ದಿನಕ್ಕೊಂದು ಕಥೆ 964

*1955 ರಿಂದ 1975 ರ ವರೆಗೆ ನಡೆದ ಸುಧೀರ್ಘ ಯುದ್ಧದಲ್ಲಿ ವಿಯೆಟ್ನಾಂ ಅಮೆರಿಕವನ್ನೇ ಸೋಲಿಸಿತು!*

ಯುದ್ಧದ ವಿಜಯದ ನಂತರ ಒಬ್ಬ ಪತ್ರಕರ್ತ ವಿಯೆಟ್ನಾಂ ನ ಅಧ್ಯಕ್ಷನನ್ನು ಒಂದು ಪ್ರಶ್ನೆ ಕೇಳಿದ.... ಅಷ್ಟು ಬಲಶಾಲಿ ರಾಷ್ಟ್ರ ಅಮೆರಿಕವನ್ನು ನೀವು ಹೇಗೆ ಸೋಲಿಸಿದಿರಿ? ಎಂದು

ಅದಕ್ಕೆ ವಿಯೆಟ್ನಾಂ ಅಧ್ಯಕ್ಷರ ಉತ್ತರ ಹೀಗಿತ್ತು..... ಅಮೇರಿಕದಂತಹ ದೇಶವನ್ನು ಸೋಲಿಸುವುದು ಅಷ್ಟು ಸುಲಭದ ಮಾತಲ್ಲ.... ಆದರೂ ನಾವು ಅಮೆರಿಕದ ವಿರುದ್ದ ಜಯಗಳಿಸಲು ಒಬ್ಬ ಮಹಾನ್ ರಾಜನ ಕತೆಯು ನನಗೆ ಯುದ್ಧವನ್ನು ಗೆಲ್ಲುವ ಭರವಸೆಯನ್ನು ಮೂಡಿಸಿತು.... ಯುದ್ಧದ ತಯಾರಿಗೆ ಆ ಮಹಾಪುರುಷನ ಜೀವನ ಚರಿತ್ರೆಯೇ ನಮಗೆ ಪ್ರೋತ್ಸಾಹ ನೀಡಿತು... ಅವರ ಯುದ್ಧದ ಕಲೆಯನ್ನು ನಾವು ಅಳವಡಿಸಿಕೊಂಡೆವು..... ಅಮೆರಿಕದೊಂದಿಗಿನ ಯುದ್ಧವನ್ನು ಗೆದ್ದೆವು.....

ಇದನ್ನು ಕೇಳಿದ ಪತ್ರಕರ್ತ, ಕೌತುಕ ತಡೆಯಲಾರದೆ ಕೇಳಿದ "ಯಾರು ಆ ಮಹಾರಾಜ"?

ವಿಯೆಟ್ನಾಂ ಅಧ್ಯಕ್ಷರು ಹೇಳಿದರು.... ಅದು ಬೇರೆ ಯಾರು ಅಲ್ಲ.....  *ಭರತ ಖಂಡದಲ್ಲಿ ಸಿಂಹದಂತೆ ಏಕಾಂಗಿಯಾಗಿ ಮೊಘಲ್ ಉಗ್ರರ ವಿರುದ್ದ ಹೋರಾಡಿದ ವೀರ "ಛತ್ರಪತಿ ಶಿವಾಜಿ ಮಹಾರಾಜರು"...... ಅವರಂಥ ಮಹಾರಾಜರನ್ನು ವಿಯೆಟ್ನಾಂ ಏನಾದರೂ ಪಡೆದಿದ್ದರೆ ಇವತ್ತು ನಾವು ಪ್ರಪಂಚವನ್ನೇ ಆಳುತ್ತಿದ್ದೆವು......*

ಕೆಲವರ್ಷಗಳ ನಂತರ ವಿಯೆಟ್ನಾಂ ಅಧ್ಯಕ್ಷರು ಮರಣ ಹೊಂದಿದರು.... ಮರಣದ ನಂತರ ಅವರ ಅಪೇಕ್ಷೇಯಂತೆ ಅವರ ಘೋರಿಯ ಮೇಲೆ ಹೀಗೆ ಬರೆಯಲಾಯಿತು...... *"ಶಿವಾಜಿ ಮಹಾರಾಜರ ಮೆಚ್ಚಿನ ಶಿಷ್ಯನ ವಿಶ್ರಾಂತಿಯ ಸ್ಥಳ"* ಎಂದು

ಈ ಬರಹವನ್ನು ಈಗಲೂ ಸಹ ನಾವು ಅವರ ಸಮಾಧಿಯ ಮೇಲೆ ಕಾಣಬಹುದು....

ಇದಾದ ಕೆಲ ವರ್ಷಗಳ ಬಳಿಕ ವಿಯೆಟ್ನಾಂ ನ ವಿದೇಶಾಂಗ ಮಂತ್ರಿಗಳು ಭಾರತಕ್ಕೆ ಭೇಟಿ ನೀಡಿದರು.... ಮೊದಲೇ ಯೋಜಿಸಿದಂತೆ ಅವರನ್ನು ಕೆಂಪು ಕೋಟೆ ಮತ್ತು ಗಾಂಧೀಜಿಯವರ ಸಮಾಧಿ ಇರುವ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು.... ಆದರೆ ಅವರು ಕೇಳಿದ್ದೇನು ಗೊತ್ತೆ!!!! *"ಛತ್ರಪತಿ ಶಿವಾಜಿ ಮಹಾರಾಜರ ಸಮಾಧಿ ಎಲ್ಲಿದೆ"???* ಎಂದು...

ಆಶ್ಚರ್ಯ ಮತ್ತು ನಾಚಿಕೆಯಿಂದ ಭಾರತದ ಅಧಿಕಾರಿಗಳು, ಅದು ಮಹಾರಾಷ್ಟ್ರ ರಾಜ್ಯದ ರಾಯಘಡ್ ದಲ್ಲಿದೆ ಎಂದರು.....

ಕೂಡಲೇ ವಿಯೆಟ್ನಾಂ ನ ಸಚಿವರು ರಾಯಘಡ್ ಗೆ ಹೊರಟರು.... *ಅಲ್ಲಿ ಶಿವಾಜಿ ಮಹಾರಾಜರ ಸಮಾಧಿಗೆ ನಮಸ್ಕರಿಸಿ, ಸಮಾಧಿಯಿಂದ ಒಂದು ಹಿಡಿ ಮಣ್ಣನ್ನು ಬಾಚಿಕೊಂಡು ತಮ್ಮ ಬ್ಯಾಗಿನೊಳಗೆ ಹಾಕಿಕೊಂಡರು...*

ಇದನ್ನು ನೋಡಿದ ಭಾರತದ ಪತ್ರಕರ್ತರು ಅವರನ್ನು ಕೇಳಿಯೇ ಬಿಟ್ಟರು..... ನೀವು ಯಾಕೆ ಮಣ್ಣನ್ನು ನಿಮ್ಮ ಬ್ಯಾಗಿನಲ್ಲಿ ಹಾಕಿಕೊಂಡಿರಿ ಎಂದು......

ಇದಕ್ಕೆ ಉತ್ತರಿಸಿದ ಸಚಿವರು, *"ಇದು ಒಬ್ಬ ಮಹಾನ್ ನಾಯಕ, ಧೀರ, ಶೂರ, ಸಾಹಸಿ ಛತ್ರಪತಿ ಶಿವಾಜಿ ಮಹಾರಾಜರು ಹುಟ್ಟಿ ಬೆಳೆದ ಮಣ್ಣು, ಈ ಮಣ್ಣನ್ನು ತೆಗೆದುಕೊಂಡು ಹೋಗಿ ನಮ್ಮ ದೇಶದ ಮಣ್ಣಿನಲ್ಲಿ ಬೆರೆಸುತ್ತೇನೆ, ಅವಾಗ ನಮ್ಮಲ್ಲಿಯೂ ಶಿವಾಜಿ ಮಹಾರಾಜರಂತಹ ಮಹಾನ್ ನಾಯಕರು ಹುಟ್ಟಲಿ"* ಎಂದರಂತೆ.....

*ಕೃಪೆ:ಲಕ್ಷ್ಮಣರಾಜು ಮೈಸೂರು*
ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1092

ದಿನಕ್ಕೊಂದು ಕಥೆ 1097