Posts

Showing posts from November, 2020

ದಿನಕ್ಕೊಂದು ಕಥೆ 1004

ದಿನಕ್ಕೊಂದು ಕಥೆ ಮಾನಸಿಕ ಏಕಾಗ್ರತೆಯ ಮಹತ್ವ ಮಹಾಭಾರತದಲ್ಲಿ ಅರ್ಜುನನ ಅನೇಕ ಕಥೆಗಳಿವೆ. ಅವುಗಳಲ್ಲಿ ಒಂದು ಅರ್ಜುನ್ ರಾಜ್ ಕುಮಾರ್. ಅವನು ತನ್ನ ನಾಲ್ಕು ಸಹೋದರರೊಂದಿಗೆ ಗುರುವಿನಿಂದ ಬಿಲ್ಲುಗಾರಿಕೆ ಕಲೆಯನ್ನು ಕಲಿಯುತ್ತಿದ್ದನು. ಕೆಲವು ದಿನಗಳ ನಂತರ, ಗುರು ತನ್ನ ಶಿಷ್ಯರನ್ನು ಪರೀಕ್ಷಿಸಲು ಬಯಸಿದನು. ಅವರು ಮಣ್ಣಿನ ಹಕ್ಕಿಯನ್ನು ಮಾಡಿದರು.ಅವರು ಅದನ್ನು ಮರದ ಮೇಲೆ ಹಾಕಿದರು. ನಂತರ ಅವರು ಪಕ್ಷಿಗಳ ಕಣ್ಣಿಗೆ ಹೊಡೆಯಲು ಎಲ್ಲರಿಗೂ ಹೇಳಿದರು. ಗುರು ಮೊದಲು ಇತರ ಸಹೋದರರನ್ನು ಕೇಳಿದನು, "ನೀವು ಮೇಲೆ ಏನು ನೋಡುತ್ತೀರಿ?" ಎಲ್ಲರೂ ಅನೇಕ ವಿಷಯಗಳನ್ನು ಹೇಳಿದರು. ಉದಾಹರಣೆಗೆ, ಮರ, ಎಲೆ, ಕೊಂಬೆ, ಪಕ್ಷಿ, ಇತ್ಯಾದಿ. ಈ ಎಲ್ಲ ಶಿಷ್ಯರನ್ನು ಗುರು ವಿಫಲಗೊಳಿಸಿದನು. ನಂತರ ಅರ್ಜುನ್ ಅವರನ್ನು ಶೂಟ್ ಮಾಡಲು ಹೇಳಿದರು. ನಂತರ ಅವನು ಅರ್ಜುನನನ್ನು ಕೇಳಿದನು, "ನೀವು ಮೇಲೆ ಏನು ನೋಡುತ್ತೀರಿ?" ಹಕ್ಕಿಯ ಕಣ್ಣು ಎಂದು ಅರ್ಜುನ್ ಹೇಳಿದರು. ಗುರುಗಳು ಪ್ರತಿ ಬಾರಿ ಪ್ರಶ್ನೆ ಕೇಳಿದಾಗ ಅವರು ಅದೇ ಉತ್ತರವನ್ನು ನೀಡಿದರು. ಗುರು ನಂತರ ಪರೀಕ್ಷೆಯನ್ನು ಅರ್ಜುನನಿಗೆ ಉತ್ತೀರ್ಣನಾಗಿ ಹೇಳಿದನು - ಲಕ್ಷ್ ಪಡೆಯಲು, ಒಬ್ಬರ ಗಮನವನ್ನು ಲಕ್ಷ್ ಮೇಲೆ ಕೇಂದ್ರೀಕರಿಸಬೇಕು. ಯಾವುದೇ ಪ್ರಯತ್ನದಲ್ಲಿ ಯಶಸ್ಸಿಗೆ ಈ ತತ್ವ ಅತ್ಯಗತ್ಯ. ಇದನ್ನೇ ಮಾನಸಿಕ ಏಕಾಗ್ರತೆ ಎಂದು ಕರೆಯಲಾಗುತ್ತದೆ, ಅಂದರೆ, ಒಬ್ಬ ವ್ಯಕ್ತಿಯು ತನ್ನ ಎಲ್ಲ ಗಮನ ಮತ್ತು

ದಿನಕ್ಕೊಂದು ಕಥೆ 1003

ದಿನಕ್ಕೊಂದು ಕಥೆ ಬೇಡಿದ್ದನ್ನೇಲ್ಲಾ ನೀಡುವ ದೇವರು ದೇವರಲ್ಲ. ಹಾಗಾದರೆ ದೇವರು ಯಾರು? ಇಲ್ಲಿರುವ ಪುಟ್ಟ ಘಟನೆಯೊಂದು ಉತ್ತರವನ್ನು ತೋರಿಸಬಹುದು! ಒಬ್ಬ ಗೃಹಸ್ಥರ ಮನೆಯಲ್ಲಿ, ಅವರ ಹತ್ತು ವರ್ಷ ವಯಸ್ಸಿನ ಒಬ್ಬಳೇ ಮಗಳ ಹುಟ್ಟುಹಬ್ಬದ ಸಮಾರಂಭ ನಡೆಯುತ್ತಿತ್ತು. ಗೃಹಸ್ಥರ ಅನೇಕ ಗೆಳೆಯರು ಬಂದಿದ್ದರು. ಗೃಹಸ್ಥರ ಗೆಳೆಯರೊಬ್ಬರು ಕಟ್ಟಾ ನಾಸ್ತಿಕರಾಗಿದ್ದರು. ಅವರು ಆಕೆಗೆ ಒಂದು ಮರದ ಬೊಂಬೆಯನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಎಲ್ಲರೂ ಔತಣಕೂಟದಲ್ಲಿ ಭಾಗವಹಿಸುತ್ತಿದ್ದಾಗ ಆಕೆ ಮರದ ಬೊಂಬೆಯೊಂದಿಗೆ ಆಟವಾಡುತ್ತಿದ್ದಳು. ಆಟದ  ಮರದಗೊಂಬೆ ಮುರಿದುಹೋಯಿತು. ಮುರಿದ ಬೊಂಬೆಯನ್ನು ನೋಡಿ ಆಕೆ ಗಟ್ಟಿಯಾಗಿ ಅಳಲಾರಂಭಿಸಿದಳು. ಆನಂತರ ಆಕೆ ದೇವರ ಮನೆಗೆ ಹೋದಳು. ಬೊಂಬೆಯನ್ನು ದೇವರ ಮಂಟಪದ ಮುಂದಿಟ್ಟು ದೇವರೇ, ಈ ಬೊಂಬೆ ಮುರಿದುಹೋಗಿದೆ. ಇದನ್ನು ರಿಪೇರಿ ಮಾಡಿಕೊಡು ಎಂದು ಬೇಡಿಕೊಂಡಳು. ಇದನ್ನು ಗಮನಿಸಿದ ನಾಸ್ತಿಕ ಮಿತ್ರರು, ಆಕೆಗೆ ಮಗು! ನೀನು ಮುಗ್ಧೆ! ಆದರೆ ದೇವರೇ ಬಂದು ಮುರಿದುಹೋದ ಬೊಂಬೆ ರಿಪೇರಿ ಮಾಡಿಕೊಡುತ್ತಾನೆ ಎಂಬ ನಿನ್ನ ನಂಬಿಕೆ ಕಂಡು ನನಗೆ ಅಯ್ಯೋ ಎನಿಸುತ್ತದೆ. ಏಕೆಂದರೆ  ಅಸ್ತಿತ್ವ ದಲ್ಲೇ ಇಲ್ಲ. ಆತ ಬಂದು ಯಾರ ಬೊಂಬೆಯನ್ನೂ ರಿಪೇರಿ ಮಾಡಿಕೊಟ್ಟದ್ದೂ ಇಲ್ಲ ಎಂದರು. ಆಕೆ ನನಗೆ ಖಂಡಿತ ನಂಬಿಕೆಯಿದೆ. ದೇವರು ಖಂಡಿತ ಬೊಂಬೆಯನ್ನು ರಿಪೇರಿ ಮಾಡಿ, ಪರಿಹಾರ ಒದಗಿಸುತ್ತಾನೆ ಎಂದು ಹೇಳಿದಳು. ನಾಸ್ತಿಕರು ಮತ್ತೊಮ್ಮೆ ನಕ್ಕು, ದೇವರು ಖಂ

ದಿನಕ್ಕೊಂದು ಕಥೆ 1002

ದಿನಕ್ಕೊಂದು ಕಥೆ *ಬುದ್ಧನ ಜಾತಕ ಕಥೆಗಳು* *ಕರಗಿದ ಅಹಂಕಾರ*    ನೇತ್ರಾವತಿ ನಗರದ ಬಳಿ ಇದ್ದ ನೇತ್ರಾವತಿ ನದಿಯ ದಂಡೆಯಲ್ಲಿ ಜಾತಿಮಂತ ಎಂಬ ಬ್ರಾಹ್ಮಣನಿದ್ದ. ಅವನು ಪ್ರವ್ರಜಿತನಾದ. ಆದರೆ ಅವನಿಗೆ ತಾನು ಬ್ರಾಹ್ಮಣನೆಂಬ ಜಾತಿಯ ಅಭಿಮಾನ ದೊಡ್ಡದಾಗಿತ್ತು. ಆಗ ಬೋಧಿಸತ್ವ ಅವನ ಅಭಿಮಾನವನ್ನು ಒಡೆದು ಹಾಕಲೆಂದು ಅವನಿಗೆ ಹತ್ತಿರದಲ್ಲೇ ನದಿಯ ಮೇಲ್ಭಾಗದಲ್ಲಿ ಬಂದು ನೆಲೆಸಿದ. ಒಂದು ದಿನ ಬೆಳಿಗ್ಗೆ ಹಲ್ಲುಜ್ಜುತ್ತಿದ್ದಾಗ, ನದಿಯ ಕೆಳಭಾಗದಲ್ಲಿ ಜಾತಿವಂತ ಸ್ನಾನಮಾಡಲು ಬಂದದ್ದನ್ನು ಕಂಡ. ತನ್ನ ಹಲ್ಲು ಉಜ್ಜುವ ಕಡ್ಡಿ ಜಾತಿವಂತನ ಜುಟ್ಟಿನಲ್ಲಿ ಸಿಕ್ಕಿಕೊಳ್ಳಲೆಂದೇ ಸಂಕಲ್ಪ ಮಾಡಿ ಕಡ್ಡಿಯನ್ನು ನೀರಿನಲ್ಲಿ ಎಸೆದ. ಅದು ತೇಲಿಬಂದು ಆಚಮನ ಮಾಡುತ್ತಿದ್ದ ಜಾತಿಮಂತನ ಜುಟ್ಟಿನಲ್ಲಿ ಸೇರಿಕೊಂಡಿತು. ಆತನಿಗೆ ಭಾರೀ ಕೋಪ ಬಂದಿತು. ಈ ಹಲ್ಲುಕಡ್ಡಿ ಎಲ್ಲಿಂದ ಬಂತು ಎಂದು ನೋಡಲು ಪ್ರವಾಹದ ಮೇಲಿನ ಭಾಗಕ್ಕೆ ಬಂದ. ಅಲ್ಲಿ ಬೋಧಿಸತ್ವನನ್ನು ಕಂಡು, “ಎಲೆ ಪಾಪಿ, ನೀನೇ ಈ ಹಲ್ಲುಕಡ್ಡಿಯನ್ನು ಬೀಳಿಸಿದೆಯಾ?” ಎಂದು ಕೇಳಿದ. “ಹೌದು, ನಾನೇ ಬೀಳಿಸಿದ್ದು” ಎಂದ ಬೋಧಿಸತ್ವ. “ನೀನೊಬ್ಬ ಅಮಂಗಳ, ನಿನಗೆ ಕೆಟ್ಟದ್ದಾಗುತ್ತದೆ. ನೀನು ಹೋಗಿ ಪ್ರವಾಹದ ಕೆಳಭಾಗದಲ್ಲಿ ಇರು. ಇಲ್ಲಿ ಮೇಲಿರುವುದು ಬೇಡ” ಎಂದು ಕೂಗಾಡಿದ. ಬೋಧಿಸತ್ವ ಮಾತನಾಡದೆ ಪ್ರವಾಹದ ಕೆಳಭಾಗಕ್ಕೆ ಹೋಗಿ ನೆಲೆಸಿದ.    ಮರುದಿನ ಮತ್ತೆ ಜಾತಿಮಂತ ಸ್ನಾನಕ್ಕೆ ಬಂದಾಗ ಬೋಧಿಸತ್ವ ಮತ್ತೆ ಹಲ್ಲು ಉಜ್ಜಿಕೊಳ್ಳ

ದಿನಕ್ಕೊಂದು ಕಥೆ 1001

ದಿನಕ್ಕೊಂದು ಕಥೆ ರಾಜನ ದಯೆ – ದೇವರ ದಯೆ........ ಒಂದಾನೊಂದು ಕಾಲದಲ್ಲಿ ಕನಕಪುರಿ ಎಂಬ ರಾಜ್ಯವನ್ನು ಆಳುತ್ತಿದ್ದ ರಾಜನಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ಇದೊಂದರ ಹೊರತಾಗಿ ಅವನಲ್ಲಿ ಬೇರಾವ ದೋಷವೂ ಇರಲಿಲ್ಲ. ಒಂದು ದಿನ ಅವನು ಮಾರುವೇಷದಿಂದ ಮಂತ್ರಿಯೊಡಗೂಡಿ ತನ್ನ ರಾಜಧಾನಿಯಲ್ಲಿ ತಿರುಗಾಡುತ್ತಿದ್ದಾಗ, ಇಬ್ಬರು ಭಿಕ್ಷುಕರು ಭಿಕ್ಷೆ ಬೇಡುತ್ತಿದ್ದುದನ್ನು ಕಂಡನು. ಅವರಲ್ಲಿ ಒಬ್ಬನು ‘ರಾಮನ ದಯೆ’ ಎಂದೂ, ಮತ್ತೊಬ್ಬನು ‘ರಾಜನ ದಯೆ’ ಎಂದೂ ಕೂಗಿ ಭಿಕ್ಷೆ ಬೇಡುತ್ತಿದ್ದರು. ಮರುದಿನ ರಾಜನು ಅವರಿಬ್ಬರನ್ನು ಪರೀಕ್ಷಿಸಲು ಆಸ್ಥಾನಕ್ಕೆ ಕರೆಸಿದನು. ಅವನ ಮಂತ್ರಿಯು ಅವರಿಬ್ಬರನ್ನು ಪ್ರಶ್ನಿಸಿದ, “ನಿನ್ನೆ ನೀವಿಬ್ಬರೂ ಭಿಕ್ಷೆಯನ್ನು ಬೇಡುವಾಗ ಒಬ್ಬ ರಾಮನ ದಯೆ ಎಂದು, ಮತ್ತು ರಾಜನ ದಯೆ ಎಂದೂ ಹೇಳುತ್ತಿದ್ದಿರಿ. ಅದರ ಅರ್ಥವೇನು?” ರಾಮನ ದಯೆ ಎನ್ನುವವನು ಹೇಳಿದನು, “ಸ್ವಾಮಿ, ಈ ಇಡೀ ಪ್ರಪಂಚ ಶ್ರೀರಾಮನಿಂದ ರಕ್ಷಿಸಲ್ಪಟ್ಟಿದೆ. ಅವನೇ ಸಂಪತ್ತನ್ನೂ, ಶ್ರೀಮಂತಿಕೆಯನ್ನೂ ನೀಡುವನು. ಅದಕ್ಕಾಗಿ ರಾಮನ ದಯೆ ಎಂದು ನಾನು ಭಿಕ್ಷೆಯನ್ನು ಬೇಡುತ್ತಿದ್ದೆ”. ಮಂತ್ರಿಯ ಪ್ರಶ್ನೆಗೆ ಇನ್ನೊಬ್ಬನು, “ಸ್ವಾಮಿ, ದೇವರು ಕಣ್ಣಿಗೆ ಕಾಣಲಾರ. ರಾಜನು ಕಣ್ಣಿಗೆ ಕಾಣುವ ದೇವರು. ಅವನೇನಾದರೂ ಬಯಸಿದರೆ ಯಾರನ್ನು ಬೇಕಾದರೂ ಶ್ರೀಮಂತನನ್ನಾಗಿ ಮಾಡಬಹುದು. ಅದಕ್ಕಾಗಿ ರಾಜನ ದಯೆ ಎಂದು ನಾನು ಭಿಕ್ಷೆಯನ್ನು ಬೇಡುತ್ತಿದ್ದೆ” ಎಂದನು. ರಾಜನು ‘ರಾಜನ ದಯೆ’ ಎಂಬುವವನೇ

ದಿನಕ್ಕೊಂದು ಕಥೆ 1000

ದಿನಕ್ಕೊಂದು ಕಥೆ ನಿನ್ನ ಮನಸ್ಸೇ ನಿನಗೆ ಶತ್ರು    ಒಬ್ಬ ಭಕ್ತನು ದೇವರನ್ನು ಕುರಿತು ಬಹಳ ಕಾಲ ತಪಸ್ಸು ಮಾಡುತ್ತಿದ್ದ. ಕಡೆಗೊಂದು ದಿನ ಭಗವಂತನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಭಗವಂತನ ಕೈಯಲ್ಲಿ ಗದೆ ಕೂಡಾ ಇತ್ತು. ನಿನಗೇನು ವರ ಬೇಕು ಎಂದು ಭಗವಂತನು ಕೇಳಿದ ಕೂಡಲೋ ಆ ಭಕ್ತನು, "ಭಗವಂತಾ! ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ಶಕ್ತಿಗಳನ್ನೆಲ್ಲಾ ನಿನ್ನ ಗದೆಯ ಮೂಲಕ ನೀನು ಚಚ್ಚಿ ಹಾಕಬೇಕು. ಇದೇ ನನ್ನ ಅಭಿಲಾಷೆ!" ಎಂದು ಬೇಡಿಕೊಂಡ. ಭಗವಂತನು ಕಿರುನಗೆ ನಕ್ಕು ಹಾಗೇ ಆಗಲಿ ಎಂದು ಹೇಳಿ ಕೂಡಲೇ ಮಾಯವಾದನು.   ಸ್ವಲ್ಪ ಸಮಯದ ನಂತರ ಭಗವಂತನ ಗದೆ ವೇಗವಾಗಿ ತೂರಿ ಬಂತು. ಅದು ವರವನ್ನು ಕೋರಿಕೊಂಡ ಭಕ್ತನ ಮೇಲೆ ದಾಳಿ ಮಾಡಿ ಅವನನ್ನು ಸಿಕ್ಕ ಸಿಕ್ಕಲ್ಲಿ ಚಚ್ಚತೊಡಗಿತು. ಭಕ್ತನು ನೋವಿನ ಬಾಧೆಯಿಂದ ಹಾಗೇ ನೆಲಕ್ಕೆ ಉರುಳಿ ಬಿದ್ದ. ಇದೇನಿದು ನಾನು ವರವನ್ನು ಬೇಡಿಕೊಂಡದ್ದೇ ತಪ್ಪಾಗಿ ಹೋಯಿತಲ್ಲ ಎಂದು ಗಟ್ಟಿಯಾಗಿ ಅಳತೊಡಗಿದನು. "ನಾನು ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ನನ್ನ ಶತ್ರುಗಳನ್ನು ಚಚ್ಚಿ ಹಾಕು ಎಂದು ಬೇಡಿಕೊಂಡರೆ, ನೀನು ಮರೆಗುಳಿತನದಿಂದ ನಿನ್ನ ಗದೆಯನ್ನು ನನ್ನ ಮೇಲೆಯೇ ಪ್ರಯೋಗಿಸುತ್ತೀಯಾ?" ಎಂದು ಭಗವಂತನನ್ನು ಶಪಿಸತೊಡಗಿದ.   ಭಗವಂತನು ಪುನಃ ಪ್ರತ್ಯಕ್ಷನಾದನು. ಭಕ್ತನನ್ನು ನೋಡಿ ಹೀಗೆ ಹೇಳಿದ, "ಭಕ್ತಾ! ನೀನು ಕೋರಿಕೊಂಡಂತೆಯೇ ನಾನು ನನ್ನ ಗದೆಯನ್ನು ಪ್ರಯೋಗಿಸಿದೆ. ನಾನು ಮರೆಗುಳಿತನ

ದಿನಕ್ಕೊಂದು ಕಥೆ 999

ದಿನಕ್ಕೊಂದು ಕಥೆ ಆಶ್ಚರ್ಯವಾಗುತ್ತದಲ್ಲವೇ.!? ದೇವರ ಅಸ್ತಿತ್ವವನ್ನೇ ನಂಬದ ನಾಸ್ತಿಕರು ದೇವರಿಗೆ ಕೈಮುಗಿದರು ಎಂದರೆ ಆಶ್ಚರ್ಯವಾಗುತ್ತದಲ್ಲವೇ?*  ಹಾಗಿದ್ದರೆ ಇಲ್ಲಿರುವ ಪುಟ್ಟ ಪ್ರಸಂಗವನ್ನು ನೋಡಬ ಹುದು. ಇಬ್ಬರು ನಾವಿಕರಿದ್ದರು. ಒಬ್ಬ ಆಸ್ತಿಕ, ಮತ್ತೊಬ್ಬ ನಾಸ್ತಿಕ. ದೇವರು ಮಾಡುವುದೆಲ್ಲ ನನ್ನ ಒಳ್ಳೆಯದಕ್ಕೇ ಎಂಬ ನಂಬಿಕೆ. ನಾಸ್ತಿಕನಿಗೆ ಇದೆಲ್ಲಾ ಅಸಂಬದ್ಧ ಎನ್ನುವ ನಂಬಿಕೆ. ಒಮ್ಮೆ ಅವರು ಯಾನ ಮಾಡುತ್ತಿದ್ದ ಹಡಗು ಅಪಘಾತಕ್ಕೀಡಾಗಿ ನುಚ್ಚುನೂರಾಯಿತು. ಒಂದು ಮರದ ಹಲಗೆಯ ಮೇಲೆ ಆಸರೆ ಪಡೆದ ಇವರಿಬ್ಬರು ತೇಲುತ್ತ ಒಂದು ನಿರ್ಜನ ದ್ವೀಪವನ್ನು ಸೇರಿಕೊಂಡರು. ಆಸ್ತಿಕ ನಾವು ದೇವರ ದಯೆಯಿಂದ ಬದುಕಿದ್ದೇವೆ. ನಾವು ದೇವರಿಗೆ ಕೃತಜ್ಞರಾಗಿರಬೇಕು ಎಂದರು. ನಾಸ್ತಿಕ ಸಿಟ್ಟಿನಿಂದ ಕಾಣದ ದೇವರನ್ನು ಬಾಯಿಗೆ ಬಂದಂತೆ ಬೈದರು. ಅವರು ಆ ದ್ವೀಪದಲ್ಲಿ ಸಿಕ್ಕ ಹಣ್ಣು-ಹಂಪಲುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇಡೀ ದಿನ ಸಮುದ್ರದಲ್ಲಿ ಹಾದು ಹೋಗುವ ಹಡಗುಗಳ ಗಮನ ಸೆಳೆಯಲು ’ಹೋ’ ಎಂದು ಕಿರುಚುತ್ತಾ ಕೈಬೀಸುತ್ತಿದ್ದರು. ಆದರೆ ಯಾರೂ ಇವರನ್ನು ಗಮನಿಸಲಿಲ್ಲ. ಸಮುದ್ರ ತೀರದಲ್ಲಿ ಕುಳಿತು ಯಾವುದಾದರೂ ಹಡಗು ಬಂದು ನಮ್ಮನ್ನು ಕಾಪಾಡಬಾರದೇ ಎಂದು ಕಾಯುತ್ತಿದ್ದರು. ಕೆಲವು ದಿನಗಳ ನಂತರ ಬಿಸಿಲು, ಚಳಿಗಾಳಿಯನ್ನು ತಡೆಯಲಾಗದೆ ಕಾಡಿನಲ್ಲಿ ಸಿಗುವ ತೆಂಗಿನ ಗರಿಗಳಿಂದ ಒಂದು ಸಣ್ಣ ಗುಡಿಸಲು ಕಟ್ಟಿಕೊಂಡರು. ಆಸ್ತಿಕ ನಮಗೆ ತಿನ್ನುವುದಕ್ಕೆ

ದಿನಕ್ಕೊಂದು ಕಥೆ 998

ದಿನಕ್ಕೊಂದು ಕಥೆ ಕರ್ಣನ ಹಿರಿಮೆ ಒಂದು ದಿನ‌ ಹಸ್ತಿನಾಪುರದಲ್ಲಿ ಶ್ರೀಕೃಷ್ಣ ಮತ್ತು ಅರ್ಜುನ ಮಾತನಾಡುತ್ತಿದ್ದರು. ಅರ್ಜುನ: "ಕೃಷ್ಣ, ‌ನಾನು ಬೇಕಾದಷ್ಟು ದಾನ ಮಾಡುತ್ತೇನೆ. ಆದರೂ ಎಲ್ಲರೂ ಕರ್ಣನ ಔದಾರ್ಯದ ಬಗ್ಗೆ ಹೊಗಳುತ್ತಾರೆ." ಕೃಷ್ಣ: "ಇಲ್ಲ ಅರ್ಜುನ. ದಾನದಲ್ಲಿ ಎಂದಿಗೂ ನೀನು ಕರ್ಣನ ಸಮಕ್ಕೆ ಬರಲಾರೆ. ಅವನು ಆ ಗುಣದಲ್ಲಿ ಎಲ್ಲರನ್ನೂ ಮೀರಿದವನು." ಅರ್ಜುನನು ಕೃಷ್ಣನು ಕರ್ಣನ ಪಕ್ಷಪಾತಿಯಾಗಿದ್ದಾನೆ ಎಂದು ಮನಸ್ಸಿನಲ್ಲೇ ಅಂದುಕೊಂಡ. ಅರ್ಜುನನ ಮನಸ್ಸನ್ನು ಅರಿತ ಕೃಷ್ಣ "ನಾಳೆ ನಿಮಗಿಬ್ಬರಿಗೂ ಒಂದು ಸ್ಪರ್ಧೆ ಏರ್ಪಡಿಸುತ್ತೇನೆ. ಆಗ ಯಾರು ಹೆಚ್ವಿನ ದಾನಿಗಳು" ಎಂದು ನಿನಗೇ ಅರ್ಥವಾಗುತ್ತದೆ. " ಎಂದ. ಅರ್ಜುನ ಅದಕ್ಕೆ ಒಪ್ಪಿಕೊಂಡ. ಕೃಷ್ಣನು ಮಾರನೆಯ ದಿನ ಒಂದು ಚಿನ್ನದ ಹಾಗೂ ಒಂದು ಬೆಳ್ಳಿಯ ಬೆಟ್ಟಗಳನ್ನು ಸೃಷ್ಟಿಸಿ ಅರ್ಜುನನಿಗೆ ಸಂಜೆಯೊಳಗೆ ಆ ಎರಡೂ ಬೆಟ್ಟಗಳನ್ನು ದಾನಮಾಡಿ‌ ಮುಗಿಸಲು ಹೇಳಿದ. ಅರ್ಜುನನು ಆ ಬೆಟ್ಟಗಳನ್ನು ‌ಒಡೆಯುತ್ತಾ ಬಂದವರಿಗೆಲ್ಲಾ ಹಂಚಲಾರಂಭಿಸಿದ. ಸಂಜೆಯವರೆಗೂ ಕೆಲಸವನ್ನು ಮುಂದುವರೆಸಿದರೂ ಅರ್ಧವನ್ನೂ ಕೊಟ್ಟು ಮುಗಿಸಲಾಗಲಿಲ್ಲ. ಕೊನೆಗೆ ದಿನದಂತ್ಯಕ್ಕೆ ಕಾಲು ಭಾಗದಷ್ಟು ಇನ್ನೂ ಉಳಿದಿತ್ತು. ಕೃಷ್ಣನು ಬಂದು ಅದನ್ನು ನೋಡಿ ಕರ್ಣನಾಗಿದ್ದರೆ ಇದನ್ನು ಯಾವಾಗಲೋ ಕೊಟ್ಟು ಮುಗಿಸುತ್ತಿದ್ದ ಎಂದ. ಅರ್ಜುನನಿಗೆ‌ ಸಿಟ್ಟು ಬಂದರೂ ಕರ್ಣ ಅದನ್ನು ಹೇಗೆ ಮಾಡುತ್ತಾನೆಂದ

ದಿನಕ್ಕೊಂದು ಕಥೆ 997

ದಿನಕ್ಕೊಂದು ಕಥೆ         ಹರಿದುಹೋದ ಧೋತಿ ಮತ್ತು ಹರಿದ ಅಂಗಿಯನ್ನು ಧರಿಸಿದ ವ್ಯಕ್ತಿ ತನ್ನ 15-16 ವರ್ಷದ ಮಗಳ ಜೊತೆ ದೊಡ್ಡ ಹೋಟೆಲ್ ಗೆ ಹೋದರು. ಇಬ್ಬರೂ ಕುರ್ಚಿಯ ಮೇಲೆ ಕುಳಿತಿದ್ದನ್ನು ನೋಡಿ , ವೇಟರ್ ಬಂದು ಎರಡು ನೀರಿನ  ಲೋಟ ಇಟ್ಟು ಕೇಳಿದ. ತಮಗೇನು ಬೇಕು? ಆಗ ಆ ವ್ಯಕ್ತಿ " ನನ್ನ ಮಗಳಿಗೆ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಪ್ರಥಮ ಬಂದರೆ ನಗರದ ಅತಿದೊಡ್ಡ ಹೋಟೆಲ್ ನಲ್ಲಿ ದೋಸೆ ತಿನ್ನಿಸುತ್ತೇನೆ ಎಂದು ಭರವಸೆ ನೀಡಿದ್ದೆ. ಇದು  ಆ ಭರವಸೆಯನ್ನು ನನ್ನ  ಮಗಳು ಈಡೇರಿಸಿದ್ದಾಳೆ. ದಯವಿಟ್ಟು ಮಗಳಿಗಾಗಿ ಒಂದು ದೋಸೆ ತನ್ನಿ. ? ವೇಟರ್ ಕೇಳಿದ " ಆಯಿತು ತಮಗೇನು ತರಬೇಕು?"   ನನ್ನ ಬಳಿ ಕೇವಲ ಒಂದು ದೊಸೆ ಸಾಕಾಗುವಷ್ಟು ಮಾತ್ರ ಹಣವಿದೆ ಅವಳಿಗಷ್ಟೆ ಕೊಟ್ಟರೆ ಸಾಕು.ಎಂದ.ಈ  ಮಾತು ಕೇಳಿ ವೇಟರ್ ನ ಮನಸು ಕರಗಿತು. ಮಾಲೀಕನ ಬಳಿ ಹೋಗಿ   ಅವನು ವ್ಯಕ್ತಿ ಮತ್ತು ಮಗಳ ಕಥೆ ಹೇಳಿದ.ಮುಂದುವರಿದು ಇವರಿಬ್ಬರಿಗೂ ನನ್ನ ಪರವಾಗಿ ತಿಂಡಿ  ನೀಡಬೇಕೆಂದು ನಿರ್ಧರಿಸಿದ್ದೇನೆ.  ನೀವು ಅವರ ಬಿಲ್ ಹಣವನ್ನು ನನ್ನ ಸಂಬಳದಿಂದ ಕಡಿತಗೊಳಿಸಬಹುದು. ಈ ಮಾತನ್ನು ಕೇಳಿದ ಹೊಟೆಲ್ ಮಾಲಿಕನಿಗೂ ಅವರಿಬ್ಬರ ಮೇಲೆ ಮರುಕವಾಯಿತು ಹಾಗೂ ವೆಯ್ಟರ್ ನ ಅಭಿಮಾನ ಕಂಡು  ಸಂತುಷ್ಟನಾಗಿ "ಅವರಿಬ್ಬರಿಗೆ  ಹೋಟೆಲ್ ಪರವಾಗಿ ಇಂದು ನಾವು ಅಭಿನಂದನಾ ಪಾರ್ಟಿ ಕೊಡೋಣ ಎಂದು ಮಾಲೀಕರು ಹೇಳಿದರು".   ಹೋಟೆಲ್ ಮಾಲೀಕರು ಎಲ್ಲ ಸಿಬ್ಬಂದಿಯವರನ್ನು ಸೇರ