ದಿನಕ್ಕೊಂದು ಕಥೆ 947
*🌻ದಿನಕ್ಕೊಂದು ಕಥೆ🌻* *ಏಕಾಂಗಿಯಾಗಿ 300 ಚೀನಿ ಸೈನಿಕರನ್ನು ಹೊಡೆದುರುಳಿಸಿದ್ದ ಜಸ್ವಂತ್‍ಸಿಂಗ್ ಯಶೋಗಾತೆಗೆ ಸ್ವತಃ ಚೀನೀಯರೇ ತಲೆಬಾಗಿದ್ದರು! ಈ ಯೋಧನ ಸಾಹಸಕ್ಕೊಂದು ಸೆಲ್ಯೂಟ್…* ನಮ್ಮ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಕತೆಯನ್ನು ಕೇಳುತ್ತಲೇ ಕಣ್ಣಂಚಿನಲ್ಲಿ ನೀರು ತುಂಬಿಕೊಳ್ಳುತ್ತೆ. ನಾವು ಇಲ್ಲಿ ಐಷಾರಾಮಿ ಜೀವನ ನಡೆಸುತ್ತಾ ನಮಗಿಷ್ಟ ಬಂದಂತೆ ಜೀವನ ನಡೆಸುತ್ತಿದ್ದೇವೆ. ಆದರೆ ನಮ್ಮ ದೇಶ ಕಾಯುವ ಯೋಧರು.. ಕುಟುಂಬ, ನಿದ್ದೆ, ಊಟ ಎಲ್ಲವನ್ನೂ ತ್ಯಜಿಸಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುತ್ತಾರೆ. ಎಷ್ಟೇ ಚಳಿ ಇರಲಿ, ಮಳೆ ಇರಲಿ ದೇಶದ ರಕ್ಷಣೆಯ ವಿಚಾರ ಬಂದಾಗ ಗಡಿ ಬಿಟ್ಟು ಒಂದಿಂಚೂ ಕಾಲು ಹಿಂದೆ ಸರಿಸಲ್ಲ. ದೇಶ ಮೊದಲು ಎಂದು ತನ್ನ ಪ್ರಾಣವನ್ನೂ ಲೆಕ್ಕಿಸದೆ ದೇಶ ಕಾಯುತ್ತಿರುತ್ತಾರೆ. ಇದು ನಮ್ಮ ಯೋಧರ ಕತೆ.. ಅಂತಹ ಪುಣ್ಯದ ಕೆಲಸ ಮಾಡೋಕೆ ನಿಜವಾಗಿಯೂ ಅಂತಹ ಮಹಾನ್ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ಇಂತಹ ವೀರರಲ್ಲೊಬ್ಬರಾದ ಅರುಣಾಚಲ ಪ್ರದೇಶದ ತವಂಗ್ ಜಿಲ್ಲೆಯ ನುರಾನಂಗ್ ಎಂಬಲ್ಲಿ ಸುಮಾರು 300 ಚೀನಿ ಸೈನಿಕರನ್ನು ಹೊಡೆದುರಿಳಿಸಿದ ಜಸ್ವಂತ್ ಸಿಂಗ್ ರಾವತ್ ರನ್ನು ನಾವು ನೆನೆಪಿಸಲೇ ಬೇಕು. ಹೌದು ಅಂದು 1962 ಯುದ್ದದ ಕೊನೆಯ ಸಂದರ್ಭ ಆಗಿತ್ತು. ಚೀನಿ ಸೈನಿಕರು ಭಾರತೀಯ ಸೈನಿಕರ ಎದುರು ಪ್ರಬಲವಾಗಿದ್ದರು. ಆ ಸಂದರ್ಭದಲ್ಲಿ ಭಾರತದ ಪ್ರಧಾನಿಯಾಗಿದ್ದ ನೆಹರೂವಿನ ದುರಾಡಳಿತದಿಂದಾಗಿ ಸೈನಿಕರಿಗೆ ಬೇಕಾದ ಸವಲತ್ತುಗಳನ್ನು ಕೂಡ