ದಿನಕ್ಕೊಂದು ಕಥೆ 1118
*🌻ದಿನಕ್ಕೊಂದು ಕಥೆ🌻* ಒಂದು ಹಳ್ಳಿಯಲ್ಲಿ ಒಬ್ಬ ಪ್ರಖ್ಯಾತ ವಿದ್ವಾಂಸನಿದ್ದ. ಅವನು ಒಳ್ಳೆ ವಾಗ್ಮಿಯಾಗಿದ್ದು,ಅವನ ಪ್ರವಚನ ಕೇಳಲು ಸಾವಿರಾರು ಜನ ಕದಲದೆ ಕೂತು ಕೇಳುತ್ತಿದ್ದರು. ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಅವರ ಖ್ಯಾತಿ ಹರಡಿತ್ತು. ಒಮ್ಮೆ ಅವರು ಪ್ರವಚನಕ್ಕಾಗಿ ಪಕ್ಕದೂರಿಗೆ ಹೋಗಬೇಕಿತ್ತು. ಆ ಊರಿಗೆ ಹೋಗುವ ಬಸ್ಸು ಹತ್ತಿ ಟಿಕೆಟ್ ತೆಗೆದುಕೊಂಡರು. ಗಡಿಬಿಡಿಯಲ್ಲಿ ಬಸ್ ಕಂಡಕ್ಟರ್ ಚಿಲ್ಲರೆ ವಾಪಾಸ್ ಕೊಡುವಾಗ 10 ರೂಪಾಯಿ ಹೆಚ್ಚು ಕೊಟ್ಟುಬಿಟ್ಟ. ಅದನ್ನು ಗಮನಿಸಿದ ಆ ವಿದ್ವಾಂಸ ಅದನ್ನು ಹಿಂದಿರುಗಿಸಲು ಯೋಚಿಸಿದರು. ಆದರೆ ಬಸ್ಸು ತುಂಬಾ ಜನರಿಂದ ತುಂಬಿತ್ತು. ಇಳಿಯುವಾಗ ಕೊಟ್ಟರಾಯಿತು ಎಂದುಕೊಂಡು ಕುಳಿತರು. ಸ್ವಲ್ಪ ಸಮಯದ ನಂತರ ಅವನ ಮನಸ್ಸು ಬದಲಾಯಿತು.,, --ಆ ಕಂಡಕ್ಟರ್ ಕೂಡ ಎಷ್ಟೋ ಜನರ ಬಳಿ ಸರಿಯಾದ ಚಿಲ್ಲರೆ ಕೊಡದೆ ತಾನೇ ಹೊಡೆದಿರ ಬಹುದಲ್ಲಾ!!. ಈ ಬಸ್ಸು ಕೂಡ ಒಂದು ಕಂಪನಿಯದೇ! ಎಷ್ಟು ಜನರು ಈ ಕಂಪನಿಗೆ ಮೋಸ ಮಾಡಿ ದುಡ್ಡು ತಿನ್ನುವುದಿಲ್ಲ!? ನನ್ನ ಹತ್ತು ರೂಪಾಯಿಯಿಂದ ಆಗುವ ನಷ್ಟವೇನು? ಈ ಹತ್ತು ರೂಪಾಯಿಗಳನ್ನು ಯಾವುದಾದರೂ ದೈವಿಕ ಕಾರ್ಯಕ್ಕೆ ಬಳಸಿದರಾಯಿತು...' ಹೀಗೆ ಯೋಚಿಸಿ ಸುಮ್ಮನೆ ಕುಳಿತನು. ಅಷ್ಟರಲ್ಲಿ ಊರು ಬಂತು.... ಬಸ್ಸು ನಿಂತಿತು. ಬಸ್ಸಿನಿಂದ ಕೆಳಗಿಳಿಯುವಾಗ ಬಸ್ ಕಂಡಕ್ಟರ್ ಹತ್ತಿರ ಬರುತ್ತಿದ್ದಂತೆ ಅನೈಚ್ಛಿಕವಾಗಿ ಆ ಕಂಡಕ್ಟರ್ಗೆ --ನೀವು ಚಿಲ್ಲರೆ ವಾಪಸ್ ಕೊಡುವಾಗ ಹತ್ತು ರೂಪ