ದಿನಕ್ಕೊಂದು ಕಥೆ 996
ದಿನಕ್ಕೊಂದು ಕಥೆ ಕೃಪೆ:ಕನ್ನಡ_ಸಂಪದ ದಯಾನಂದ ಸರಸ್ವತಿ ದಯಾನಂದ ಸರಸ್ವತಿ ಅವರು ಆರ್ಯ ಸಮಾಜದ ಸಂಸ್ಥಾಪಕರಾಗಿ ಮತ್ತು ಭಾರತೀಯ ಸಮಾಜದ ಧಾರ್ಮಿಕ ಸುಧಾರಕರಾಗಿ, ಹಿಂದೂ ಧರ್ಮದ ಪುನರುತ್ಥಾರಕರಾಗಿ ಅವರು ಸ್ಮರಣೀಯರಾಗಿದ್ದಾರೆ. ಇಂದು ಅವರ ಸಂಸ್ಮರಣಾ ದಿನ. ದಯಾನಂದ ಸರಸ್ವತಿ ಗುಜರಾತಿನ ಟಂಕಾರಾ ಎಂಬ ಗ್ರಾಮದಲ್ಲಿ 1824ರ ಫೆಬ್ರವರಿ 12ರಂದು ಜನಿಸಿದರು. ಅವರ ಮೊದಲ ಹೆಸರು ಮೂಲಶಂಕರ ಎಂದು. ತಂದೆ ಕೃಷ್ಣಜೀ ಲಾಲ್ಜಿ ಕಪಾಡಿ. ತಾಯಿ ಯಶೋದಾಬಾಯಿ. ಅವರದು ದಾನ ಧರ್ಮಗಳಿಗೆ ಹೆಸರಾದ ಶ್ರೀಮಂತ ಮನೆತನ. ಕುಲಪದ್ಧತಿಯಂತೆ ಬಾಲ್ಯದಲ್ಲಿಯೇ ಮೂಲ ಶಂಕರನ ವೇದಾಧ್ಯಯನ ಸಾಂಗವಾಗಿ ನೆರವೇರಿತು. ಶಿವರಾತ್ರಿಯ ದಿನ ಶಿವ ಲಿಂಗದ ಮೇಲೇರಿ ಅಕ್ಷತೆ ಕಾಳನ್ನು ಆರಿಸಿ ತಿನ್ನುತ್ತಿದ್ದ ಇಲಿ, ಪ್ರೀತಿಯ ಚಿಕ್ಕಪ್ಪ ಮತ್ತು ತಂಗಿಯ ಅಕಾಲಮೃತ್ಯು ಈ ಘಟನೆಗಳಿಂದ ಮೂಲಶಂಕರನ ಹೃದಯದಲ್ಲಿ ಬಗೆಬಗೆಯ ಪ್ರಶ್ನೆಗಳು ಎದ್ದುವು. ಜೀವಿತದಲ್ಲಿ ಇವಕ್ಕೆ ಉತ್ತರ ಪಡಯಲೇಬೇಕೆಂದು ಬಾಲಕ ದೃಡಸಂಕಲ್ಪ ಮಾಡಿದ. ಅದಕ್ಕಾಗಿ ತಂದೆ ತಾಯಿ ಸಂಪತ್ತು ಎಲ್ಲವನ್ನೂ ತೊರೆದ. ದುರ್ಗಮ ಅರಣ್ಯಗಳಲ್ಲಿ ಅಲೆದು ಯೋಗಿಗಳಿಂದ ಯೋಗ್ಯವಿದ್ಯೆಯ ಅನೇಕ ರಹಸ್ಯಗಳನ್ನರಿತ. 1848 ರಲ್ಲಿ ಪೂರ್ಣಾನಂದ ಸರಸ್ವತಿಗಳು ಈ ಬ್ರಹ್ಮಚಾರಿಗೆ ಸಂನ್ಯಾಸದೀಕ್ಷೆಯನ್ನು ಕೊಟ್ಟು ದಯಾನಂದ ಸರಸ್ವತಿ ಎಂದು ಹೆಸರಿಟ್ಟರು. 1858 ರಲ್ಲಿ ದಯಾನಂದರು ಮಥುರೆಗೆ ಬಂದು ವಿರಜಾನಂದ ಸರಸ್ವತಿಗಳಲ್ಲಿ ವೇದವೇದಾಂಗಗಳನ್ನು ಅಧ್ಯಯನ ಮಾಡಿದರ