ದಿನಕ್ಕೊಂದು ಕಥೆ 1116
*🌻ದಿನಕ್ಕೊಂದು ಕಥೆ🌻* *ಹೊಸ ಅಧ್ಯಾಯ* " ಅಮ್ಮಾ, ಅಲ್ಲಮ್ಮಾ..ಎರಡು ತಿಂಗಳುಗಳ ಹಿಂದೆಯೇ ನಿನ್ನ ಔಷಧಿ ಗುಳಿಗೆಗಳು ಖಾಲಿಯಾಗಿತ್ತಲ್ಲವಾ? ನಿನ್ನ ಅಡ್ರೆಸ್ಸ್ ಗೆ ಕಳಿಸಿಕೊಡುತ್ತೇನೆ ಎಂದರೂ ಯಾಕೆ ಬೇಡಾ ಅಂದೆ. ಅಪ್ಪ ಏನಾದರೂ ಆ ಔಷಧಿ ತೆಗೆದುಕೊಳ್ಳುವುದಕ್ಕೂ ಅಡ್ಡಗಾಲು ಹಾಕಿದ್ರಾ? ನಿನ್ನ ಹಣೆಬರಹವೋ, ದುರಾದೃಷ್ಟವೋ ಒಂದೂ ನನಗೆ ಅರ್ಥವಾಗುತ್ತಿಲ್ಲ. ನಾನಿಲ್ಲಿ ಎಷ್ಟೇ ಚೆನ್ನಾಗಿದ್ದರೂ ನಿನ್ನನ್ನು ನೆನಪಿಸಿಕೊಂಡಾಗ ಕೆಲವೊಮ್ಮೆ ನಾನೂ ಡಿಸ್ಟರ್ಬ್ ಆಗಿಬಿಡುತ್ತೇನೆ. ಅಮ್ಮಾ..ಮುಂದಿನ ತಿಂಗಳು ಎರಡು ವಾರ ನಾನು ರಜ ಹಾಕಿದ್ದೇನೆ. ಒಂದು ವಾರ ಅತ್ತೆ ಮಾವನ ಜೊತೆಗೆ ಇದ್ದು ಬರುತ್ತೇನೆ. ಇನ್ನೊಂದು ವಾರ ನಿನ್ನ ಹಾಗೂ ಅಪ್ಪನ ಜೊತೆಯಲ್ಲಿ ಇರಬೇಕೆಂದು ಅಂದುಕೊಂಡಿದ್ದೇನೆ." " ತುಂಬಾ ಖುಷಿಯಾಯಿತು ಮಧು. ನನಗೂ ನಿನ್ನ ಜೊತೆ ನಾಲ್ಕಾರು ದಿವಸಗಳು ಸಮಯ ಕಳೆಯಬೇಕೆಂಬ ಆಸೆಯಿದೆ. " ಸಂತಸದಿಂದ ನುಡಿದರು ಅಮ್ಮ ವತ್ಸಲಾ. ವತ್ಸಲಾ ಹಾಗೂ ಮಾಧವ ದಂಪತಿಗೆ ಇರುವುದು ಒಬ್ಬಳೇ ಮಗಳು ಮಧು. ಮದುವೆಯಾಗಿ ದೂರದ ಊರಿನಲ್ಲಿ ಗಂಡನ ಜೊತೆಗೆ ಹಾಯಾಗಿದ್ದಾಳೆ. ವತ್ಸಲಾ ಮಾತ್ರ ಇತ್ತೀಚಿನ ವರ್ಷಗಳಲ್ಲಿ ಡಿಪ್ರೆಶನ್ ದಿಂದ ಒದ್ದಾಡುತ್ತಿದ್ದಾಳೆ. ಪತಿ ಮಾಧವ ಸಭ್ಯಸ್ಥನೇನೋ ನಿಜ. ಆದರೆ ಜೀವನದುದ್ದಕ್ಕೂ ತನ್ನದೇ ಆದ ಕೆಲವು ಗುಣಗಳನ್ನು ಬೆಳೆಸಿಕೊಂಡಿದ್ದ. ತಾನು ಹೇಳಿದಂತೆ ನಡೆಯಬೇಕು, ಎಲ್ಲವೂ ತನ್ನ ನೇರದಲ್ಲೇ ಇರಬೇಕು...ಈ ತರಹದ ಸ್ವಭಾವದವನು