ದಿನಕ್ಕೊಂದು ಕಥೆ 924
*🌻ದಿನಕ್ಕೊಂದು ಕಥೆ🌻* '' ಸರ್... ಹೆಂಡ್ತಿ ಗರ್ಭಿಣಿಯಾದಳು. ಸ್ವಲ್ಪ ತಡವಾಗಿ ಸಾಕು ಅಂತ ನಾವು ನಿರ್ಧರಿಸಿದ್ದೆವು. ಆದರೆ ಎಲ್ಲೋ ಎಡವಟ್ಟಾಗೋಯ್ತು....... ಮಾತ್ರೆಗಳನ್ನೂ ನಂಬಲಾಗದಾಯಿತು...... ಇದು ಆರನೇಯ ತಿಂಗಳು... ನನಗೆ ರಜೆ ಇಲ್ಲ.... ಆಗ ಆಕೆ ಒಂಟಿಯಾಗುತ್ತಾಳೆ...." ಹರೀಶನಿಗೆ ಯಾವಾಗಲೂ ಪರಿಹಾರಗಳನ್ನು ಸೂಚಿಸುತ್ತಿದ್ದ ಮಾಸ್ಟರ್ ಆಗಿರುವ ವಿನಾಯಕ ಮಾಸ್ಟರ್ ಹತ್ತಿರ ಆತ ತನಗೆದುರಾದ ಸಮಸ್ಯೆಯನ್ನು ಹೇಳಿಕೊಂಡ.... ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ. ಏಳನೆಯ ತಿಂಗಳು ಅಡ್ಮಿಟ್ ಮಾಡಬೇಕು. ಪ್ರಸವಾನಂತರದ ಚಿಕಿತ್ಸೆಗಳ ಬಳಿಕ ಮನೆತಲುಪಿಸುತ್ತಾರೆ. ಅಡ್ರೆಸ್ ಮತ್ತು ಫೋನ್ ನಂಬರ್ ಬರೆದುಕೋ.......... ಆತ ಅಡ್ರೆಸ್ ಮತ್ತು ಫೋನ್ ನಂಬರ್ ಬರಕ್ಕೊಂಡು ಮಾಸ್ಟರ್ ಗೆ ಥ್ಯಾಂಕ್ಸ್ ಹೇಳಿ ಹಿಂತಿರುಗಿದ...... ತಿಂಗಳುಗಳ ನಂತರ ..... ಆತ ಪುನಃ ಮಾಸ್ಟರನ್ನು ಭೇಟಿಯಾಗುತ್ತಾನೆ..... '' ಸರ್ ... ಮಗುವಿಗೆ ನಾಲ್ಕು ತಿಂಗಳಾಗಿದೆ..... ಪತ್ನಿಗೆ ರಜೆ ಮುಂದುವರಿಸಲು ಸಾಧ್ಯವಿಲ್ಲ.... ನನಗೆ ಪ್ರಮೋಶನೂ ಆಗಿದೆ....." ಮಾಸ್ಟರ್ ಗೆ ವಿಷಯ ಅರ್ಥವಾಯಿತು. ಮಾಸ್ಟರ್ - ಹೆದರಬೇಡ ಒಂದು ಪ್ಯಾಕೇಜ್ ಇದೆ. ಮೂರು ವಯಸಿನವರೆಗೆ ಮಗುವನ್ನು ನೋಡಿಕೊಳ್ಳುವ ಒಂದು ಪ್ಯಾಕೇಜ್..... ಬೆಳಿಗ್ಗಿನಿಂದ ಸಂಜೆವರೆಗೂ ನೋಡಿಕೊಳ್ಳುತ್ತಾರೆ.... ಮತ್ತೆ ಫುಲ್ ಟೈಮ್ ಬೇಕಾದರೆ ಅದಕ್ಕೆ ಸ್ವಲ್ಪ ರೇಟು