗನ ಕೆತ್ತನೆಯಲ್ಲಿ ಸಣ್ಣ ದೋಷಗಳನ್ನು ತೋರಿಸಿ, ಮಗು ನಿನ್ನ ಕೆತ್ತನೆ ಚೆನ್ನಾಗಿದೆ ಮುಂದಿನ ಸಾರಿ ಸಣ್ಣಪುಟ್ಟ ತಪ್ಪುಗಳು ಆಗದಂತೆ ಗಮನ ಕೊಡು ಎನ್ನುತ್ತಿದ್ದನು. ಮಗ ತಂದೆಗೆ ಎದುರಾಡದೆ ತಂದೆ ಹೇಳಿದ ಪ್ರತಿ ಮಾತನ್ನು ಗಮನದಲ್ಲಿಟ್ಟು ತಿದ್ದಿಕೊಂಡು ಇನ್ನೂ ಚೆನ್ನಾಗಿ ಶಿಲೆಗಳನ್ನು ಕಡೆಯುತ್ತಿದ್ದ. ಮಗನ ಈ ಶ್ರದ್ದೆ- ಶ್ರಮದಿಂದಾಗಿ, ತಂದೆ ಕೆತ್ತುವ ಶಿಲೆಗಳಿಗಿಂತ ಮಗ ಕಡೆಯುವ ಶಿಲೆಗಳಿಗೆ ಹೆಚ್ಚಿನ ಬೆಲೆ- ಬೇಡಿಕೆ ಬಂದಿತು. ಮಗನ ಶಿಲೆಗಳಿಗೆ ಹೆಚ್ಚಿನ ಹಣ ಮತ್ತು ಬೇಡಿಕೆ ಬಂದಂತೆ, ತಂದೆ ಕಡೆದ ಶಿಲೆಗಳಿಗೆ ಹಳೆ ಬೆಲೆ ಇದ್ದರೂ, ಬೇಡಿಕೆ ಕಮ್ಮಿಯಾ ಯಿತು. ಆದರೂ ತಂದೆ ಮಗನು ಕಡೆದ ಶಿಲೆಗಳನ್ನು ನೋಡಿ ಮತ್ತಷ್ಟು ಚೆನ್ನಾಗಿ ಮಾಡಬೇಕು ಈ ದೋಷ ಇದ...
Comments
Post a Comment