ದಿನಕ್ಕೊಂದು ಕಥೆ 1007

ದಿನಕ್ಕೊಂದು ಕಥೆ

ಸರ್ವೋಚ್ಚ ತ್ಯಾಗ..........

ಇಪ್ಪತ್ತು ವರ್ಷಗಳ ಹಿಂದೆ ಹಿಮಾಚಲ ಪ್ರದೇಶದ ಹಳ್ಳಿಯಿಂದ ದೇಶದ ರಕ್ಷಣಾ ಸಚಿವಾಲಯಕ್ಕೆ ಒಂದು ಪತ್ರ ಬಂದಿತ್ತು. ಪತ್ರ ಬರೆದವರು ಒಬ್ಬ ಸಾಮಾನ್ಯ ಶಾಲಾ ಶಿಕ್ಷಕರಾಗಿದ್ದರು. 
ಅವರ ಕೋರಿಕೆ ಹೀಗಿತ್ತು.
 "ಸಾಧ್ಯವಾದರೆ, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಏಕೈಕ ಪುತ್ರ ವೀರ ಮರಣ ಹೊಂದಿದ ಸ್ಥಳವನ್ನು ನೋಡಲು ನನ್ನ ಹೆಂಡತಿ ಮತ್ತು ನನಗೆ ಅನುಮತಿ ನೀಡಬಹುದೇ? , ಅವನ ಸಾವಿನ ಮೊದಲ ವಾರ್ಷಿಕ ದಿನ 07/7/2000 ದಂದು
ನನ್ನ ಕೋರಿಕೆ ಈಡೇರಿಸಲು ಸಾಧ್ಯವಾಗದಿದ್ದರೆ ಹಾಗು ಇದು ರಾಷ್ಟ್ರೀಯ ಭದ್ರತೆಗೆ ವಿರುದ್ಧವಾಗಿದ್ದರೆ ನಾನು ನನ್ನ ಅರ್ಜಿಯನ್ನು ಹಿಂಪಡೆಯುತ್ತೇನೆ ಎಂದಿತ್ತು......
ಪತ್ರವನ್ನು ಓದಿದ ಇಲಾಖೆ ಅಧಿಕಾರಿ, "ಅವರ ಭೇಟಿಯ ವೆಚ್ಚ ಏನೇ ಇರಲಿ, ನನ್ನ ಸಂಬಳದಿಂದ ಅದನ್ನು ಪಾವತಿಸುತ್ತೇನೆ, ಇಲಾಖೆಗೆ ಇಷ್ಟವಿಲ್ಲದಿದ್ದರೆ ಮತ್ತು ನಾನು ಶಿಕ್ಷಕ ಮತ್ತು ಅವರ ಹೆಂಡತಿಯನ್ನು ಅವರ ಏಕೈಕ ಮಗ ವೀರಮರಣ ಹೊಂದಿದ ಸ್ಥಳಕ್ಕೆ ಕರೆತರುತ್ತೇನೆ ಎಂದುಕೊಂಡು ಅವರನ್ನು ಅಲ್ಲಿಯ ಭೇಟಿಗೆ ಎಲ್ಲಾ ವ್ಯವಸ್ಥೆ ಮಾಡುವಂತೆ ಆದೇಶ ಹೊರಡಿಸುತ್ತಾರೆ.
ಮೃತ ವೀರನ ನೆನಪಿನ ದಿನದಂದು ವೃದ್ಧ ದಂಪತಿಗಳನ್ನು ಸರಿಯಾದ ಗೌರವದಿಂದ ಪರ್ವತ ಶ್ರೇಣಿಗೆ ಕರೆತರಲಾಯಿತು.  ಅವರ ಮಗ ವೀರಸ್ವರ್ಗ ಪಡೆದ ಸ್ಥಳಕ್ಕೆ ಕರೆದೊಯ್ದಾಗ ಕರ್ತವ್ಯದಲ್ಲಿದ್ದ ಎಲ್ಲಾ ಸೈನಿಕರೂ ಅವರಿಗೆ ಗೌರವಪೂರ್ವಕವಾಗಿ ನಿಂತು ನಮಸ್ಕರಿಸಿದರು.  ಆದರೆ ಒಬ್ಬ ಅಧಿಕಾರಿ ಮಾತ್ರ ಅವರಿಗೆ ಒಂದು ಹೂವನ್ನು ನೀಡಿ, ಅವರ ಪಾದಗಳನ್ನು  ಮುಟ್ಟಿ ನಮಸ್ಕರಿಸಿದನು...

“ನೀವು ಅಧಿಕಾರಿ, ನಮ್ಮ ಪಾದಗಳನ್ನು ಏಕೆ ಮುಟ್ಟುತ್ತೀರಿ?" ಎಂದು ವೃದ್ಧ ದಂಪತಿಗಳು ಕೇಳಿದಾಗ
ನಾನು ನಿಮ್ಮ ಮಗನೊಂದಿಗೆ ಇಲ್ಲಿದ್ದೆ ಮತ್ತು ರಣಾಂಗಣದಲ್ಲಿ ನಿಮ್ಮ ಮಗನ ಶೌರ್ಯವನ್ನು ನೋಡಿದ ಏಕೈಕ ವ್ಯಕ್ತಿ ನಾನು.  ಪಾಕಿಸ್ತಾನಿಗಳು ತಮ್ಮ ಎಚ್.ಎಂ.ಜಿ ಗನ್ನುಗಳಿಂದ ನಿಮಿಷಕ್ಕೆ ನೂರಾರು ಗುಂಡುಗಳನ್ನು ಹಾರಿಸುತ್ತಿದ್ದರು.  ನಮ್ಮಲ್ಲಿ ಐದು ಜನರು ಮೂವತ್ತು ಅಡಿಗಳಷ್ಟು ದೂರಕ್ಕೆ ಮುನ್ನಡೆದು ಒಂದು ಬಂಡೆಯ ಹಿಂದೆ  ನಿಂತು 'ಸರ್, ನಾನು ‘ಡೆತ್ ಚಾರ್ಜ್’ ಗೆ ಹೋಗುತ್ತಿದ್ದೇನೆ.  ನಾನು ಅವರ ಬುಲೆಟ್‌ಗಳನ್ನು ತೆಗೆದುಕೊಂಡು ಅವರ ಬಂಕರ್‌ಗೆ ಓಡಿ ಗ್ರೆನೇಡ್ ಎಸೆದು ಅವರ ಬಂಕರ್ ನಾಶ ಮಾಡುತ್ತೇನೆ.  ನಂತರ ನೀವೆಲ್ಲರೂ ಅವರ ಬಂಕರನ್ನು ವಶಪಡಿಸಿಕೊಳ್ಳಿ ಎಂದು ಹೊರಡಲು ಸಿದ್ಧವಾದಾಗ  ನಿಮ್ಮ ಮಗ "ನೀನೇನು ಹುಚ್ಚ ನಾಗಿದ್ದೀಯಾ? ನಿನಗೆ ಹೆಂಡತಿ ಮತ್ತು ಮಕ್ಕಳಿದ್ದಾರೆ. ನಾನು ಇನ್ನೂ ಅವಿವಾಹಿತ, ನಾನು ಹೋಗುತ್ತೇನೆ" ಎಂದು ಹೇಳಿ, ನೀವು ಕವರಿಂಗ್ ಮಾಡಿ ’ಎನ್ನುತ್ತಾ ಬಲವಂತವಾಗಿ ನನ್ನಿಂದ ಗ್ರೆನೇಡ್ ಕಿತ್ತುಕೊಂಡು ಹೊರಟೇ ಬಿಟ್ಟ.
ಪಾಕಿಸ್ತಾನದ ಸಿಪಾಯಿಗಳ ಗುಂಡುಗಳಿಗೆ ತನ್ನ ಎದೆಯೊಡ್ಡುತ್ತಾ ಪಾಕಿಸ್ತಾನದ ಬಂಕರ್ ತಲುಪಿ, ಗ್ರೆನೇಡ್‌ನಿಂದ ಪಿನ್ ತೆಗೆದು ಅದನ್ನು ಬಂಕರ್‌ಗೆ ಎಸೆದು, ಹದಿಮೂರು ಪಾಕಿಸ್ತಾನಿಗಳನ್ನು ಸಾವಿನ ಮನೆಗೆ ಕಳುಹಿಸಿದರು. ಆ ಪ್ರದೇಶವು ನಮ್ಮ ನಿಯಂತ್ರಣಕ್ಕೆ ಬಂದಿತು. ನಾನು ನಿಮ್ಮ ಮಗನ ದೇಹವನ್ನು ಎತ್ತಿದೆ ಸರ್. ಅವನಲ್ಲಿ ನಲವತ್ತೆರಡು ಗುಂಡುಗಳು ಇದ್ದವು. ನಾನು ಅವನ ತಲೆಯನ್ನು ನನ್ನ ಕೈಯಲ್ಲಿ ಎತ್ತಿದಾಗ ಕೊನೆಯದಾಗಿ "ಜೈ ಹಿಂದ್!" ಎಂದು ಪ್ರಾಣತ್ಯಾಗ ಮಾಡಿದ ಸರ್. 
ನಿಮ್ಮ ಮಗನ ಶವಪೆಟ್ಟಿಗೆಯನ್ನು ನಿಮ್ಮ ಹಳ್ಳಿಗೆ ತಲುಪಿಸಲು ಅನುಮತಿ ನೀಡುವಂತೆ ನಾನು ಉನ್ನತ ಅಧಿಕಾರಿಗಳನ್ನು ಕೇಳಿದೆ ಆದರೆ ಅವರು ನಿರಾಕರಿಸಿದರು.
ಈ ಹೂವುಗಳನ್ನು ಅವನ ಪಾದಕ್ಕೆ ಹಾಕುವ ಭಾಗ್ಯ ನನಗೆ ಎಂದಿಗೂ ಇರಲಿಲ್ಲವಾದರೂ, ಅವುಗಳನ್ನು ನಿಮ್ಮ ಬಳಿ ಇಡುವ ಭಾಗ್ಯ ನನಗೆ ಈಗ ಸಿಕ್ಕಿದೆ‌ ಎಂದು ಕಣ್ತುಂಬಿ ಹೇಳಿದರು.
ಶಿಕ್ಷಕನ ಹೆಂಡತಿ ತನ್ನ ಸೆರಗಿನ ಅಂಚಿನಲ್ಲಿ ಕಣ್ಣೀರು ಒರೆಸಿಕೊಂಡರು. ಆದರೆ ಶಿಕ್ಷಕ ಅಳಲಿಲ್ಲ.
 ಅವರು “ನನ್ನ ಮಗ ರಜೆಯ ಮೇಲೆ ಬಂದಾಗ ಧರಿಸಲೆಂದು ನಾನು ಅಂಗಿಯೊಂದನ್ನು ಖರೀದಿಸಿದ್ದೆ. ಆದರೆ ಅವನು ಮನೆಗೆ ಬಂದಿಲ್ಲ ಮತ್ತು ಎಂದಿಗೂ ಬರುವುದೂ ಇಲ್ಲ.  ಹಾಗಾಗಿ ಅವನು ಸತ್ತ ಸ್ಥಳದಲ್ಲಿ ಅದನ್ನು ಇಡಲು ನಾನು ತಂದಿದ್ದೇನೆ.  ಬೇಟಾ, ಅದನ್ನು ಅವನಿಗಾಗಿ ನೀವು ಧರಿಸಬೇಕು? " ಎಂದರು.....
 ಆ ಭಾರತ ಮಾತೆಯ ವೀರ ಪುತ್ರ ಕಾರ್ಗಿಲ್ ಹೀರೋನ  ಹೆಸರು ಕ್ಯಾಪ್ಟನ್ ವಿಕ್ರಮ್ ಬಾತ್ರಾ ಮತ್ತು
ಅವರ ತಂದೆಯ ಹೆಸರು ಗಿರಿಧಾರಿ ಲಾಲ್ ಬಾತ್ರಾ.
ಅವರ ತಾಯಿಯ ಹೆಸರು ಕಮಲ್ ಕಾಂತ.

ಸ್ನೇಹಿತರೇ.....
ಇಂತಹ ವೀರರೇ ನಮ್ಮ ನಿಜವಾದ  ಹೀರೋಗಳೇ ಹೊರತು ಮೇಕಪ್ ಧರಿಸಿ ಮರಗಳ ಸುತ್ತುವ ನಕಲಿ ಬಾಲಿವುಡ್ ಹೀರೋಗಳಲ್ಲ...
ಇಂತಹ ದೇಶದ ಅಮೂಲ್ಯ ವೀರ ಸುಪುತ್ರರ ಸರ್ವೋಚ್ಚm ತ್ಯಾಗದ ಬಗ್ಗೆ ಅರಿವು ಮೂಡಿಸಲು ದಯವಿಟ್ಟು ಇದನ್ನು ನಿಮ್ಮ ಎಲ್ಲಾ ಸ್ನೇಹಿತ ಮತ್ತು ಬಂಧುಗಳು ವಲಯದಲ್ಲಿ ಹಂಚಿಕೊಳ್ಳಿ.....

ಕೃಪೆ: ವಾಟ್ಸ್ ಆ್ಯಪ್.
ಸಂಗ್ರಹ: ವೀರೇಶ್ ಅರಸಿಕೆರೆ.

Comments

Popular posts from this blog

ದಿನಕ್ಕೊಂದು ಕಥೆ 1031

ದಿನಕ್ಕೊಂದು ಕಥೆ 1055

ದಿನಕ್ಕೊಂದು ಕಥೆ 1059