ದಿನಕ್ಕೊಂದು ಕಥೆ 932
*🌻ದಿನಕ್ಕೊಂದು ಕಥೆ🌻* ಒಬ್ಬ ಆಭರಣ ವ್ಯಾಪಾರಿಯ ನಿಧನದ ನಂತರ ಅವನ ವಿಧವೆ ಹೆಂಡತಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಳು ಮತ್ತು ಅವಳ ಸಂಸಾರವನ್ನು ನಡೆಸಲು ಹಣದ ಅಗತ್ಯವಿತ್ತು. ಅವಳು ತನ್ನ ಮಗನನ್ನು ಅವಳ ಭಾಮೈದನ ಆಭರಣದ ಅಂಗಡಿಗೆ ಕಳುಹಿಸಿ, ಅವಳ ನೀಲಮಣಿ ಹಾರವನ್ನು ತೆಗೆದುಕೊಂಡು ಹಾರಕ್ಕೆ ಬದಲಾಗಿ ಹಣವನ್ನು ಪಡೆದುಕೊಂಡು ಬರಲು ಕಳುಹಿಸಿದಳು. ಹುಡುಗನ ಚಿಕ್ಕಪ್ಪ ಹಾರವನ್ನು ಎಚ್ಚರಿಕೆಯಿಂದ ಪರೀಕ್ಷಿಸಿ, “ಮಗನೇ, ಈಗ ಮಾರುಕಟ್ಟೆ ಉತ್ತಮವಾಗಿಲ್ಲ. ಈ ಹಾರಕ್ಕೆ ಉತ್ತಮ ಬೆಲೆ ಬಂದಾಗ ಅದನ್ನು ಮಾರಾಟ ಮಾಡಬಹುದು ಎಂದು ನಿನ್ನ ತಾಯಿಗೆ ತಿಳಿಸು ಎಂದು ಹೇಳಿ ಅವನಿಗೆ ಸ್ವಲ್ಪ ಹಣವನ್ನು ಕೊಟ್ಟು ತನ್ನ ಅಂಗಡಿಯಲ್ಲಿ ಕೆಲಸ ಮಾಡಿ ವ್ಯಾಪಾರವನ್ನು ಕಲಿಯುವಂತೆ ಅವನನ್ನು ಒತ್ತಾಯಿಸಿದನು. ಹೀಗಾಗಿ, ಹುಡುಗ ತನ್ನ ಚಿಕ್ಕಪ್ಪನ ಅಂಗಡಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದನು ಮತ್ತು ಆಭರಣಗಳು ಮತ್ತು ಅಮೂಲ್ಯವಾದ ಕಲ್ಲುಗಳನ್ನು ಪರೀಕ್ಷಿಸುವ ಕಲೆಯನ್ನು ಕಲಿತನು. ಒಂದು ವರ್ಷದ ನಂತರ ಅವನು ಆಭರಣಗಳನ್ನು ಪರೀಕ್ಷಿಸುವಲ್ಲಿ ನಿಜವಾಗಿಯೂ ಉತ್ತಮನಾದನು. ಮತ್ತು ಶೀಘ್ರದಲ್ಲೇ ದೂರದ ಸ್ಥಳಗಳ ಜನರು ತಮ್ಮ ಆಭರಣಗಳನ್ನು ಪರಿಶೀಲಿಸಲು ಮತ್ತು ಅವುಗಳ ಮೌಲ್ಯವನ್ನು ತಿಳಿದುಕೊಳ್ಳಲು ಅವನನ್ನು ಸಂಪರ್ಕಿಸಿಸಲು ಪ್ರಾರಂಭಿಸಿದರು. ಒಂದು ದಿನ ಅವನ ಚಿಕ್ಕಪ್ಪ ಅವನಿಗೆ, “ಮಗನೇ, ನಿನ್ನ ತಾಯಿಯ ಬಳಿಗೆ ಹೋಗಿ ಈಗ ಮಾರುಕಟ್ಟೆ ಉತ್ತಮವಾಗಿದೆ ಎಂದು ಹೇಳಿ ಮತ್ತು ಅವಳು