ದಿನಕ್ಕೊಂದು ಕಥೆ 1118

*🌻ದಿನಕ್ಕೊಂದು ಕಥೆ🌻*

ಒಂದು ಹಳ್ಳಿಯಲ್ಲಿ ಒಬ್ಬ  ಪ್ರಖ್ಯಾತ ವಿದ್ವಾಂಸನಿದ್ದ.
ಅವನು ಒಳ್ಳೆ ವಾಗ್ಮಿಯಾಗಿದ್ದು,ಅವನ ಪ್ರವಚನ ಕೇಳಲು ಸಾವಿರಾರು ಜನ ಕದಲದೆ
ಕೂತು ಕೇಳುತ್ತಿದ್ದರು.
ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ಅವರ ಖ್ಯಾತಿ ಹರಡಿತ್ತು.
ಒಮ್ಮೆ ಅವರು ಪ್ರವಚನಕ್ಕಾಗಿ ಪಕ್ಕದೂರಿಗೆ ಹೋಗಬೇಕಿತ್ತು.
ಆ ಊರಿಗೆ ಹೋಗುವ ಬಸ್ಸು ಹತ್ತಿ ಟಿಕೆಟ್ ತೆಗೆದುಕೊಂಡರು.
ಗಡಿಬಿಡಿಯಲ್ಲಿ  ಬಸ್ ಕಂಡಕ್ಟರ್ ಚಿಲ್ಲರೆ ವಾಪಾಸ್ ಕೊಡುವಾಗ 10 ರೂಪಾಯಿ ಹೆಚ್ಚು ಕೊಟ್ಟುಬಿಟ್ಟ. ಅದನ್ನು ಗಮನಿಸಿದ  ಆ ವಿದ್ವಾಂಸ ಅದನ್ನು ಹಿಂದಿರುಗಿಸಲು ಯೋಚಿಸಿದರು.
ಆದರೆ ಬಸ್ಸು ತುಂಬಾ ಜನರಿಂದ ತುಂಬಿತ್ತು.
ಇಳಿಯುವಾಗ ಕೊಟ್ಟರಾಯಿತು ಎಂದುಕೊಂಡು  ಕುಳಿತರು. ಸ್ವಲ್ಪ ಸಮಯದ ನಂತರ ಅವನ ಮನಸ್ಸು ಬದಲಾಯಿತು.,,
--ಆ ಕಂಡಕ್ಟರ್ ಕೂಡ ಎಷ್ಟೋ ಜನರ ಬಳಿ ಸರಿಯಾದ ಚಿಲ್ಲರೆ ಕೊಡದೆ ತಾನೇ ಹೊಡೆದಿರ ಬಹುದಲ್ಲಾ!!.
ಈ ಬಸ್ಸು ಕೂಡ ಒಂದು ಕಂಪನಿಯದೇ!  ಎಷ್ಟು ಜನರು  ಈ ಕಂಪನಿಗೆ ಮೋಸ ಮಾಡಿ ದುಡ್ಡು ತಿನ್ನುವುದಿಲ್ಲ!?
ನನ್ನ ಹತ್ತು ರೂಪಾಯಿಯಿಂದ ಆಗುವ ನಷ್ಟವೇನು?
ಈ ಹತ್ತು ರೂಪಾಯಿಗಳನ್ನು ಯಾವುದಾದರೂ ದೈವಿಕ ಕಾರ್ಯಕ್ಕೆ ಬಳಸಿದರಾಯಿತು...'
ಹೀಗೆ ಯೋಚಿಸಿ ಸುಮ್ಮನೆ ಕುಳಿತನು.
ಅಷ್ಟರಲ್ಲಿ ಊರು ಬಂತು.... ಬಸ್ಸು ನಿಂತಿತು.
ಬಸ್ಸಿನಿಂದ ಕೆಳಗಿಳಿಯುವಾಗ ಬಸ್ ಕಂಡಕ್ಟರ್ ಹತ್ತಿರ ಬರುತ್ತಿದ್ದಂತೆ
ಅನೈಚ್ಛಿಕವಾಗಿ ಆ ಕಂಡಕ್ಟರ್ಗೆ --ನೀವು ಚಿಲ್ಲರೆ ವಾಪಸ್ ಕೊಡುವಾಗ ಹತ್ತು ರೂಪಾಯಿ  ಹೆಚ್ಚು ಕೊಟ್ಟಿದ್ದೀರಿ ಎಂದು ಆ ಹತ್ತು ರೂಪಾಯಿಯನ್ನು ವಾಪಸ್ ಕೊಟ್ಟರು.

ಅದಕ್ಕೆ ಕಂಡಕ್ಟರ್, "ಸಾರ್! ನಾನು ನಿಮ್ಮ ಪ್ರವಚನಗಳನ್ನು ಅನೇಕ ದಿನಗಳಿಂದ ಬಹಳ ಗಮನವಿಟ್ಟು ಕೇಳುತ್ತಿದ್ದೆ.,, ನೀವು ಭೋಧಿಸುವಂತೆ
ಪಾಲಿಸುವಿರಾ ಅಥವಾ  ಇಲ್ಲವಾ? ಎಂದು ನಾನು ಸಣ್ಣ ಪರೀಕ್ಷೆ ಮಾಡಿದೆ, ”ಎಂದು ಹೇಳಿದನು .

ಆ ವಿದ್ವಾಂಸ ಸಣ್ಣಗೆ ಬೆವರುತ್ತಾ ಬಸ್ಸಿನಿಂದ ಇಳಿದರು.
ಬರೀ ಹತ್ತು ರೂಪಾಯಿಯ  ಆಸೆಯಲ್ಲಿ ನಾನು ನನ್ನ ಮೌಲ್ಯಗಳಿಗೆ ತಿಲಾಂಜಲಿ ಬಿಡುತ್ತಿದ್ದೆನಲ್ಲಾ... ಎಂತಹ ಅಚಾತುರ್ಯವಾಗಿ ಬಿಡುತ್ತಿತ್ತಲ್ಲ,,
ನನ್ನ ಅದೃಷ್ಟ ಚೆನ್ನಾಗಿದೆ,,,
ನನ್ನ ಆತ್ಮಸಾಕ್ಷಿಯು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡು
ನನ್ನ ಮೌಲ್ಯಗಳನ್ನು ಉಳಿಸಿಕೊಂಡು ಕಾಪಾಡಿಕೊಂಡoತಾಯಿತು ಎಂದುಕೊಂಡನು.
 
ಜೀವಿತಾವಧಿಯಲ್ಲಿ ಸಂಪಾದಿಸಿ ಕಾಪಾಡಿಕೊಂಡ ಒಳ್ಳೆಯತನ 
ಸರ್ವನಾಶವಾಗಲು
ಒಂದು ಕ್ಷಣ ಸಾಕಲ್ಲವೇ??
ಯೋಚಿಸಿ,,,,,,

ಲೇಖಕರು:ಸಂPಗೆ ವಾಸು.
ಸಂಗ್ರಹ:ವೀರೇಶ್ ಅರಸೀಕೆರೆ.
**********************************
*ಕಂಡಕ್ಟರ್ ಕವಿತೆಗಳು*
ಕವಿ: ಸದಾಶಿವ ಸೊರಟೂರ್ 

    ಉರಿದ
ಐದು ರೂಪಾಯಿ ಕಡ್ಲೆಕಾಯಿ ಹಿಂದೆ
ಸುಟ್ಟುಕೊಂಡ ಕೈಗಳಿರಬಹುದು
ಎಷ್ಟೊಂದು ಹಸಿದ ಹೊಟ್ಟೆಗಳಿರಬಹುದು
ಕೊಳ್ಳಿ ಸರ್.. 

ಕಡ್ಲೆಕಾಯಿ ಕೊಳ್ಳಲು ಯೋಚಿಸುತ್ತಿದ್ದ 
ನನ್ನ ಕಡೆ ನೋಡಿ ಕಂಡಕ್ಟರ್ ಹೇಳಿದ

ಬಸ್ಸಲ್ಲಿ ಕಡ್ಲೆಕಾಯಿ ತಿನ್ನೋದು ನಿಷೇಧಿಸಿಲ್ಲ ಸರ್
ಆದರೆ ಸಿಪ್ಪೆ ಮಾತ್ರೆ ಆಚೆ ಹಾಕಿ
ಎಂದು ನಗುತ್ತಾ ಕಡ್ಲೆಕಾಯಿ ಮಾರುವವ ಬಸ್ಸು
ಇಳಿಯುವವರೆಗೂ ವಿಷಲ್ ಹಿಡಿದು ಕಾಯುತ್ತಾ 
ನಿಂತ.. 

***

ನಿಮ್ಮಪ್ಪ ಎಷ್ಟು ಒಳ್ಳೆಯವರು
ಅವ್ರ ಹೊಟ್ಟೆಯಲಿ‌ ಹುಟ್ಟಿ ನಿನ್ಯಾಕೊ ಹೀಗೆ..

ಮುಂದಿನ ಸೀಟಲ್ಲಿ ಯಾರೊ ಪೋನಿನಲ್ಲಿ
ಬೈಯೊದನ್ನ ಕೇಳಿಸಿಕೊಂಡ ಕಂಡಕ್ಟರ್

ಬ್ಲಡ್ ಲ್ಲಿ ಬರೋದು ಬಿಪಿ, ಶುಗರ್ ಸರ್
ಒಳ್ಳೆತನಲ್ಲ ಅಲ್ಲ..
ಎನ್ನುತ್ತಾ ಬಾಗಿಲಾಕಿಕೊಂಡು
ವಿಷಲ್ ಊದಿದ.. 

-ಸದಾ..

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097