ದಿನಕ್ಕೊಂದು ಕಥೆ 867
*🌻ದಿನಕ್ಕೊಂದು ಕಥೆ🌻 ಪ್ರಧಾನಿಯ ಪದವಿ ಪರಮಾತ್ಮನೇ ಕೊಟ್ಟದ್ದು!* ಮೇಲಿನ ಮಾತುಗಳು ಆಶ್ಚರ್ಯ ಹುಟ್ಟಿಸುತ್ತವಲ್ಲವೇ? ಹೌದು, ಈ ಮಾತುಗಳನ್ನು ಹೇಳಿದವರು ಪುರಾತನ ಜರ್ಮನಿ ದೇಶದಲ್ಲಿನ ಪ್ರಷ್ಯಾ ರಾಜ್ಯದ ಪ್ರಧಾನಿಯೇ ! ಬಹಳ ಹಿಂದೆ ಪ್ರಷ್ಯಾದ ರಾಜಧಾನಿಯಲ್ಲಿ ಬಹುತೇಕ ಬಡವರ ಮಕ್ಕಳೇ ಮಾಡುತ್ತಿದ್ದ ಶಾಲೆಯೊಂದಿತ್ತು. ಒಮ್ಮೆ ಮಹಾರಾಜರು ನಗರ ಸಂಚಾರ ಶಾಲೆಯೊಳಕ್ಕೆ ಬಂದರಂತೆ. ಮಹಾರಾಜರನ್ನು ನೋಡಿ ಉಪಾಧ್ಯಾಯರು, ಮಕ್ಕಳು ಎದ್ದು ನಿಂತು ಗೌರವ ಸಲ್ಲಿಸಿದರು. ಕುಶಲೋಪರಿಯ ಮಾತನ್ನಾಡುತ್ತಾ ಮಹಾರಾಜರು ಉಪಾಧ್ಯಾಯರನ್ನು ಇಂದು ಯಾವ ಪಾಠ ಮಾಡುತ್ತಿದ್ದೀರಿ? ಎಂದು ಕೇಳಿದರು. ಉಪಾಧ್ಯಾಯರು ವಿನಯಪೂರ್ವಕವಾಗಿ ಮಹಾಸ್ವಾಮಿ! ಭೂಗೋಳದ ಪಾಠ ಮಾಡುತ್ತಿದ್ದೇನೆ ಎನ್ನುತ್ತಾ ಮೇಜಿನಮೇಲಿದ್ದ ಭೂಗೋಳವನ್ನು ತೋರಿಸಿದರು. ಮಹಾರಾಜರು ಭೂಗೋಳದ ಬಗ್ಗೆ ಮಕ್ಕಳಿಗೆ ನಾನೇನಾದರೂ ಪ್ರಶ್ನೆ ಕೇಳಲೇ? ಎಂದರು. ಉಪಾಧ್ಯಾಯರಿಗೆ ಒಳಗೊಳಗೇ ಹೆದರಿಕೆಯಿದ್ದರೂ, ಆಗಬಹುದೆಂದರು. ಮಹಾರಾಜರು ಬಾಲಕನೊಬ್ಬನನ್ನು ಮುಂದಕ್ಕೆ ಕರೆದರು. ಅಷ್ಟೇನೂ ಒಳ್ಳೆಯ ಧರಿಸಿರದ ಆ ಬಾಲಕ ಧೈರ್ಯವಾಗಿ ಮುಂದೆ ಬಂದ. ಮುಗುಳ್ನಗುತ್ತಾ ಮಹಾರಾಜರನ್ನು ದಿಟ್ಟಿಸಿ ನೋಡಿದ. ಮಹಾರಾಜರು : ನಾನು ಯಾರು ಗೊತ್ತೇನು? ಬಾಲಕ : ತಾವು ಪ್ರಷ್ಯಾ ರಾಜ್ಯದ ಮಹಾರಾಜರು. ಮ : ಪ್ರಷ್ಯಾ ರಾಜ್ಯವೆಲ್ಲಿದೆ? ಬಾ: ಪ್ರಷ್ಯಾ ರಾಜ್ಯ ಜರ್ಮನಿ ದೇಶದಲ್ಲಿದೆ! ಮ :