ದಿನಕ್ಕೊಂದು ಕಥೆ 928
*🌻ದಿನಕ್ಕೊಂದು ಕಥೆ🌻* ಬೆರಗಿನ ಬೆಳಕು ಡಾ.ಗುರುರಾಜ ಕರ್ಜಗಿ ಸಂಗ್ರಹ : ವೀರೇಶ್ ಅರಸಿಕೆರೆ ಹೃದಯಪಾಠವಾಗದ ಬಾಯಿಪಾಠ ಹಿಂದೆ ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜನಾಗಿದ್ದಾಗ ಬೋಧಿಸತ್ವ ಅತ್ಯಂತ ಶ್ರೀಮಂತನಾದ ಬ್ರಾಹ್ಮಣನ ಮನೆಯಲ್ಲಿ ಜನಿಸಿದ್ದ. ದೊಡ್ಡವನಾದ ಮೇಲೆ ತಕ್ಷಶಿಲೆಗೆ ಹೋಗಿ ಎಲ್ಲ ವಿದ್ಯೆಗಳನ್ನು ಸಂಪಾದಿಸಿಕೊಂಡು ಬಂದು ಶ್ರೇಷ್ಠ ಗುರುವಾಗಿ ಐದುನೂರು ಜನ ಶಿಷ್ಯರಿಗೆ ಶಿಕ್ಷಣ ನೀಡುತ್ತಿದ್ದ. ಈ ಐದುನೂರು ಶಿಷ್ಯರಲ್ಲಿ ಒಬ್ಬ ಶತಮೂರ್ಖ ವಿದ್ಯಾರ್ಥಿಯೂ ಇದ್ದ. ಆತ ತುಂಬ ಒಳ್ಳೆಯ ಹುಡುಗ, ಪ್ರಾಮಾಣಿಕ ಮತ್ತು ವಿಧೇಯನಾದವನು. ಗುರುವಿನ ಸೇವೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುವವನು ಆದರೆ ತಲೆಗೆ ವಿದ್ಯೆ ಹತ್ತುತ್ತಿರಲಿಲ್ಲ. ಒಂದು ದಿನ ರಾತ್ರಿ ಬೋಧಿಸತ್ವ ಮಂಚದ ಮೇಲೆ ಮಲಗಿದಾಗ ಈ ಶಿಷ್ಯ ಬಂದು ಗುರುವಿನ ಕೈ-ಕಾಲುಗಳನ್ನು ಹದವಾಗಿ ಒತ್ತಿ ಹೊರಟ. ಆಗ ಬೋಧಿಸತ್ವ, “ಮಗೂ ಮಂಚದ ಎರಡೂ ಕಾಲುಗಳು ಅಲುಗಾಡುತ್ತಿವೆ, ರಾತ್ರಿ ನಿದ್ರೆ ಮಾಡುವುದು ಕಷ್ಟ. ಅವುಗಳಿಗೆ ಯಾವುದಾದರೂ ಆಧಾರವನ್ನು ಕೊಡು”ಎಂದ. ವಿದ್ಯಾರ್ಥಿ ಅಲ್ಲಲ್ಲಿ ಹುಡುಕಾಡಿ ಒಂದು ಕಾಲಿಗೆ ಆಧಾರವನ್ನು ಕೊಟ್ಟ. ಮತ್ತೊಂದು ಕಾಲಿಗೆ ಏನೂ ದೊರೆಯಲಿಲ್ಲ. ಆಗ ಗುರುಗಳಿಗೆ ನಿದ್ರೆ ಹತ್ತುತ್ತಿತ್ತು. ಅವರಿಗೆ ತೊಂದರೆಯಾಗಬಾರದೆಂದು ತಾನೇ ಅಲ್ಲಿ ಕುಳಿತು ಕೈಯಿಂದ ಒತ್ತಿ ಹಿಡಿದ. ಬೆಳಿಗ್ಗೆ ಬೋಧಿಸತ್ವ ಎದ್ದು ನೋಡುತ್ತಾನೆ, ಶಿಷ್ಯ ರಾತ್ರಿಯಿಡೀ ಮಂಚ ಹಿಡಿದೇ ಕುಳಿತಿದ್ದ