ದಿನಕ್ಕೊಂದು ಕಥೆ 1123
*🌻ದಿನಕ್ಕೊಂದು ಕಥೆ🌻*
*ನಮ್ಮದೇನಿದೆ*?
ಒಬ್ಬ *ವ್ಯಕ್ತಿ* ಸಾಯುತ್ತಾನೆ ದೇಹದಿಂದ *ಆತ್ಮ* ಹೊರಬರುತ್ತದೆ ಸುತ್ತಲೂ ನೋಡಿದರೆ *ದೇವರು* ತನ್ನ ಕೈಯಲ್ಲಿ ಒಂದು ಪೆಟ್ಟಿಗೆಯೊಡನೆ ಬಂದು ನಿಂತಿರುತ್ತಾನೆ. ಸತ್ತಿರುವ *ವ್ಯಕ್ತಿ* ಮತ್ತು *ದೇವರ* ನಡುವೆ ಸಂಭಾಷಣೆ ಹೀಗೆ ಸಾಗುತ್ತದೆ.
*ದೇವರು*- ಮಾನವ,ಇನ್ನು ಈ ಜನ್ಮ ಮುಗಿಯಿತು ನಡೆ ಹೋಗೋಣ
*ಮಾನವ*- ಅಯ್ಯೋ ಇಷ್ಟು ಬೇಗನೇ,, ನಾನು ಭವಿಷ್ಯದ ಬಗೆಗೆ ಎಷ್ಟೊ ಕನಸನ್ನು ಕಂಡಿದ್ದೆ.
*ದೇವರು*- ತಪ್ಪದು, ನೀನು ನನ್ನೊಡನೆ ಬರಲೇಬೇಕು ನಿನ್ನ ಸಮಯ ಮುಗಿದಿದೆ.
*ಮಾನವ*- ಸರಿ ಆ ಪೆಟ್ಟಿಗೆ ಕೊಡಿ ಏನು ತಂದಿರುವೆ ನೋಡುವೆ.
*ದೇವರು*- ಅದರಲ್ಲಿ ನಿನಗೆ ಸಂಬಂದಿಸಿದ ವಸ್ತುಗಳೇ ಇರುವುದು.
*ಮಾನವ*- ನನ್ನವಾ, ಅಂದರೆ ನನ್ನ *ಬಟ್ಟೆಗಳು, ದುಡ್ಡು ಕಾಸು, ಆಸ್ತಿ, ಭೂಮಿ ಪತ್ರಗಳು.*
*ದೇವರು*- ಅವು ಯಾವಾಗಲೂ ನಿನ್ನವಲ್ಲ ಅವೆಲ್ಲ *ಭೂಮಿ* ಯವೇ ಅಲ್ಲಿಯೇ ಇರುತ್ತವೆ.
*ಮಾನವ*- ನನ್ನ ಜ್ಞಾಪಕಗಳಾ?
*ದೇವರು*- ಅಲ್ಲ ಜ್ಞಾಪಕಗಳು ಕಾಲಕ್ಕೆ ಸಂಬಂಧಿಸಿದುವು *ಕಾಲಗರ್ಭದಲ್ಲೇ* ಸೇರಿ ಹೋಗುತ್ತವೆ.
*ಮಾನವ* - ನನ್ನ ಸ್ನೇಹಿತರಾ?
*ದೇವರು*- ಅವರು ನಿನ್ನ ಜೊತೆ ಕೇವಲ ಸ್ವಲ್ಪ ದೂರ ಬರುವ *ಪ್ರಯಾಣಿಕರಷ್ಟೇ* .
*ಮಾನವ*- ನನ್ನ ಹೆಂಡತಿ ಮಕ್ಕಳಾ?
*ದೇವರು*- ಅವರುಗಳು ನಿನ್ನ ಜೊತೆ ಕಲೆತು *ನಾಟಕದಲ್ಲಿ* ಪಾಲ್ಗೊಂಡ *ಪಾತ್ರಧಾರಿಗಳು* ಮಾತ್ರ.
*ಮಾನವ*- ಹಾಗಾದರೆ ಅದರಲ್ಲಿ ನನ್ನ *ಶರೀರವಿರಬಹುದಲ್ಲವೇ*?
*ದೇವರು*- ತಪ್ಪು ಅದು ಮಣ್ಣಿಗೆ ಸಂಬಂಧ ಪಟ್ಟದ್ದು ಮಣ್ಣಿಗೇ ಹೋಗಿ ಸೇರುತ್ತದೆ.
*ಮಾನವ*- ಹಾಗಾದರೆ ನನ್ನ *ಆತ್ಮವೇ*?
*ದೇವರು*- ಅದು ನಿನ್ನದು ಹೇಗಾಗುತ್ತದೆ ಅದು *ನನ್ನದು*.
ಅಲ್ಲಿಗೆ ಬೇಸತ್ತ ಆ ಮಾನವ ಆ ಪೆಟ್ಟಿಗೆಯನ್ನು ಕೊಡಿರಿ *ದೇವ* ನಾನೇ ನೋಡುತ್ತೇನೆ ಎಂದು ತೆಗೆದುಕೊಂಡು ತೆಗೆದು ನೋಡಲು ಏನಿದೆ ಅಲ್ಲಿ ಏನೂ ಇಲ್ಲ *ಖಾಲಿ* ಪೆಟ್ಟಿಗೆ.
*ಮನುಷ್ಯ* ತನ್ನ ಆಯಸ್ಸು ಮುಗಿದ ಮೇಲೆ ತನ್ನೊಂದಿಗೆ ತೆಗೆದುಕೊಂಡು ಹೋಗುವುದು ಏನೂ ಇಲ್ಲ ಎಂದು ತಿಳಿಸುವುದಕ್ಕೇ *ದೇವರು* ಈ ಖಾಲಿಪೆಟ್ಟಿಗೆಯನ್ನು ತಂದಿರುವನೆಂದು ಅರ್ಥವಾಯಿತು. ಬದುಕಿದ್ದಷ್ಟು ಕಾಲ *ನಾನು, ನನ್ನವರು, ನನ್ನದು*, *ಎಲ್ಲವೂ ನನಗೆ* ಎನ್ನುವ ಆಸೆಯಲ್ಲಿ ಭಗವಂತನ ಸ್ಮರಣೆಯನ್ನೇ ಮರೆತೆನು ಎಂಬ ಅಂಶ ಅರಿವಾಗಿ ದುಃಖಿತಾಗುತ್ತಾನೆ.
*ಮಾನವ*- ಕಡೆಯ ಬಾರಿ ಕೇಳುತ್ತಿದ್ದೇನೆ *ದೇವರೇ* ನನ್ನದು ಎನ್ನುವುದು ಏನಾದರೂ ಇದೆಯಾ? ಯಾವುದಾದರೂ ಇದೆಯಾ?
*ದೇವರು*- ಖಂಡಿತ ಇದೆ, ನೀನು ಜೀವಿಸಿದ ಪ್ರತಿಕ್ಷಣವೂ ನಿನ್ನದೇ, ಆ ಅವಧಿಯಲ್ಲಿ ನೀನು ಗಳಿಸಿದ *ಒಳ್ಳೆಯದು ಕೆಟ್ಟದ್ದು* ಎಲ್ಲದವರ ಫಲ ನಿನಗೇ ಸಲ್ಲುವುದು
ಅದಕ್ಕೇ ಪ್ರತಿಕ್ಷಣ *ಒಳ್ಳೆಯದನ್ನು ಮಾಡು, ಒಳ್ಳೆಯದನ್ನೇ ಯೋಚಿಸು, ಒಳ್ಳೆಯದನ್ನೇ ಚಿಂತಿಸು.*
ಕೃಪೆ: ವಾಟ್ಸ್ ಆ್ಯಪ್ ಗ್ರೂಪ್
ಸಂಗ್ರಹ: ವೀರೇಶ್ ಅರಸೀಕೆರೆ.
Comments
Post a Comment