ದಿನಕ್ಕೊಂದು ಕಥೆ. 594
*🌻ದಿನಕ್ಕೊಂದು ಕಥೆ🌻 ಸೀರೆ ಕಟ್ಟಿದ್ದಾಳೆಂದು ಹಳ್ಳಿ ಹೆಂಗಸು ಎಂದು “ಸುಧಾ ಮೂರ್ತಿ”ಯನ್ನು ಹೀಯಾಳಿಸಿದರು..! ಅದಕ್ಕೆ ಅವರು ಕೊಟ್ಟ ಕೌಂಟರ್ ಹೈಲೈಟ್..!* ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾಮೂರ್ತಿ ಬಗ್ಗೆ ಗೊತ್ತಲ್ಲವೇ. ಇನ್ಫೋಸಿಸ್ ಕೋ ಫೌಂಡರ್ ನಾರಾಯಣ ಮೂರ್ತಿ ಅವರ ಧರ್ಮಪತ್ನಿ. ಇವರು ಗೇಟ್ಸ್ ಫೌಂಡೇಷನ್ ಕಾರ್ಯಕ್ರಮಗಳಲ್ಲೂ ಪಾಲುದಾರರಾಗಿದ್ದಾರೆ. ಆದರೆ ಸುಧಾಮೂರ್ತಿ ಒಂದು ಪುಸ್ತಕ ಬರೆದಿದ್ದಾರೆ. ತನ್ನ ಜೀವನದಲ್ಲಿ ನಡೆದ ಹಲವು ಸಂಗತಿಗಳನ್ನು ಅದರಲ್ಲಿ ಪ್ರಸ್ತಾಪಿಸಿದ್ದಾರೆ. “ಥ್ರಿ ತೌಸಂಡ್ ಸ್ಟಿಚೆಸ್: ಆರ್ಡಿನರಿ ಪೀಪಲ್, ಎಕ್ಸ್‌ಟ್ರಾ ಆರ್ಡಿನರಿ ಲೈಫ್” ಎಂಬ ಪುಸ್ತಕವನ್ನು ಬರೆದ ಅವರು ತನ್ನ ವಿಷಯಗಳನ್ನು ಅದರಲ್ಲಿ ತಿಳಿಸಿದ್ದಾರೆ. ಕೃತಿಯಲ್ಲಿ ತನ್ನ ಜೀವನದಲ್ಲಿ ನಡೆದ ಒಂದು ಮುಖ್ಯವಾದ ಘಟನೆಯ ಬಗ್ಗೆ ವಿವರಿಸಿದ್ದಾರೆ. ಅದರ ಬಗ್ಗೆ ಈಗ ತಿಳಿದುಕೊಳ್ಳೋಣ. ಸುಧಾಮೂರ್ತಿ ಒಮ್ಮೆ ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದರು. ಅದಕ್ಕಾಗಿ ಬಿಜಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡಿದ್ದರು. ಹಾಗಾಗಿ ಲಂಡನ್‌ನ ಹೀತ್ರೂ ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆದರೆ ಸಾಮಾನ್ಯವಾಗಿ ಅವರು ಸೀರೆಯನ್ನೇ ಉಡುತ್ತಾರೆ. ಪ್ರಯಾಣದಲ್ಲಿದ್ದರೆ ಚೂಡಿದಾರ ಹಾಕಿಕೊಳ್ಳುತ್ತಾರೆ. ಆ ಸಮಯದಲ್ಲಿ ಆ ಡ್ರೆಸ್ ಅನುಕೂಲಕರವಾಗಿರುತ್ತದೆಂದು ಅವರು ಭಾವಿಸಿದರು. ಹಾಗಾಗಿ ಆ ದ