ದಿನಕ್ಕೊಂದು ಕಥೆ 1125
*🌻ದಿನಕ್ಕೊಂದು ಕಥೆ🌻* *ಮಕ್ಕಳ ಮೇಲಿನ ವ್ಯಾಮೋಹ* *ಪತಿಯ ಜೊತೆ 46 ವರ್ಷದ ಸುಧೀರ್ಘ ದಾಂಪತ್ಯದಲ್ಲಿ, ಪತಿಯನ್ನು ಪ್ರೀತಿಸುತ್ತಿದ್ದರು, ಗೌರವಿಸುತಿದ್ದರು ಜೊತೆಗೆ 72 ವರ್ಷದ ಶಾರದಮ್ಮ ಕೆಲವು ವಿಷಯಗಳ ಬಗ್ಗೆ ರಾಜಿ ಮಾಡಿಕೊಳ್ಳದೆ ಗಲಾಟೆ ಕೂಡಾ ಮಾಡುತಿದ್ದರು.* *ಒಬ್ಬ ಮಗ ಒಬ್ಬ ಮಗಳು ಇಬ್ಬರೂ ಓದಿ ಲಂಡನ್ ಅಲ್ಲಿ ಸೆಟಲ್ ಆಗಿದ್ದರು. ಮಕ್ಕಳಿಗೆ ಎಷ್ಟೇ ಆಚಾರ ವಿಚಾರ ಕಲಿಸಿದರೂ ಅವರ ವಿದ್ಯೆಗನುಗುಣವಾದ ಕೆಲಸ ಹುಡುಕುತ್ತಾ ದೇಶ ಬಿಡುವುದು ಅನಿವಾರ್ಯವಾಗಿತ್ತು. ಮೊದ ಮೊದಲು ಮಕ್ಕಳು ಲಂಡನ್ ಅಲ್ಲಿರುವುದು ಪ್ರತಿಷ್ಠೆಯ ವಿಷಯವಾದರೆ ಇಗೀಗ ಎಲ್ಲೋ ಎಡವಿದ್ದೇವೆ ಎನ್ನುವ ಅರಿವಾಗುತ್ತಿತ್ತು ವೃದ್ಧ ದಂಪತಿಗಳಿಗೆ . ಮೊನ್ನೆ ಆಸ್ತಿಯ ವಿಷಯಕ್ಕೆ ಮನೆಯಲ್ಲಿ ದೊಡ್ಡ ಗಲಾಟೆಯೇ ಆಗಿತ್ತು. ಮಕ್ಕಳಿಬ್ಬರೂ 6 ಕೋಟಿಯ ಆಸ್ತಿ 2 ಪಾಲು ಮಾಡಿ ಇಬ್ಬರಿಗೆ ಕೊಡಿ, ಅಮ್ಮ ಮಗಳ ಮನೆಯಲ್ಲಿ ಅಪ್ಪ ಮಗನ ಮನೆಯಲ್ಲಿ ಹಾಯಾಗಿ ಇರಬಹುದು ಎಂದಾಗ 80 ವರ್ಷದ ಅಪ್ಪ ಮರು ಮಾತಾಡದೆ ಒಪ್ಪಿಕೊಂಡು ಬಿಟ್ಟರು. ಆದರೆ ಶಾರದಮ್ಮ ಒಪ್ಪಿರಲಿಲ್ಲ. ಆಸ್ತಿ 4 ಪಾಲು ಮಾಡಿ ಇಬ್ಬರೂ ಮಕ್ಕಳಿಗೆ ಒಂದೊಂದು ನಮ್ಮಿಬ್ಬರಿಗೆ ಒಂದೊಂದು ಇರಲಿ. ನಮ್ಮಿಬ್ಬರ ಕಾಲದ ಮೇಲೆ ಮಗ ಮಗಳಿಗೆ ವಿಲ್ ಬರೆದಿಡುವ ಎನ್ನುವುದು ಆಕೆಯ ವಾದವಾಗಿತ್ತು.* *ಇದಕ್ಕೆ ಗಂಡ ಒಪ್ಪಿರಲಿಲ್ಲ ನನಗೆ ನನ್ನ ಮಕ್ಕಳ ಮೇಲೆ ನಂಬಿಕೆ ಇದೇ ಹಾಗೇ ಹೀಗೇ ಎಂದು ಗಲಾಟೆ ಮಾಡಿದ್ದರು. ಮಕ್ಕಳೂ ವಿರೋಧ ವ್ಯಕ್ತ ಪಡಿಸಿದ್ದರು.