ದಿನಕ್ಕೊಂದು ಕಥೆ 918
*🌻ದಿನಕ್ಕೊಂದು ಕಥೆ🌻* *ಕ್ರಾಂತಿಕಾರಿ ರಾಸ್ ಬಿಹಾರಿ ಬೋಸ್* ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು ರಾಸ್ ಬಿಹಾರಿ ಬೋಸ್ . ಎಲ್ಲರೂ ಅವರನ್ನು ಪ್ರೀತಿಯಿಂದ ರಾಸುದಾ ಎಂದೇ ಕರೆಯುತ್ತಿದ್ದರು . ರಾಸುದಾ ಅವರ ತಂದೆ ವಿನೋದ ಬಿಹಾರಿ ಬೋಸ್ . ತಾಯಿ ಬಂಗಾಳಿ ಕುಲೀನ ಮನೆತನದ ಸರಳ ಮಹಿಳೆ. ಹೂಗ್ಲಿ ಜಿಲ್ಲೆಯ ಭದ್ರೇಶ್ವರದ ಪರಲವಿಘಟಿ ಎಂಬ ಹಳ್ಳಿಯಲ್ಲಿ ಜನನ ( 25 ಮೇ 1886 ) . ಮೂರು ವರ್ಷಗಳಾದಾಗ ತಾಯಿ ಸ್ವರ್ಗವಾಸಿಯಾದರು. ರಾಮಕೃಷ್ಣ ಪರಮಹಂಸರ ಪರಮ ಭಕ್ತರಾದ ತಾತ ಕಾಳಿಚರಣ ಬೋಸ್ರಿಂದ ಭರತಖಂಡದ ಧಾರ್ವಿುಕ , ಐತಿಹಾಸಿಕ , ಸಾಂಸ್ಕೃತಿಕ , ರಾಜಕೀಯ ವಿಚಾರಗಳ ಅರಿವು ರಾಸುದಾಗಾಯಿತು . ಚಿಕ್ಕಂದಿನಲ್ಲಂತೂ ಬಲು ತುಂಟ . ಜಗಳಗಂಟ. ಆದರೆ ಸಾಹಿತ್ಯಪ್ರೇಮಿ . ಒಂದು ದಿನ ಶಾಲೆಯಲ್ಲಿ ಇಂಗ್ಲಿಷರ ವಿರುದ್ಧ ಮಾತಾಡಿದ್ದರಿಂದ ಶಾಲೆಯಿಂದಲೇ ಅರ್ಧಚಂದ್ರ ! ಅಪ್ಪ ಛೀಮಾರಿ ಹಾಕಿ ಕಲ್ಕತ್ತೆಗೆ ಅಟ್ಟಿದರು. ವಿವೇಕಾನಂದರ ಕೃತಿಗಳು , ಜದುನಾಥ ಸರ್ಕಾರರ ಉಪನ್ಯಾಸಗಳು ಪ್ರಭಾವಿಸಿದವು . ಸುಳ್ಳು ಹೇಳಿ ಪೋರ್ಟ್ ವಿಲಿಯಂ ಸೇನಾವಿಭಾಗದಲ್ಲಿ ಗುಮಾಸ್ತನಾದ . ಬಂಗಾಳಿ ಎಂದು ತಿಳಿದೊಡನೆ ಆ ಕೆಲಸಕ್ಕೆ ಸಂಚಕಾರ! ಮಗ ತನ್ನ ಕಣ್ಣೆದುರೇ ಇರಲೆಂದು ತಾನು ಕೆಲಸ ಮಾಡುತ್ತಿದ್ದ ಶಿಮ್ಲಾದ ಸರ್ಕಾರಿ ಪ್ರೆಸ್ನಲ್ಲಿಯೇ ಕೆಲಸ ಕೊಡಿಸಿದರು . ಆದರೆ ಮ್ಯಾನೇಜ್ ವೆುಂಟ್ ಮತ್ತು ಕೆಲಸಗಾರರ ನಡುವೆ ಘರ್ಷಣೆಯಾದಾಗ ರಾಸು ಕೆಲಸಗಾರರ