ದಿನಕ್ಕೊಂದು ಕಥೆ 1013
*🌻ದಿನಕ್ಕೊಂದು ಕಥೆ🌻* *ಎರಡು ವಜ್ರಗಳು* ರಾಜಸ್ಥಾನದಲ್ಲಿ ವ್ಯಾಪಾರಿ ರಾಜಾಸಿಂಗ್ ಪ್ರಾಮಾಣಿಕತೆಗೆ ಹೆಸರುವಾಸಿಯಾಗಿದ್ದ. ಅವನಿಗೆ ಸ್ವಂತ ಉಪಯೋಗಕ್ಕೆ ಒಂದು ಒಂಟೆ ಖರೀದಿಸಬೇಕು ಎನ್ನುವ ಆಸೆಯಿತ್ತು. ಅದೊಂದು ದಿನ ತನ್ನ ಪಕ್ಕದ ಊರಿನಲ್ಲಿ ನಡೆಯುತ್ತಿದ್ದ ಒಂಟೆಗಳ ಜಾತ್ರೆಯ ಸುದ್ದಿ ಅವನ ಕಿವಿಗೆ ಬಿದ್ದಿತು. ಅಲ್ಲಿ ಒಂಟೆಗಳನ್ನು ನೋಡಲು ಮತ್ತು ಖರೀದಿಸಲು ಅವಕಾಶವಿತ್ತು. ತಡಮಾಡದೆ, ರಾಜಾಸಿಂಗ್ ಒಂಟೆಗಳ ಜಾತ್ರೆ ನಡೆಯುತ್ತಿದ್ದ ಸ್ಥಳಕ್ಕೆ ಬೆಳ್ಳಂಬೆಳಗ್ಗೆ ಹೋದ. ಅಲ್ಲಿ ಹತ್ತಾರು ವ್ಯಾಪಾರಿಗಳು ನೂರಾರು ಒಂಟೆಗಳನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗಾರ ಮಾಡಿ ಇಟ್ಟಿದ್ದರು. ಜಾತ್ರೆಯ ಮೂಲೆಯೊಂದರಲ್ಲಿ ಒಂಟೆ ಮಾರುತ್ತಿದ್ದವನ ಬಳಿಯಿದ್ದ ದೊಡ್ಡದೊಂದು ಒಂಟೆ ರಾಜಾಸಿಂಗ್ ಗಮನ ಸೆಳೆಯಿತು. ಅದನ್ನು ಚೆಂದಗೆ ಅಲಂಕರಿಸಿ ಹಳದಿ ಬಣ್ಣದ ದಪ್ಪ ಬಟ್ಟೆಯನ್ನು ಅದರ ಬೆನ್ನ ಮೇಲೆ ಹೊದೆಸಿದ್ದರು. ಒಂಟೆ ನೋಡಿ ಖುಷಿಯಾದ ರಾಜಾಸಿಂಗ್, ಅದನ್ನು ಕೊಳ್ಳಲು ಬಯಸಿ, ಅದರ ಮಾಲಿಕನ ಬಳಿ ಹೋಗಿ ಅದರ ದರ ಕೇಳಿದ. ಮಾಲಿಕ ಹೇಳಿದ ಬೆಲೆ ತುಸು ಹೆಚ್ಚಾಯ್ತು ಎನ್ನಿಸಿ ಅವನೊಂದಿಗೆ ಚೌಕಾಸಿಗಿಳಿದ. ಬಹಳ ಹೊತ್ತಿನವರೆಗೆ ಚೌಕಾಸಿ ನಡೆಯಿತು. ಬಳಿಕ ಒಂದು ಉತ್ತಮ ಬೆಲೆಗೆ ವ್ಯವಹಾರ ಕುದುರಿತು. ರಾಜಾಸಿಂಗ್ ಸಂತೋಷದಿಂದ ಒಂಟೆಯನ್ನು ಖರೀದಿಸಿ ಅದರ ಅಲಂಕಾರದ ಸಮೇತ ಮನೆಗೆ ಕೊಂಡೊಯ್ದ. ಮನೆಗೆ ಬಂದು, ಒಂಟೆಯನ್ನು ಮನೆಯ ಹೊರಗೆ ಕಟ್ಟಿ ಹೆಂಡತಿಯನ್ನು ಕರೆದು ಒಂಟೆ ಖರೀದಿಸಿದ