ದಿನಕ್ಕೊಂದು ಕಥೆ 893
*🌻ದಿನಕ್ಕೊಂದು ಕಥೆ🌻* *ಮಹಾರಾಜರು ತಿನ್ನುತ್ತಿದ್ದುದು ಮೃಷ್ಟಾನ್ನವೋ? ತಂಗಳನ್ನವೋ?* ಮಹಾರಾಜರು ಏಕೆ ತಂಗಳನ್ನ ತಿನ್ನುತ್ತಿದ್ದರು ಎಂಬುದನ್ನು ಅರಿಯಲು ಇಲ್ಲಿರುವ ನಿಜಜೀವನದ ಪ್ರಸಂಗವನ್ನು ಓದಬೇಕು. ಇಲ್ಲೊಂದು ಪ್ರೇಮ್ ಕಹಾನಿ ಇದೆ. ಆತ ಮಾಜಿ ಮಹಾರಾಜರ ಒಬ್ಬನೇ ಮಗ. ಆಗರ್ಭ ಶ್ರೀಮಂತ. ಆಕೆ ಬಡವರ ಮನೆಯ ಹೆಣ್ಣುಮಗಳು. ಅಪರೂಪದ ರೂಪವತಿ ಮತ್ತು ಒಳ್ಳೆಯ ವಿದ್ಯಾರ್ಥಿನಿ. ಕಾಲೇಜಿನಲ್ಲಿ ಕಂಡಾಕ್ಷಣವೇ ರಾಜಕುಮಾರ ಮರುಳಾದ. ಪ್ರೀತಿಸಿದ. ಮದುವೆಯ ಪ್ರಸ್ತಾಪವನ್ನೂ ಮಾಡಿದ. ಆದರೆ ಎರಡೂ ಕಡೆಯಿಂದ ವಿರೋಧಗಳು ಬಂದವು. ಆದರೆ ರಾಜಕುಮಾರ ಪಟ್ಟು ಹಿಡಿದದ್ದರಿಂದ ಮದುವೆ ನಡೆದೇ ಹೋಯಿತು. ಮದುವೆಗೆ ಮುಂಚೆ ಹುಡುಗಿಯ ತಂದೆ ‘ನಮ್ಮ ಮಗಳು ಬೆಳೆದು ಬಂದ ವಾತಾವರಣವೇ ಬೇರೆ. ಈಗ ಮಹಾರಾಜರ ಮನೆಗೆ ಸೇರಿದ ಮೇಲೆ ಆಕೆಯಿಂದ ಏನಾದರೂ ತಪ್ಪಾದರೆ, ಮಹಾರಾಜರು ಸಿಟ್ಟಿನಲ್ಲಿ ಏನೂ ಕ್ರಮ ತೆಗೆದುಕೊಳ್ಳಬಾರದು. ಆಕೆಯ ವಿವರಣೆ ಕೇಳಿ ನಂತರ ಕ್ರಮ ತೆಗೆದುಕೊಳ್ಳಬೇಕು’ ಎಂಬ ಹಾಕಿದ್ದರಂತೆ. ಹುಡುಗಿ ಬುದ್ಧಿವಂತೆಯಾದದ್ದರಿಂದ ಆಕೆ ಮಾವನ ಮನೆಯಲ್ಲಿ ಚೆನ್ನಾಗಿ ಹೊಂದಿಕೊಂಡಳು. ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಒಂದು ದಿನ ಮಹಾರಾಜರು ಊಟಕ್ಕೆ ಕುಳಿತಿದ್ದಾಗ ಸೊಸೆಯೇ ಬಡಿಸುತ್ತಿದ್ದಳು. ಬೇಸಿಗೆಯ ಮಧ್ಯಾಹ್ನ. ಬಿಸಿಬಿಸಿ ಮೃಷ್ಟಾನ್ನ ಭೋಜನ. ಮಹಾರಾಜರು ‘ಉಫ್ ಉಫ್’ ಎನ್ನುತ್ತ ಊಟವನ್ನು ಸವಿಯುತ್ತಿದ್ದರು. ಆಗ ಒಬ್ಬ ಭಿಕ್ಷುಕ ಅರಮನೆಯ ಮುಂದೆ ನಿಂತು ಗಟ್ಟಿಯಾಗಿ