ದಿನಕ್ಕೊಂದು ಕಥೆ 947

*🌻ದಿನಕ್ಕೊಂದು ಕಥೆ🌻*

*ಏಕಾಂಗಿಯಾಗಿ 300 ಚೀನಿ ಸೈನಿಕರನ್ನು ಹೊಡೆದುರುಳಿಸಿದ್ದ ಜಸ್ವಂತ್‍ಸಿಂಗ್ ಯಶೋಗಾತೆಗೆ ಸ್ವತಃ ಚೀನೀಯರೇ ತಲೆಬಾಗಿದ್ದರು! ಈ ಯೋಧನ ಸಾಹಸಕ್ಕೊಂದು ಸೆಲ್ಯೂಟ್…*

ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕತೆಯನ್ನು ಕೇಳುತ್ತಲೇ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತೆ. ನಾವು ಇಲ್ಲಿ ಐಷಾರಾಮಿ ಜೀವನ ನಡೆಸುತ್ತಾ ನಮಗಿಷ್ಟ ಬಂದಂತೆ ಜೀವನ ನಡೆಸುತ್ತಿದ್ದೇವೆ. ಆದರೆ ನಮ್ಮ ದೇಶ ಕಾಯುವ ಯೋಧರು.. ಕುಟುಂಬ, ನಿದ್ದೆ, ಊಟ ಎಲ್ಲವನ್ನೂ ತ್ಯಜಿಸಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಎಷ್ಟೇ ಚಳಿ ಇರಲಿ, ಮಳೆ ಇರಲಿ ದೇಶದ ರಕ್ಷಣೆಯ ವಿಚಾರ ಬಂದಾಗ ಗಡಿ ಬಿಟ್ಟು ಒಂದಿಂಚೂ ಕಾಲು ಹಿಂದೆ ಸರಿಸಲ್ಲ. ದೇಶ ಮೊದಲು ಎಂದು ತನ್ನ ಪ್ರಾಣವನ್ನೂ ಲೆಕ್ಕಿಸದೆ ದೇಶ ಕಾಯುತ್ತಿರುತ್ತಾರೆ. ಇದು ನಮ್ಮ ಯೋಧರ ಕತೆ.. ಅಂತಹ ಪುಣ್ಯದ ಕೆಲಸ ಮಾಡೋಕೆ ನಿಜವಾಗಿಯೂ ಅಂತಹ ಮಹಾನ್ ವ್ಯಕ್ತಿಗಳಿಂದ ಮಾತ್ರ ಸಾಧ್ಯ.

ಇಂತಹ ವೀರರಲ್ಲೊಬ್ಬರಾದ ಅರುಣಾಚಲ ಪ್ರದೇಶದ ತವಂಗ್ ಜಿಲ್ಲೆಯ ನುರಾನಂಗ್ ಎಂಬಲ್ಲಿ ಸುಮಾರು 300 ಚೀನಿ ಸೈನಿಕರನ್ನು ಹೊಡೆದುರಿಳಿಸಿದ ಜಸ್ವಂತ್ ಸಿಂಗ್ ರಾವತ್ ರನ್ನು ನಾವು ನೆನೆಪಿಸಲೇ ಬೇಕು. ಹೌದು ಅಂದು 1962 ಯುದ್ದದ ಕೊನೆಯ ಸಂದರ್ಭ ಆಗಿತ್ತು. ಚೀನಿ ಸೈನಿಕರು ಭಾರತೀಯ ಸೈನಿಕರ ಎದುರು ಪ್ರಬಲವಾಗಿದ್ದರು. ಆ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದ ನೆಹರೂವಿನ ದುರಾಡಳಿತದಿಂದಾಗಿ ಸೈನಿಕರಿಗೆ ಬೇಕಾದ ಸವಲತ್ತುಗಳನ್ನು ಕೂಡಾ ನೀಡುತ್ತಿರಲಿಲ್ಲ. ಅದಲ್ಲದೆ ನೆಹರೂ ಸರಕಾರ ನೂರಾನಂಗ್ ನಲ್ಲಿರುವ 4ನೇ ಬಟಾಲಿಯನ್ ಸೈನಿಕರನ್ನು ವಾಪಸ್ ಕರಿಸಿಕೊಳ್ಳುವ ಆದೇಶ ಕೂಡಾ ನೀಡಿತ್ತು. ಸೈನಿಕರಿಗೆ ಉತ್ಸಾಹ ತುಂಬುವ ಬದಲು ನೆಹರೂ ವಾಪಾಸ್ಸಾಗಿ ಎಂದು ಆದೇಶ ನೀಡುತ್ತಿದ್ದರು. ಅದಲ್ಲದೆ ಅವರಿಗೆ ಬೇಕಾದ ಶಸ್ತ್ರಾಸ್ತ್ರಗಳು ಇಲ್ಲದೇ ಇರುವುದರದಿಂದ ಮತ್ತು ನೆಹರೂ ಸರಕಾರ ಒತ್ತಾಯ ಮೇರೆಗೆ ಮಣಿದು ಕೆಲ ಸೈನಿಕರು ವಾಪಸ್ಸು ಬರಬೇಕಾಯಿತು!

ನನ್ನ ಪ್ರಾಣ ಹೋದರೂ ಸರಿ ನಮ್ಮ ಈ ಭೂಮಿ ಬೇರೆಯವರಿಗೆ ಒಪ್ಪಿಸಲ್ಲ…

ಜಸ್ವಂತ್ ಸಿಂಗ್ ರಾವತ್ ಸುಲಭವಾಗಿ ಸೋಲು ಒಪ್ಪಿಕೊಳ್ಳಲಿಲ್ಲ. ಪ್ರಾಣ ಹೋದರೂ ಸರಿ ನಮ್ಮ ಭೂಮಿಯನ್ನು ಬೇರೆಯವರಿಗೆ ಒಪ್ಪಿಸಲ್ಲ ಎಂಬ ದೃಢ ನಿರ್ಧಾರದಿಂದ ಚೀನೀ ಸೈನಿಕರನ್ನು ಎದುರಿಸಲು ತಯಾರಿಗಿಯೇ ನಿಂತ ಅದಲ್ಲದೆ ಸ್ಥಳೀಯ ಇಬ್ಬರು ಮಹಿಳೆಯರ ಸಹಾಯವನ್ನು ಪಡೆದು ಯುದ್ಧಕ್ಕೆ ಸನ್ನದ್ಧರಾದರು!! ಇವರು ಬೇರೆ ಬೇರೆ ಜಾಗದಲ್ಲಿ ಕುಳಿತು ಚೀನಿ ಸೈನಿಕರನ್ನು ಎದುರಿಸಲು ಮುಂದಾದರು. ಚೀನಿಯರು ಸುಮಾರು 600 ಜನಕ್ಕೂ ಮಿಕ್ಕಿ ಅಲ್ಲಿದ್ದರು. ಸೆಲಾ ಎಂಬ ಹುಡುಗಿ ಜಸ್ವಂತ್ ಸಿಂಗ್ ಗೆ ಸಾಮಗ್ರಿಗಳನ್ನು ತಲುಪಿಸುತ್ತಿದ್ದಳು. ಮೂರು ದಿನದ ನಂತರ ಸೆಲಾನನ್ನು ಚೀನಿ ಸೈನಿಕರು ಹಿಡಿದರು. ಇದಾದ ನಂತರ ನೂರಾ ಜಸ್ವಂತ್ ಗೆ ಸಹಾಯ ಮಾಡುತ್ತಿದಳು. ಕೆಲವೇ ಗಂಟೆಗಳಲ್ಲಿ ಅವಳೂ ಕೂಡ ಜಸ್ವಂತ್ ಸಿಂಗ್‍ನ ಕಣ್ಣೆದುರೇ ಚೀನಿಯರ ಗ್ರೆನೇಡ್ ದಾಳಿಗೆ ಬಲಿಯಾದಳು.

ಏಕಾಂಗಿಯಾಗಿ ಹೋರಾಡಿ ಮುನ್ನೂರು ಸೈನಿಕರನ್ನು ಯಮಲೋಕಕ್ಕಟ್ಟಿದ್ದ ಜಸ್ವಂತ್ ಸಿಂಗ್!

ಅವರ ಕೈಯಲ್ಲಿದ್ದ ಬಂದೂಕುಗಳನ್ನು ತೆಗೆದುಕೊಂಡವನೇ ಒಂದು ಬಂಕರು ಸೇರಿಕೊಂಡು ಐದು ಕಿಂಡಿಗಳಿಂದ ಒಂದೊಂದು ಸಲ ಗುಂಡು ಹಾರಿಸುತ್ತಾ ಬಂಕರಿನೊಳಗೆ ತುಂಬಾ ಜನರಿದ್ದಾರೇನೋ ಎಂಬ ಭ್ರಮೆ ಹುಟ್ಟಿಸಿ ರಾಕ್ಷಸ ಸೇನೆಯನ್ನು ತುಂಬಾ ಹೊತ್ತು ತಡೆದು ನಿಲ್ಲಿಸಿದ್ದ. ಸುಮಾರು ಮುನ್ನೂರು ಚೀನಿ ಸೈನಿಕರನ್ನು ಕೊಂದು ಹಾಕಿದ ಏಕಾಂಗಿ ವೀರ ಈತ.

ಜಸ್ವಂತ್‍ಸಿಂಗ್ ವೀರಯಶೋಗಾತೆಗೆ ಸ್ವತಃ ಚೀನೀಯರೇ ತಲೆಬಾಗಿದ್ದರು.

ಗುಂಡು ಖಾಲಿಯಾದ ನಂತರ ಸ್ತಬ್ದವಾಗಿ ಹೋದಮೇಲೆ ಎಷ್ಟೋ ಹೊತ್ತಿನ ನಂತರ ಚೀನೀ ಸೈನಿಕರು ಕಳ್ಳಹೆಜ್ಜೆಯಿಡುತ್ತಾ, ಅಳುಕುತ್ತಾ ಬಂಕರಿನೊಳ ಸಮೀಪಕ್ಕೆ ಬರುತ್ತಾರೆ. ಇತ್ತ ಕಡೆಯಲ್ಲಿ ಬಂದೂಕಿನಲ್ಲಿ ಗುಂಡು ಕೂಡಾ ಖಾಲಿಯಾಗಿತ್ತು. ಸಿಕ್ಕಿದ್ದು ಧೀರ ಯೋಧ ಸುಬೇದಾರ್ ಜಸ್ವಂತ್ ಸಿಂಗ್ ಚೀನಾದ ರಾಕ್ಷಸರು ಜಸ್ವಂತ್ ಸಿಂಗ್‍ನ ಎದೆಗೆ ಗುಂಡು ಬಿಟ್ಟರು ನಂತರ ನಮ್ಮ ಜಸ್ವಂತ್ ಸಿಂಗ್‍ನ್ನು ಹಿಡಿದು ಅವನ ರುಂಡವನ್ನೇ ತುಂಡು ಮಾಡಿ ಚೀನಾಕ್ಕೆ ಕೊಂಡೊಯ್ದರು. ತದನಂತರ ಅಕ್ಟೋಬರ್ 20,1962ರಲ್ಲಿ ಕದನ ವಿರಾಮ ಘೋಷಣೆಯಾದ ಬಳಿಕ ಜಸ್ವಂತ್ ಸಿಂಗ್ ನ ವೀರಯಶೋಗಾತೆಯನ್ನು ಕೇಳಿದ ಚೀನಿಯರು ಅವನ ತಲೆಯನ್ನು ಭಾರತಿಯರಿಗೆ ವಾಪಸ್ ಅತೀ ಗೌರವದಿಂದ ಕಳುಹಿಸಿಕೊಟ್ಟರು.

ಇಂದು ಜಸ್ವಂತ ನಮ್ಮೊಂದಿಗಿಲ್ಲದಿದ್ದರೂ ಆತನ ಹೆಸರ ಮುಂದೆ ಹುತಾತ್ಮ ಎಂದು ಹೇಳೋಹಾಗಿಲ್ಲ…

ಇದೀಗಲೂ ನಮ್ಮ ವೀರ ಯೋಧನನ್ನು ಅಲ್ಲಿ ದೇವರಂತೆ ಪೂಜಿಸಲಾಗುತ್ತಿದೆ. ಜಸ್ವಂತ್ ಸಿಂಗ್ ಹೋರಾಡಿದ ನೂರಾನಂಗ್ ಭೂಮಿಯಲ್ಲಿ ಅವನ ಮಂದಿರವೊಂದನ್ನು ಕಟ್ಟಲಾಯ್ತು. ಅಲ್ಲಿ ಅವನು ದಿನನಿತ್ಯ ಉಪಯೋಗಿಸುತ್ತಿದ್ದ ಎಲ್ಲಾ ವಸ್ತುಗಳನ್ನು ಹಾಗೂ ಚೀನಿಯರು ಕಡಿದು ಕೊಂಡುಹೋದ ಅವನ ರುಂಡದ ಪ್ರತಿಮೆಯನ್ನು ಇಡಲಾಗಿದೆ. ಈ ಮಂದಿರದ ರಸ್ತೆಯಿಂದ ತೆರಳುವ ಎಲ್ಲಾ ಭಾರತೀಯ ಹಾಗೂ ಚೀನಿ ಸೈನಿಕರು ಬಾಬಾ ಜಸ್ವಂತ್ ಸಿಂಗ್ ಮಂದಿರಕ್ಕೆ ಹೋಗಿ ಆಶೀರ್ವಾದ ಪಡೆದೆ ಹೋಗುತ್ತಾರೆ. ಈ ಮಂದಿರದ ರಕ್ಷಣೆಗೆ 5 ಸೈನಿಕರನ್ನು ನೇಮಕ ಮಾಡಲಾಗಿದೆ. ಭಾರತೀಯ ಸೈನಿಕರಲ್ಲಿ ಜಸ್ವಂತ್ ಸಿಂಗ್‍ಗೆ ಮಾತ್ರ ಹೆಸರಿನ ಮೊದಲು ಸ್ವರ್ಗಿಯ ಅಥವಾ ಹುತಾತ್ಮ ಎಂದು ಸೇರಿಸಾಲಾಗುವುದಿಲ್ಲ. ಅವನು ಇನ್ನೂ ಬದುಕಿದ್ದಾನೆ ಎಂಬ ನಂಬಿಕೆ ಇದೆ. ದಿನಾಲೂ ಅವನ ಸಮವಸ್ತ್ರ ಸ್ವಚ್ಛಗೊಳಿಸಾಲಾಗುತ್ತದೆ. ಬೂಟು ಪಾಲಿಶ್ ಮಾಡಲಾಗುತ್ತದೆ. ಮೂರು ಹೊತ್ತು ಊಟ ಕೊಡಲಾಗುತ್ತದೆ.

15 ಸಾವಿರ ಅಡಿ ಎತ್ತರದಲ್ಲಿ ಈತನ ಸ್ಮಾರಕವಿದೆ.

ಆ ವೀರ ಇನ್ನೂ ಬದುಕಿದ್ದಾನೆ ಎಂಬ ನಂಬಿಕೆ ಇದೆ. 14 ಸಾವಿರ ಅಡಿ ಎತ್ತರದಲ್ಲಿ ಅವನ ಹೆಸರಿನದೊಂದು ಸ್ಮಾರಕ ಇದೆ. ಒಂದು ಮನೆ. ಪ್ರತಿನಿತ್ಯ ಒಬ್ಬ ಸೈನಿಕ ಅಲ್ಲಿನ ಮಂಚ ಸ್ವಚ್ಛಪಡಿಸುತ್ತಾನೆ. ಹಾಸಿಗೆಯ ಮೇಲೆ ಹಾಸು, ಹೊದಿಕೆ ದಿಂಬು ಎಲ್ಲಾ ಬದಲಿಸುತ್ತಾನೆ. ಒಂದು ಹೊಸ ಯೂನಿಫಾರ್ಮ್ ತಂದು ಅಲ್ಲಿಡುತ್ತಾರೆ. ಜಸ್ವಂತ್ ಸಿಂಗ್ ನ ಬೂಟುಗಳಿಗೆ ಮಿರಿಮಿರಿ ಪಾಲೀಶು, ಬ್ಯಾಡ್ಜ್ ಗಳಿಗೆ ಬ್ರಾಸೋ ಹಾಕಿ ತಿಕ್ಕಿ ಫಳಫಳ ಹೊಳೆಯುವಂತೆ ಮಾಡುತ್ತಾರೆ. ಬೆಳಿಗ್ಗೆ ಹೊತ್ತಿಗೆ ಬಂದು ನೋಡಿದರೆ ಬೂಟಿಗೆ ಹಿಮ ಬಿದ್ದಂತೆ ಆಗುತ್ತದೆ!!

ಜಸ್ವಂತ್ ಸಿಂಗ್ ಇಲ್ಲದೆ ಇದ್ದರೂ ಆತನಿಗೆ ಸಿಗುತ್ತೆ ಪ್ರೊಮೋಷನ್!

ಅದಲ್ಲದೆ ಆತ ಒಂದು ವೇಳೆ ಬದುಕಿದ್ದರೆ ಜಸ್ವಂತ್ ಸಿಂಗ್ ಒಂದೊಂದಾಗಿ ಪ್ರಮೋಷನ್ ಪಡೆಯುತ್ತಿದ್ದಾನಲ್ಲವೇ ಅವುಗಳನೆಲ್ಲ ಸೇನೆ ಆತನಿಗೆ ಕೊಡುತ್ತದೆ. 2002 ರಲ್ಲಿ ಅಂದರೆ ಆತ ಸತ್ತು ನಲವತ್ತು ವರ್ಷಗಳ ನಂತರ ಆತನಿಗೆ ಮೇಜರ್ ಆಗಿ ಭಡ್ತಿ ನೀಡಲಾಯಿತು. ಆ ತುಕಡಿ ಇರುವ ಪ್ರದೇಶಕ್ಕೆ ಆ ಊರಿಗೆ ಆತನ ನೆನಪಿಗಾಗಿ “ಜಸ್ವಂತ ಘಡ” ಎಂದು ಹೆಸರಿಡಲಾಗಿದೆ. ಅಲ್ಲಿನ ಬೀದಿಗಳಲ್ಲಿ ತಿರುವುಗಳಲ್ಲಿ, ಕಂದರಗಳಲ್ಲಿ ಓಡಾಡುವಾಗ “ನಹೀ ಬೇಟಾ, ಈ ರಸ್ತೆ ಕೆಟ್ಟು ಹೋಗಿದೆ. ಹಾಗಿಂದ ಹೋಗು. ಮೇಲಿಂದ ಕಡೆ ಹೋಗುವ ಸಾಹಸ ಬೇಡ. ಆಜ್ ಮೌಸಮ್ ಖರಾಬ್ ಹೈ.” ಎಂದು ಇದ್ದಕ್ಕಿದ್ದ ಹಾಗೆ ವೃದ್ದನೊಬ್ಬ ಎಚ್ಚರಿಸುತ್ತಾನೆ.

ದಾರಿಯಲ್ಲಿ ಆಗೋ ಅಪಾಯದ ಬಗ್ಗೆ ಎಚ್ಚರಿಕೆ ನೀಡೋ ಈತ ನಿಜಕ್ಕೂ ಅಚ್ಚರಿ…

ದಾರಿಯಲ್ಲಿನ ಅಪಾಯಗಳ ಬಗ್ಗೆ ಎಚ್ಚರಿಸಿ ಎಷ್ಟೋ ಜನರ ಪ್ರಾಣ ಕಾಪಾಡಿದ್ದಾನಂತೆ. ಅನಿರೀಕ್ಷಿತವಾಗಿ ದಾರಿಯಲ್ಲಿ ಸಿಗುವ ಹಿರಿಯ ಯಾರು? ಆತ ಮಿಲಿಟರಿ ಯೂನಿಫಾರ್ಮಿನಲ್ಲಿರುತ್ತಾನೆ. ಯಾರು ಈತ ಎಂಬುವುದೇ ಇನ್ನೂ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡುತ್ತದೆ. ಅದಲ್ಲದೆ ಯುದ್ಧ ಭೂಮಿಯಲ್ಲಿ ಯಾವ ಶತ್ರುವಾದರೂ ಅಟ್ಯಾಕ್ ಮಾಡುತ್ತಾರೆ ಎಂದಾಗ ನಮ್ಮ ಸೈನಿಕರನ್ನು ಎಚ್ಚರಿಸುತ್ತಾರೆ ಎಂಬ ನಂಬಿಕೆಯೂ ಇನ್ನೂ ಇದೆ. ಮರಣದ ನಂತರ ಈತನಿಗೆ ಸೇನೆಯ ಪರಮೋನ್ನತ ಗೌರವವಾದ ಪರಮವೀರ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇಂತಹ ವೀರರೂ ಯಾವತ್ತಿಗೂ ಅಮರರು..ಇವರಿಗೆ ಒಂದು ಸೆಲ್ಯೂಟ್ ಹೊಡೆಯಲೇ ಬೇಕು.

ಕೃಪೆ:ಪಂಚಾಯತ್ ಕನ್ನಡ.
ಸಂಗ್ರಹ:ವೀರೇಶ್ ಅರಸಿಕೆರೆ

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059